Team India: ಟೀಮ್ ಇಂಡಿಯಾದ ಅತ್ಯಂತ ಕಿರಿಯ ನಾಯಕ ಯಾರು ಗೊತ್ತಾ? | Indias youngest t20 captain list zp au50

Team India: ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ಇರುವುದು ಮಾಜಿ ಆಟಗಾರನ ಹೆಸರಿನಲ್ಲಿ ಎಂಬುದು ವಿಶೇಷ.

Jun 12, 2022 | 6:31 PM

TV9kannada Web Team

| Edited By: Zahir PY

Jun 12, 2022 | 6:31 PM

 ಭಾರತ-ಸೌತ್ ಆಫ್ರಿಕಾ ನಡುವಣ ಟಿ20 ಪಂದ್ಯದ ಮೂಲಕ ರಿಷಭ್ ಪಂತ್ ಟೀಮ್ ಇಂಡಿಯಾ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ಗಾಯಗೊಂಡ ಪರಿಣಾಮ ವಿಕೆಟ್ ಕೀಪರ್ ರಿಷಭ್ ಪಂತ್​ಗೆ ಟಿ20 ನಾಯಕರಾಗಿ ಪದಾರ್ಪಣೆ ಮಾಡುವ ಅವಕಾಶ ಲಭಿಸಿತು. ಇದರೊಂದಿಗೆ 24ನೇ ವಯಸ್ಸಿನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಕೂಡ ಪಂತ್ ಪಾಲಾಯಿತು.

ಆದರೆ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ಇರುವುದು ಮಾಜಿ ಆಟಗಾರನ ಹೆಸರಿನಲ್ಲಿ ಎಂಬುದು ವಿಶೇಷ. ಆಗಿದ್ರೆ ಟೀಮ್ ಇಂಡಿಯಾವನ್ನು ಚುಟುಕು ಕ್ರಿಕೆಟ್​ನಲ್ಲಿ ಮುನ್ನಡೆಸಿದ ಕಿರಿಯ ನಾಯಕರುಗಳು ಯಾರೆಲ್ಲಾ  ನೋಡೋಣ...

ಆದರೆ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ಇರುವುದು ಮಾಜಿ ಆಟಗಾರನ ಹೆಸರಿನಲ್ಲಿ ಎಂಬುದು ವಿಶೇಷ. ಆಗಿದ್ರೆ ಟೀಮ್ ಇಂಡಿಯಾವನ್ನು ಚುಟುಕು ಕ್ರಿಕೆಟ್​ನಲ್ಲಿ ಮುನ್ನಡೆಸಿದ ಕಿರಿಯ ನಾಯಕರುಗಳು ಯಾರೆಲ್ಲಾ ನೋಡೋಣ…

1- ಸುರೇಶ್ ರೈನಾ: ಟೀಮ್ ಇಂಡಿಯಾ ಮಾಜಿ ಎಡಗೈ ದಾಂಡಿಗ ಸುರೇಶ್ ರೈನಾ 2010 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್​ನಲ್ಲಿ ಮುನ್ನಡೆಸಿದ್ದರು. ಈ ವೇಳೆ ರೈನಾ ಅವರ ವಯಸ್ಸು ಕೇವಲ 23 ವರ್ಷ, 197 ದಿನಗಳು ಮಾತ್ರ. ಅಂದರೆ ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್​ನಲ್ಲಿ ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ರೈನಾ ಹೆಸರಿನಲ್ಲಿದೆ.

2- ರಿಷಭ್ ಪಂತ್: 2022 ರಲ್ಲಿ ಸೌತ್ ಆಫ್ರಿಕಾ ವಿರುದ್ದ ನಾಯಕನಾಗಿ ಕಣಕ್ಕಿಳಿಯುವ ರಿಷಭ್ ಪಂತ್ 2ನೇ ಅತ್ಯಂತ ಕಿರಿಯ ನಾಯಕ ಎನಿಸಿಕೊಂಡಿದ್ದಾರೆ. ನಾಯಕನಾಗಿ ಪದಾರ್ಪಣೆ ಮಾಡಿದಾಗ ಪಂತ್ ಅವರ ವಯಸ್ಸು 24 ವರ್ಷ, 248 ದಿನಗಳು.

 3- ಎಂ ಎಸ್​ ಧೋನಿ: 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ನಾಯಕರಾಗಿ ಆಯ್ಕೆಯಾಗಿದ್ದರು. ಈ ವೇಳೆ ಧೋನಿಯ ವಯಸ್ಸು 26 ವರ್ಷ, 68 ದಿನಗಳಾಗಿತ್ತು.

4- ಅಜಿಂಕ್ಯ ರಹಾನೆ: 2015 ರಲ್ಲಿ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ವಯಸ್ಸು 27 ವರ್ಷ, 41 ದಿನಗಳು.

5- ವೀರೇಂದ್ರ ಸೆಹ್ವಾಗ್: 2006 ರಲ್ಲಿ ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಈ ವೇಳೆ ಅವರ ವಯಸ್ಸು 28 ವರ್ಷ , 42 ದಿನಗಳು. ಹಾಗೆಯೇ ಟೀಮ್ ಇಂಡಿಯಾ ಟಿ20ದ ಮೊದಲ ನಾಯಕ ಕೂಡ ಸೆಹ್ವಾಗ್ ಎಂಬುದು ವಿಶೇಷ.

Most Read Stories

TV9 Kannada

Leave a Reply

Your email address will not be published.