Tech Tips: ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ವಾಟ್ಸ್​ಆ್ಯಪ್​ನಲ್ಲಿ ನೋಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್ – Tech Tips and Tricks SBI users on WhatsApp will be able to get their account balance here’s how Kannada technology News


State Bank of India (SBI): ಇಲ್ಲಿದೆ ನೋಡಿ ಎಸ್​ಬಿಐ ಬ್ಯಾಂಕ್ ಖಾತೆ ಹೊಂದಿರುವವರು ವಾಟ್ಸ್​ಆ್ಯಪ್ ಮೂಲಕ ಹಣ ಎಷ್ಟಿದೆ ಎಂದು ನೋಡುವ ಟ್ರಿಕ್.

ಇಂದು ಸ್ಮಾರ್ಟ್​​ಫೋನ್ (Smartphone) ಬಳಸುತ್ತಿರುವವರಲ್ಲಿ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಇದ್ದೇ ಇರುತ್ತದೆ. ಅಷ್ಟರ ಮಟ್ಟಿಗೆ ಮೆಟಾ ಒಡೆತನದ ಈ ಆ್ಯಪ್ ಪ್ರಸಿದ್ದಿ ಪಡೆದಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಸದಾ ಒಂದಲ್ಲ ಒಂದು ಫೀಚರ್ ಅನ್ನು ಪರಿಚಯಿಸುತ್ತಲೇ ಇದೆ. ಇನ್ನೂ ಅನೇಕ ಆಯ್ಕೆಗಳು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ವಾಟ್ಸ್​ಆ್ಯಪ್ (WhatsApp) ವಿನೂತನ ಅಪ್ಡೇಟ್ ನೀಡಲು ಮುಂದಾಗುತ್ತಿದೆ. ಇದರ ನಡುವೆ ವಾಟ್ಸ್​ಆ್ಯಪ್​ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ ಬಳಕೆದಾರರು ವಿಶೇಷ ಆಯ್ಕೆಯನ್ನು ಪಡೆಯಬಹುದು. ಎಸ್​​ಬಿಐ ವಾಟ್ಸ್​ಆ್ಯಪ್ ಜೊತೆಗೂಡಿ ವಾಟ್ಸ್​ಆ್ಯಪ್ ಬ್ಯಾಂಕಿಂಗ್ ಸರ್ವಿಸ್ ಅನ್ನು ಪ್ರಾರಂಭಿಸಿದ್ದು, ಈ ಮೂಲಕ ಎಸ್​ಬಿಐ ಬ್ಯಾಂಕ್ ಖಾತೆ ಹೊಂದಿರುವವರು ವಾಟ್ಸ್​ಆ್ಯಪ್ ಮೂಲಕ ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ನೋಡಬಹುದಾಗಿದೆ.

ಈ ಬಗ್ಗೆ ಎಸ್​ಬಿಐ ಇತ್ತೀಚೆಗಷ್ಟೆ ತನ್ನ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, “ನಿಮ್ಮ ಬ್ಯಾಂಕ್ ಈಗ ವಾಟ್ಸ್​ಆ್ಯಪ್​ನಲ್ಲಿ ಲಭ್ಯವಿದೆ. ಇದೀಗ ವಾಟ್ಸ್​ಆ್ಯಪ್ ಮೂಲಕ ನಿಮ್ಮ ಖಾತೆಯ ಹಣ ಮತ್ತು ಮಿನಿ ಸ್ಟೇಟ್​ಮೆಂಟ್ ಅನ್ನು ಪಡೆಯಬಹುದು,” ಎಂದು ಬರೆದುಕೊಂಡಿದೆ. ಹಾಗಾದ್ರೆ ಎಸ್​ಬಿಐ ಬ್ಯಾಂಕ್ ಖಾತೆ ಹೊಂದಿರುವವರು ವಾಟ್ಸ್​ಆ್ಯಪ್ ಮೂಲಕ ಹಣ ಎಷ್ಟಿದೆ ಎಂದು ನೋಡುವುದು ಹೇಗೆ?.

  1. ಎಸ್​ಬಿಐ ವಾಟ್ಸ್​ಆ್ಯಪ್ ಬ್ಯಾಂಕಿಂಗ್ ಸೇವೆಗಳಿಗಾಗಿ ಮೊದಲಿಗೆ ನೀವು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು.
  2. ನೋಂದಾಯಿಸಲು, ನೀವು ಬ್ಯಾಂಕ್‌ನಲ್ಲಿ ಕೊಟ್ಟಿರುವ 10 ಅಂಕಿಯ ಮೊಬೈಲ್ ಸಂಖ್ಯೆಯಿಂದ 917208933148 ಗೆ “SMS WAREG A/c No” ಹೀಗೆ ಟೈಪ್ ಮಾಡಿ ಕಳುಹಿಸಬೇಕು.
  3. ನೋಂದಣಿ ಪೂರ್ಣಗೊಂಡ ನಂತರ, +919022690226 ಸಂಖ್ಯೆಗೆ ‘Hi’ ಎಂದು ಕಳುಹಿಸಿ.
  4. ಈಗ Dear Customer, Welcome to SBI Whatsapp Banking Services ಎಂಬ ಮೆಸೇಜ್ ಬರುತ್ತದೆ.
  5. 1. ಅಕೌಂಟ್ ಬ್ಯಾಲೆನ್ಸ್, 2. ಮಿನಿ ಸ್ಟೇಟ್​ಮೆಂಟ್, 3. ವಾಟ್ಸ್​ಆ್ಯಪ್​​ ಬ್ಯಾಂಕಿಂಗ್‌ನಿಂದ ಡಿರಿಜಿಸ್ಟರ್ ಮಾಡಿ ಎಂಬ ಆಯ್ಕೆ ಬರುತ್ತದೆ.
  6. ಇದರಲ್ಲಿ ಆಕೌಂಟ್ ಬ್ಯಾಲೆನ್ಸ್ ತಿಳಿಯಬೇಕಾದರೆ ಒಂದನ್ನು ಟೈಮ್ ಮಾಡಿ ಸೆಂಡ್ ಕೊಡಿ. ಆಗ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತೋರಿಸುತ್ತದೆ.

ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ವಿಶೇಷ ಫೀಚರ್:

ವಾಟ್ಸ್​ಆ್ಯಪ್ ತನ್ನ ಡೆಸ್ಕ್​ಟಾಪ್ ಬಳಕೆದಾರರಿಗಾಗಿ ಚಾಟ್​ನಲ್ಲಿ ಫೋಟೋವನ್ನು ಬ್ಲರ್ ಮಾಡಲು ಇಮೇಜ್ ಬ್ಲರ್ ಎಂಬ ವಿಶೇಷ ಟೂಲ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ವಾಟ್ಸ್​ಆ್ಯಪ್ ಡೆಸ್ಕ್​ಟಾಪ್ ಬೀಟಾದಲ್ಲಿ ಇದು ಕಂಡುಬಂದಿದ್ದು, ಸೂಕ್ಷವಾದ ವಿಚಾರಗಳಲ್ಲಿ, ಫೋಟೋವನ್ನು ಬ್ಲರ್ ಮಾಡಲು ಈ ಟೂಲ್ ಸಹಾಯ ಮಾಡಲಿದೆ. ಇದರಲ್ಲಿ ಬ್ಲರ್ ಸೈಜ್, ಎಫೆಕ್ಟ್ ಕೂಡ ಇರಲಿದೆ ಎಂದು ಹೇಳಲಾಗಿದೆ. ಈ ಮೂಲಕ ಅತಿ ಸೂಕ್ಷವಾದ ವಿಚಾರವನ್ನು ನೀವು ವಾಟ್ಸ್​ಆ್ಯಪ್​ನಲ್ಲಿ ಇತರರಿಗೆ ಕಳುಹಿಸುವಾಗ ಬ್ಲರ್ ಮಾಡಿ ಸೆಂಡು ಮಾಡಬಹುದು.

TV9 Kannada


Leave a Reply

Your email address will not be published.