ಮುಖದ ಸೌಂದರ್ಯದ ಜೊತೆಗೆ ತ್ವಚೆಯ ಆರೋಗ್ಯವು ಅತ್ಯಂತ ಅಗತ್ಯವಾಗಿದೆ. ಜೊತೆಗೆ ಹೊರಗಡೆ ಹೋಗುವಾಗ ಪ್ರತಿ ದಿನ ಸನ್ ಸ್ಕ್ರೀನ್ ಬಳಸಿ. ಬಿಸಿಲು ಇಲ್ಲದಿದ್ದರೂ ಸನ್ ಸ್ಕ್ರೀನ್ ಬಳಸುವುದನ್ನು ಮರೆಯದಿರಿ.

Image Credit source: Pinterest
ಪ್ರತಿಯೊಂದು ಹೆಣ್ಣಿಗೂ ಮೇಕ್ ಅಪ್ (Makeup) ಅತ್ಯಂತ ಇಷ್ಟ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಇದೂ ಕೂಡ ಒಂದು ಭಾಗವಾಗಿದೆ. ಆದರಿಂದ ಈ ಹೊಸ ವರ್ಷ ( New Year)ದ ಸಮಯದಲ್ಲಿ ಮೇಕ್ ಅಪ್ ದಿನಚರಿಗಳ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿ. 2023 ರ ಮೇಕಪ್ ಟ್ರೆಂಡ್ಗಳಿಗಾಗಿ ನಿಮ್ಮ ಕಾಸ್ಮೆಟಿಕ್ ಕಿಟ್ ರಿಫ್ರೆಶ್ ಮಾಡಲು ನೀವು ಬಯಸಿದರೆ ಉಪಯುಕ್ತ ಮಾಹಿತಿ ಇಲ್ಲಿವೆ.ವಿಭಿನ್ನ ರೀತಿಯ ನೈಲ್ ಆರ್ಟ್ಗಳು, ಕೇಶವಿನ್ಯಾಸ, ರೋಮಾಂಚಕ ಬಣ್ಣದ ಸೌಂದರ್ಯವರ್ಧಕಗಳ ಮೂಲಕ ಹೊಸ ನೋಟವನ್ನು ಪ್ರಯತ್ನಿಸಲು ಮತ್ತು ಪ್ರಯೋಗಿಸಲು ಸಾಕಷ್ಟು ಅವಕಾಶಗಳನ್ನು ಕಂಡುಕೊಳ್ಳಬಹುದು. 2023 ರಲ್ಲಿ ಜನಪ್ರಿಯವಾಗಲಿರುವ ಮೇಕ್ ಅಪ್ ಟ್ರೆಂಡ್ಗಳನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನಿಮಗಾಗಿ ಟಿಪ್ಸ್ ಇಲ್ಲಿವೆ.
ಬ್ಲಶ್ ಟ್ರೆಂಡ್:
ಬ್ಲಶ್ ಬಹಳ ಹಿಂದಿನಿಂದಲೂ ಪ್ರತಿಯೊಂದು ಹೆಣ್ಣಿನ ಮೇಕ್ ಅಪ್ನಲ್ಲಿ ಪ್ರಮುಖವಾಗಿದೆ. ಇದು ನಿಮ್ಮ ಕೆನ್ನೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದರಿಂದ ಮುಂದಿನ ವರ್ಷವು ಕೂಡ ನಿಮ್ಮ ಮೇಕ್ ಅಪ್ ಕಿಟ್ನಲ್ಲಿ ಬ್ಲಶ್ ಕ್ರೀಮ್ ಇರಲಿ. ಇದು ನಿಮ್ಮ ಮುಖದ ಆಕಾರವನ್ನು ವಿಶೇಷವಾಗಿ ಕೆನ್ನೆಯನ್ನು ಹೊಳೆಯುವಂತೆ ಮಾಡುತ್ತದೆ.
ಮಿನುಗುವ ಸೌಂದರ್ಯ ವರ್ಧಕ:
ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಕಣ್ಣು ಹಾಗೂ ತುಟಿಗಳಿಗೆ ಮಿನುಗುವ ಸೌಂದರ್ಯ ವರ್ಧಕವನ್ನು ಬಳಸಲಾಗುತ್ತದೆ. ಕಣ್ಣುಗಳ ಅಂಚಿನಲ್ಲಿ ಮಿನುಗುವ ಮಣಿಗಳನ್ನು ಧರಿಸುವುದರಿಂದ ನಿಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ನೋಟವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ದಪ್ಪ ಕಪ್ಪು ಐಲೈನರ್ನೊಂದಿಗೆ ಇದು ನಿಮಗೆ ಸೆಲೆಬ್ರೆಟಿ ಲುಕ್ ನೀಡುತ್ತದೆ.