ನಮ್ಮನ್ನು ಪ್ರಶ್ನಿಸುತ್ತಿರುವ ರೀತಿಯಲ್ಲೇ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಭರವಸೆ ನೀಡಿದ 2 ಕೋಟಿ ಉದ್ಯೋಗಗಳ ಭರವಸೆ ಏನಾಯಿತು? ಎಂದು ಬಿಜೆಪಿ ನಾಯಕರನ್ನು ಕೇಳಿ ಎಂದು ಡಿಸಿಎಂ ತೇಜಸ್ವಿ ಯಾದವ್ ಹೇಳಿದ್ದಾರೆ.

Image Credit source: NDTV
ಪಾಟ್ನಾ: 2020ರ ಬಿಹಾರ ಚುನಾವಣೆಯಲ್ಲಿ (Bihar Election) ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ತೇಜಸ್ವಿ ಯಾದವ್ ಭರವಸೆ ನೀಡಿದ್ದರು. ಇದೀಗ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ ಯಾದವ್ (Tejashwi Yadav) ಅವರು ಭರವಸೆ ನೀಡಿದ್ದನ್ನು ಪದೇ ಪದೇ ನೆನಪಿಸುತ್ತಿರುವ ಬಿಜೆಪಿಯ ಪ್ರಶ್ನೆಗೆ ಉತ್ತರಿಸಿದ ಕ್ಲಿಪ್ ಅನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
“ಹಿಂದೂ-ಮುಸ್ಲಿಂ ವಿಷಯಗಳ ಬದಲು ನಮ್ಮಲ್ಲಿ ಉದ್ಯೋಗದ ಬಗ್ಗೆ ಕೇಳುತ್ತಿರುವುದು ನಮ್ಮ ಯಶಸ್ಸಾಗಿದೆ. ಯಾವತ್ತೂ ಉದ್ಯೋಗದ ಬಗ್ಗೆ ಕೇಳದೆ, ಸದಾ ನಿದ್ದೆ ಮಾಡುತ್ತಿದ್ದ ಜನರಿಗೆ ಧನ್ಯವಾದಗಳು. ಮಾಧ್ಯಮಗಳೂ ಈಗ ಎಚ್ಚೆತ್ತುಕೊಂಡಿವೆ. ಇದು ನಮ್ಮ ಯಶಸ್ಸಲ್ಲವೇ?” ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
“ಬಿಜೆಪಿ ತನ್ನ ಭರವಸೆಯನ್ನು ಎಂದಿಗೂ ಈಡೇರಿಸುವುದಿಲ್ಲ. ಆದರೆ, ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ. ನೀವು 10 ಲಕ್ಷ ಯಾವಾಗ ಕೊಡುತ್ತೀರಿ?” ಎಂದು ನಿರ್ಭಯವಾಗಿ ಕೇಳುತ್ತಿರುವ ಈ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ನಿಮ್ಮ ಮುಂದೆ ಉತ್ತರಿಸಿಲ್ಲವೇ?” ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.