Temple Tour: ಉಡಿ ತುಂಬಿದರೆ ಮಡಿಲು ತುಂಬುವ ತುಳಜಾಭವಾನಿ ನೆಲೆಸಿದ್ದು ಎಲ್ಲಿ ಗೊತ್ತಾ? | Spiritual news Details about Davanagere Tulajabhavani Temple


ಹೀರೇ ಉಡದ ಅಪ್ಪಣೆ ದೇವತೆ ಪವಾಡನ್ನಾಗಲಿ, ಆಕೆಯ ಮಹಿಮೆಯನ್ನಾಗಿ ಲಘುವಾಗಿ ಪರಿಗಣಿಸುವುದಕ್ಕೆ ಸಾಧ್ಯವೇ ಇಲ್ಲ. ಇಲ್ಲಿ ಬರುವ ಪ್ರತಿ ಭಕ್ತರು ಕೂಡ ಹಿರೋ ಉಡದ ಅಪ್ಪಣೆ ದೇವತೆಯಿಂದ ಒಳಿತು ಕಂಡವರೇ. ಮನೆಯಲ್ಲಿ ಯಾವುದೇ ಮಂಗಳ ಕಾರ್ಯವಿದ್ದರೂ ಮನೆ ಮಂದಿ ಮೊದಲು ದೇವಿಯ ಆಶೀರ್ವಾದ ಪಡೆಯುತ್ತಾರೆ. ಮಕ್ಕಳಿಲ್ಲ ಎನ್ನುವ ಕೊರಗು ಹೊತ್ತು ಬರುವವರು ದೇವಿಯ ಕೃಪಾ ಕಟಾಕ್ಷದಿಂದ ಸಂತಾನ ಭಾಗ್ಯ ಪಡೆದ ಉದಾಹರಣೆಗಳಿ ಇವೆ. ಭಕ್ತರನ್ನು ಹರಸುವ ದೇವಿ ಅದಕ್ಕೆ ಪ್ರತಿಯಾಗಿ ಬಯಸುವುದು ಕೇವಲ ನಿಷ್ಕಲ್ಮಷ ಪೂಜೆ ಮತ್ತು ಉಡಿ ತುಂಬುವುದನ್ನು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇ ಉಡ ಗ್ರಾಮದಲ್ಲಿ ನೆಲೆಸಿರುವ ತುಳಜಾಭವಾನಿಯೇ ಹಿರೇ ಉಡದ ಅಪ್ಪಣೆ ದೇವತೆ. ದಾವಣಗೆರೆ ತಾಲೂಕಾ ಕೇಂದ್ರ ಚನ್ನಗಿರಿಯಿಂದ 12 ಕಿಲೋಮೀಟರ್ ಹಾಗೂ ಜಿಲ್ಲಾ ಕೇಂದ್ರ ದಾವಣಗೆರೆಯಿಂದ 56 ಕಿಲೋಮೀಟರ್ ದೂರದಲ್ಲಿದೆ ಈ ಪುಣ್ಯಕ್ಷೇತ್ರ.

TV9 Kannada


Leave a Reply

Your email address will not be published. Required fields are marked *