Team India: ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಟೀಮ್ ಇಂಡಿಯಾ ಬ್ಯಾಟ್ಸ್​ಮನ್ ಯಾರು ಗೊತ್ತಾ? | 5 Indian Batsmen With The Most Sixes In T20 Cricket


Most Sixes in T20: ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಇದ್ದಾರೆ. ಆಗಿದ್ರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಆಟಗಾರರು ಯಾರು ಎಂದು ನೋಡೋಣ…

ಹೊಡಿಬಡಿ ಆಟವೆಂದೇ ಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್​ನಲ್ಲಿ ಸಿಕ್ಸ್​-ಫೋರ್​ಗಳ ಅಬ್ಬರ ಜೋರಾಗಿಯೇ ಇರುತ್ತದೆ. ಅದರಲ್ಲೂ ಟೀಮ್ ಇಂಡಿಯಾ ಆಟಗಾರರು ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಹೀಗೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆಯು ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (165 ಸಿಕ್ಸ್​) ಹೆಸರಿನಲ್ಲಿದೆ. ಕಿವೀಸ್​ ಆಟಗಾರನ ಹೊರತುಪಡಿಸಿ, ನ್ಯೂಜಿಲೆಂಡ್‌ನ ಕಾಲಿನ್ ಮನ್ರೊ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್, ಆಸ್ಟ್ರೇಲಿಯಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಮತ್ತು ಇಂಗ್ಲೆಂಡ್‌ನ ಇಯಾನ್ ಮೊರ್ಗನ್ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಇದ್ದಾರೆ. ಆಗಿದ್ರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಆಟಗಾರರು ಯಾರು ಎಂದು ನೋಡೋಣ…

  •  5 – ಸುರೇಶ್ ರೈನಾ (58 ಸಿಕ್ಸ್): ಸುರೇಶ್ ರೈನಾ ಅವರು ಭಾರತ ಪರ 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 58 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೈನಾ ತಮ್ಮ ವೃತ್ತಿ ಜೀವನದಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳ ನೆರವಿನಿಂದ ಒಟ್ಟು 1605 ರನ್ ಗಳಿಸಿದ್ದಾರೆ. ಸುರೇಶ್ ರೈನಾ 2010ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಶತಕವನ್ನೂ ಕೂಡ ಬಾರಿಸಿದ್ದರು.
  • 4 – ಕೆಎಲ್ ರಾಹುಲ್ (73 ಸಿಕ್ಸ್​): ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಇದುವರೆಗೆ 56 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಈ ವೇಳೆ ಒಟ್ಟು 73 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ತಮ್ಮ ವೃತ್ತಿ ಜೀವನದಲ್ಲಿ 2 ಶತಕ ಮತ್ತು 16 ಅರ್ಧ ಶತಕಗಳ ನೆರವನಿಂದ ಟಿ20 ಕ್ರಿಕೆಟ್​ನಲ್ಲಿ ಒಟ್ಟು 1831 ರನ್ ಗಳಿಸಿದ್ದಾರೆ.
  • 3 – ಯುವರಾಜ್ ಸಿಂಗ್ (74 ಸಿಕ್ಸ್​): ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 74 ಸಿಕ್ಸ್​ಗಳನ್ನು ಬಾರಿಸಿದ್ದಾರೆ. ಯುವರಾಜ್ ತಮ್ಮ ವೃತ್ತಿಜೀವನದಲ್ಲಿ 58 ಟಿ20 ಪಂದ್ಯಗಳನ್ನು ಆಡಿದ್ದು, ಈ ವೇಳೆ 8 ಅರ್ಧ ಶತಕಗಳ ನೆರವಿನಿಂದ 1177 ರನ್ ಕಲೆಹಾಕಿದ್ದರು.
  • 2 – ವಿರಾಟ್ ಕೊಹ್ಲಿ (92 ಸಿಕ್ಸ್​): ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 97 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 92 ಸಿಕ್ಸ್​ಗಳನ್ನು ಬಾರಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ 30 ಅರ್ಧಶತಕಗಳ ನೆರವಿನಿಂದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 3296 ರನ್ ಗಳಿಸಿದ್ದಾರೆ.
  • 1 – ರೋಹಿತ್ ಶರ್ಮಾ (155 ಸಿಕ್ಸ್​): ರೋಹಿತ್ ಶರ್ಮಾ ಅವರನ್ನು ಪ್ರಸ್ತುತ ಟಿ20 ಕ್ರಿಕೆಟ್​ನ ಅತ್ಯುತ್ತಮ ಬ್ಯಾಟ್ಸ್‌ಮನ್​ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಹಿಟ್​ಮ್ಯಾನ್ ಇದುವರೆಗೆ 125 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ವೇಳೆ 155 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 3313 ರನ್ ಗಳಿಸಿದ್ದಾರೆ. ಈ ವೇಳೆ 4 ಶತಕಗಳನ್ನು ಕೂಡ ಸಿಡಿಸಿದ್ದಾರೆ. ಅಂದರೆ ಟೀಮ್ ಇಂಡಿಯಾ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.