Tecno Pop 5C: ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 2000 ರೂ. ಗೆ ಮಾರಾಟ ಕಾಣಲಿದೆ ಈ ಸ್ಮಾರ್ಟ್​ಫೋನ್ | Tecno Pop 5C Tecno has launched a new entry level smartphone in the market


Tecno Pop 5C: ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 2000 ರೂ. ಗೆ ಮಾರಾಟ ಕಾಣಲಿದೆ ಈ ಸ್ಮಾರ್ಟ್​ಫೋನ್

Tecno Pop 5C

ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳಿಂದ (Budget Smartphone) ಭಾರೀ ಹೆಸರುವಾಸಿಯಾಗಿರುವ ಟೆಕ್ನೋ (Tecno) ಮೊಬೈಲ್‌ ಕಂಪೆನಿಯು ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಿಂದಲೂ ಖ್ಯಾತಿ ಪಡೆದುಕೊಂಡಿದೆ. ಇದೇ ಸಾಲಿಗೆ ಈಗ ಮತ್ತೊಂದು ಹೊಸ ಟೆಕ್ನೋ ಪಾಪ್‌ 5ಸಿ (Tecno Pop 5C) ಸ್ಮಾರ್ಟ್‌ಫೋನ್‌ ಸೇರ್ಪಡೆಯಾಗಿದೆ. ಹೌದು ಈ ಸ್ಮಾರ್ಟ್‌ಫೋನ್‌ ಜಾಗತೀಕವಾಗಿ ಅನಾವರಣಗೊಂಡಿದೆ. ಟೆಕ್ನೋ ಪಾಪ್‌ 5C ಆರಂಭಿಕ ಹಂತದ ಸ್ಮಾರ್ಟ್‌ಫೋನ್ ಆಗಿದ್ದು, ತನ್ನ ವರ್ಗದಲ್ಲೇ ಉತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದೆ. ಭಾರತದಲ್ಲಿ ಈ ಫೋನ್ ಯಾವಾಗಿನಿಂದ ಮಾರಾಕ್ಕೆ ಲಭ್ಯವಿದೆ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ, ಇದರ ಬೆಲೆ 2,000 ರೂ. ಯಿಂದ 3,000 ರೂ. ಒಳಗೆ ಇರಬಹುದೆಂದು ಹೇಳಲಾಗಿದೆ.

ಟೆಕ್ನೋ ಪಾಪ್‌ 5C ಸ್ಮಾರ್ಟ್‌ಫೋನ್‌ 480×584 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5 ಇಂಚಿನ FWVGA ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಮುಂಭಾಗದಲ್ಲಿ ತೆಳುವಾದ ಅಂಚನ್ನು ಹೊಂದಿದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್‌ 10 ಓಎಸ್‌ (ಗೋ ಆವೃತ್ತಿ) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್ 16GB ಆಂತರೀಕ ಸಂಗ್ರಹ ಸಾಮರ್ಥ್ಯವನ್ನು ಪಡೆದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಆಯ್ಕೆ ಸಹ ಒಳಗೊಂಡಿದೆ.

ಇನ್ನು ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅದು 5 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಕ್ಯಾಮೆರಾವು AI ಫೇಸ್ ಬ್ಯೂಟಿ, HDR, ಸ್ಮೈಲ್ ಶಿಟ್, AI ಸ್ಟಿಕ್ಕರ್ ಮತ್ತು ಬೊಕೆ ಮೋಡ್ ಆಯ್ಕೆಗಳ ಬೆಂಬಲ ಸಹ ಪಡೆದಿದೆ.

2,400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಹಾಗೆಯೇ ಫೇಸ್‌ ರಿಕಗ್ನೈಸ್‌ ಬೆಂಬಲದೊಂದಿಗೆ ಬರುತ್ತದೆ. ಇನ್ನು ಈ ಫೋನ್ 145.20×74.05×9.85mm ಸುತ್ತಳತೆಯನ್ನು ಪಡೆದಿದ್ದು, 150 ಗ್ರಾಂ ತೂಕವನ್ನು ಹೊಂದಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v4.2, ವೈ-ಫೈ 2.4GHz, ಜಿಪಿಎಸ್‌, ಜಿಎಸ್‌ಎಮ್, ನ್ಯಾನೋ ಸಿಮ್‌, ಮೈಕ್ರೋ USB ಪೋರ್ಟ್, ಜಿಪಿಆರ್‌ಎಸ್‌, ಎಫ್‌ಎಮ್‌ ಮತ್ತು ಇತ್ತೀಚಿಗಿನ ಆಯ್ಕೆಗಳನ್ನು ಒಳಗೊಂಡಿದೆ.

BSNL: ಜಿಯೋ, ಏರ್ಟೆಲ್​ಗೆ ಶಾಕ್ ಕೊಟ್ಟ ಬಿಎಸ್​​ಎನ್​ಎಲ್: ಕಡಿಮೆ ಬೆಲೆಗೆ 2GB ಡೇಟಾ, ಅನಿಯಮಿತ ಕರೆ

Flipkart: ಸ್ಮಾರ್ಟ್​​ಫೋನ್ ಖರೀದಿಸಿ, ಉಪಯೋಗಿಸಿ: ಇಷ್ಟವಾಗದಿದ್ದರೆ ರಿಟರ್ನ್ ಮಾಡಿ, ಹಣ ವಾಪಸ್: ಹೀಗೊಂದು ಆಫರ್

(Tecno Pop 5C Tecno has launched a new entry-level smartphone in the market)

TV9 Kannada


Leave a Reply

Your email address will not be published. Required fields are marked *