TCS FY22 Q4 Results: ಟಿಸಿಎಸ್ ನಾಲ್ಕನೇ ತ್ರೈಮಾಸಿಕ ಲಾಭ 9926 ಕೋಟಿ ರೂಪಾಯಿ; 22 ರೂ. ಡಿವಿಡೆಂಡ್ | TCS FY22 Q4 Profit At Rs 9926 Crore And Announced Dividend Of Rs 22


TCS FY22 Q4 Results: ಟಿಸಿಎಸ್ ನಾಲ್ಕನೇ ತ್ರೈಮಾಸಿಕ ಲಾಭ 9926 ಕೋಟಿ ರೂಪಾಯಿ; 22 ರೂ. ಡಿವಿಡೆಂಡ್

ಸಾಂದರ್ಭಿಕ ಚಿತ್ರ

2021- 22ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಟಿಸಿಎಸ್ (TCS) ಫಲಿತಾಂಶಗಳು ಅಂದಾಜುಗಳಿಗೆ ಅನುಗುಣವಾಗಿ ಬಂದಿವೆ. ಏಪ್ರಿಲ್ 11ನೇ ತಾರೀಕಿನ ಸೋಮವಾರದಂದು ಪ್ರಕಟಿಸಿರುವ ಫಲಿತಾಂಶದಲ್ಲಿ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಒಂದಾದ ಟಿಸಿಎಸ್ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇ 7.3ರಷ್ಟು ಹೆಚ್ಚುವರಿಯಾಗಿ ದಾಖಲಿಸಿದೆ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಅದು ರೂ. 9926 ಕೋಟಿ ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪೆನಿಯು ನಿವ್ವಳ ಲಾಭವು ರೂ. 9246 ಕೋಟಿ ಇತ್ತು. ಪರಿಶೀಲನೆಯಲ್ಲಿ ಇರುವ ತ್ರೈಮಾಸಿಕದ ಒಟ್ಟು ಆದಾಯವು ವರ್ಷದಿಂದ ವರ್ಷಕ್ಕೆ ಶೇ 16ರಷ್ಟು ಹೆಚ್ಚಳವಾಗಿ, 50,591 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 43706 ಕೋಟಿ ರೂಪಾಯಿ ಆಗಿತ್ತು.

ಫೈಲಿಂಗ್ ಮೂಲಕ ಕಂಪೆನಿಯು ನಿರ್ದೇಶಕರು 1 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 22 ರೂಪಾಯಿ ಅಂತಿಮ ಲಾಭಾಂಶವನ್ನು ಶಿಫಾರಸು ಮಾಡುತ್ತಾರೆ ಎಂದು ತಿಳಿಸಿದೆ. ಇದು ಕಂಪೆನಿಯ ಷೇರುದಾರರ ಅನುಮೋದನೆಗೆ ಒಳಪಟ್ಟಿದ್ದು, 27ನೇ ವಾರ್ಷಿಕ ಸಾಮಾನ್ಯ ಸಭೆಯ ಮುಕ್ತಾಯದಿಂದ ನಾಲ್ಕನೇ ದಿನದಂದು ಪಾವತಿಸಲಾಗುವುದು/ರವಾನೆ ಮಾಡಲಾಗುವುದು.

“ಎಲ್ಲ ವರ್ಟಿಕಲ್​ಗಳು ಮಧ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿವೆ. ಬೆಳವಣಿಗೆಯು ರೀಟೇಲ್ ಮತ್ತು ಸಿಪಿಜಿ (ಶೇ 22.1), ಉತ್ಪಾದನೆಯ ವರ್ಟಿಕಲ್ (ಶೇ 19) ಮತ್ತು ಸಂವಹನ ಮತ್ತು ಮಾಧ್ಯಮ (ಶೇ 18.7) ಬೆಳವಣಿಗೆಯನ್ನು ಕಂಡಿವೆ. ತಂತ್ರಜ್ಞಾನ ಮತ್ತು ಸೇವೆಗಳು (ಶೇ 18) ಬೆಳೆದಿವೆ. ಮತ್ತು ಲೈಫ್ ಸೈನ್ಸಸ್ ಹಾಗೂ ಹೆಲ್ತ್‌ಕೇರ್ (ಶೇ 16.4 ರಷ್ಟು) ಬಿಎಫ್‌ಎಸ್‌ಐ (ಶೇ 12.9 ರಷ್ಟು) ಬೆಳೆದಿದೆ” ಎಂದು ಕಂಪೆನಿ ಹೇಳಿದೆ.

TV9 Kannada


Leave a Reply

Your email address will not be published. Required fields are marked *