Taurus: ವೃಷಭ ರಾಶಿಯ ಬಗ್ಗೆ ಈ ನಾಲ್ಕು ಮೂಲಭೂತ ಸಂಗತಿಗಳು ನಿಮಗೆ ತಿಳಿದಿರಲಿ | Zodiac sign know four fundamental things about taurus sign


Taurus: ವೃಷಭ ರಾಶಿಯ ಬಗ್ಗೆ ಈ ನಾಲ್ಕು ಮೂಲಭೂತ ಸಂಗತಿಗಳು ನಿಮಗೆ ತಿಳಿದಿರಲಿ

ವೃಷಭ ರಾಶಿಯ ಬಗ್ಗೆ ಈ ನಾಲ್ಕು ಮೂಲಭೂತ ಸಂಗತಿಗಳು ನಿಮಗೆ ತಿಳಿದಿರಲಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿಗಳಲ್ಲಿ ಒಂದೊಂದೂ ಭಿನ್ನವಾಗಿರುತ್ತದೆ. ತನ್ನದೇ ಆದ ವೈಶಿಷ್ಯತೆ ಹೊಂದಿರುತ್ತದೆ. ಜಾತಕದ ಪ್ರಕಾರ ಬಂದಿರುವ ರಾಶಿಗೆ ಅನುಗುಣವಾಗಿ ಅವರವರ ಗುಣ ಸ್ವಭಾವಗಳು ರೂಪುಗೊಂಡಿರುತ್ತವೆ. ಅದರಂತೆ ಜನ ತಮ್ಮ ಜೀವನದಲ್ಲಿ, ಈ ಸಮಾಜದಲ್ಲಿ ಇತರರೊಂದಿಗೆ ನಡೆದುಕೊಳ್ಳುತ್ತಾರೆ.

ವೃಷಭ ರಾಶಿಯವರು ಹೃದಯ ಶ್ರೀಮಂತರು ಮತ್ತು ವಿಲಾಸಿ ಜೀವನ ಪ್ರಿಯರು. ಅವರು ಗ್ಲಾಮರಸ್ ಆಗಿ, ಭವ್ಯವಾಗಿ, ದಿವ್ಯವಾಗಿ ಇರುತ್ತಾರೆ. ಇವರಿಗೆ ಉನ್ನತವಾದದ್ದು ಅಂದ್ರೆ ಇಷ್ಟ. ಅದನ್ನು ಸಾಧಿಸಿಕೊಳ್ಳಲು ಎಷ್ಟು ಬೇಕಾದರೂ ಶ್ರಮ ಹಾಕಲು ಸಿದ್ಧವಾಗುತ್ತಾರೆ.

ಏಪ್ರಿಲ್ 20 ರಿಂದ ಮೇ 20 ರ ನಡುವೆ ಜನಿಸಿರುವ ವೃಷಭ ರಾಶಿಯವರು ಧೈರ್ಯವಂತರಾಗಿರುತ್ತಾರೆ. ನಾಯಕರಾಗಿರುತ್ತಾರೆ. ಇವರು ಶಾಂತ ಸ್ವಭಾವದವರು. ಇವರು ಜೀವನದಲ್ಲಿ ಸದಾ ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಕಷ್ಟಗಳನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇವರಿಗೆ ಬಂದಿರುತ್ತದೆ. ಇವರ ಬಗ್ಗೆ ಇನ್ನೂ ನಾಲ್ಕು ಕುತೂಹಲಕಾರಿ ಸಂಗತಿಗಳನ್ನು ತಿಳಿಯೋಣ ಬನ್ನೀ.

1. ವೃಷಭ ರಾಶಿಯವರು (Taurus) ಉನ್ನತವಾದುದನ್ನೇ ಬಯಸುತ್ತಾರೆ. ಮನೆಯನ್ನು ಒಪ್ಪಓರಣವಾಗಿ ಇಟ್ಟುಕೊಳ್ಳುವುದರಿಂದ ಹಿಡಿದು ಫ್ಯಾನ್ಸಿ ಸಂಗತಿಗಳು ಇಷ್ಟವಾಗುತ್ತವೆ. ಆಗಾಗ ಯಾವುದಾದರೂ ವಿಷಯಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ.

2. ವೃಷಭ ರಾಶಿಯವರು ಮುಕ್ತವಾಗಿ ಬೆರೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ವೃಷಭ ರಾಶಿಯವರೊಂದಿಗೆ ಸ್ನೇಹ ಬೆಳೆಸಲು ಸ್ವಲ್ಪ ಕಷ್ಟವಾಗುತ್ತದೆ. ಅವರು ತುಂಬಾ ಹೆಚ್ಚಾಗಿ ಬೆರೆಯುವುದಿಲ್ಲ ಮತ್ತು ಆದರಣೀಯರು ಆಗಿರುವುದಿಲ್ಲ. ಅವರಿಗೆ ಜನರ ಬಗ್ಗೆ ವಿಶ್ವಾಸ ಹೊಂದಲು ತ್ರಾಸದಾಯವಾಗಿರುತ್ತದೆ. ವೃಷಭ ರಾಶಿಯವರು ಬೇರೆಯವರ ಜೊತೆ ಬೆರೆಯುವುದಕ್ಕೆ ಮುನ್ನ ಅವರ ಬಗ್ಗೆ ಕೂಲಂಕಶವಾಗಿ ಅಧ್ಯಯನ ಮಾಡಿ, ತುಂಬಾ ಸಮಯ ತೆಗೆದುಕೊಂಡು, ಅಳೆದೂ ಸುರಿದು ಒಂದು ನಿರ್ಧಾರಕ್ಕೆ ಬಂದ ಮೇಲಷ್ಟೇ ಮುಂದುವರಿಯುತ್ತಾರೆ.

3. ವೃಷಭ ರಾಶಿಯವರು ಒಂದು ಸುರಕ್ಷಿತ ಮತ್ತು ಸ್ಥಿರ ಸಂಬಂಧವನ್ನು ಬಯಸುತ್ತಾರೆ. ಸಾಮಾನ್ಯವಾಗಿ ಅವರು ಅಸುರಕ್ಷಿತ ಸ್ವಭಾವದವರಲ್ಲ. ಯಾರ ಜೊತೆಗಾದರೂ ಸಂಬಂಧ ಬೆಳೆಸಬೇಕು ಅಂದರೆ ಸುರಕ್ಷಿತ ಮತ್ತು ದೀರ್ಘಕಾಲೀನ ಸಂಬಂಧ ಹೊಂದಲು ಹಾತೊರೆಯುತ್ತಾರೆ.

4. ಇವರು ಸ್ವಲ್ಪ ಜಿಗುಟು ಸ್ವಭಾವದವರೂ ಆಗಿರುತ್ತಾರೆ. ವೃಷಭ ರಾಶಿಯವರು ತುಂಬಾ ಸದೃಢವಾದ ನೋಟ ಹೊಂದಿರುತ್ತಾರೆ. ಅವರು ತಮ್ಮ ಮನಸ್ಸನ್ನು ಬದಲಿಸಲು ಇಷ್ಟಪಡುವುದಿಲ್ಲ. ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿರುತ್ತಾರೆ. ಯಾವುದೇ ವಿಷಯದ ಬಗ್ಗೆ ಒಂದು ಸ್ಪಷ್ಟ ಅಂದಾಜು ಅವರಿಗೆ ಇರುತ್ತದೆ. ಹಾಗಾಗಿ ಅವರೊಂದಿಗೆ ರಾಜಿ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.

(zodiac sign know four fundamental things about taurus sign)

TV9 Kannada


Leave a Reply

Your email address will not be published. Required fields are marked *