Temple Tour: ರಾಕ್ಷಸರು ಕಟ್ಟಿದ ಗುಡಿಯಲ್ಲಿ ಉದ್ಭವವಾದ ಹನುಮಂತ | Spiritual news Details About Anjaneya Temple in bidar

ನಮ್ಮ ದೇಶದಲ್ಲಿ ಆಂಜನೇಯನ ಉಪಾಸನೆಗೆ ಅತೀ ಹೆಚ್ಚು ಪ್ರಾಶ್ಯಸ್ಥವನ್ನ ನೀಡಲಾಗುತ್ತದೆ. ಭಾರತದಲ್ಲಿರುವ ಅದೆಷ್ಟೋ ದೇವರ ಸನ್ನಿಧಾನಗಳಲ್ಲಿ ಆಂಜನೇಯನ ದೇವಸ್ಥಾನಗಳೇ ಅತೀ ಹೆಚ್ಚು. ಅಂಜನಾದೇವಿಯ ಪುತ್ರ ಶಕ್ತಿಶಾಲಿ ದೇವರು. ಹೀಗೆ ತನ್ನ ಶಕ್ತಿಯನ್ನ ತೋರಿಸಿ ಉದ್ಭವವಾದ ಹನುಮಂತನ ದೇವಾಲಯೊಂದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರದಲ್ಲಿದೆ. ಸುಮಾರು 2 ಸಾವಿರ ವರ್ಷಗಳ ಪುರಾತನವಾದ ಐತಿಹ್ಯ ಈ ದೇವಾಲಯಕ್ಕಿದೆ. ಈ ದೇವಾಲಯದಲ್ಲಿ ಪ್ರತಿ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ತ್ರಿಕಾಲ ಪೂಜೆಯಲ್ಲಿ ಆಂಜನೇಯನಿಗೆ ಮೂರು ವಿಧದ ಅಲಂಕಾರ ಸೇವೆ ನಡೆಯುತ್ತೆ. ಬೆಳಗಿನ ಪೂಜೆಗೆ ಹಾಲಿನ ಅಭಿಷೇಕ, ಮಧ್ಯಾಹ್ನದ ಪೂಜೆಗೆ ಗಂಧ- ಕುಂಕುಮದ ಲೇಪನ, ಸಂಜೆ ಪೂಜೆಗೆ ಪಂಚಾಮೃತ ಅಭಿಷೇಕ ನಡೆಯುತ್ತೆ. ವರ್ಷದಲ್ಲಿ ಎರಡು ಬಾರಿ ಅಂದ್ರೆ ದವನ ಹುಣ್ಣಿಮೆ ಮತ್ತು ದೀಪಾವಳಿ ಹುಣ್ಣಿಮೆಯಲ್ಲಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತೆ.

TV9 Kannada

Leave a comment

Your email address will not be published. Required fields are marked *