Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ | Travel plan for Monsoon


Resorts : ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ… ಎಂಥ ಆಹ್ಲಾದಕರ ವಾತಾವರಣ!

Travel Plan for Rainy Season : ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡು ಓಡುವ ಕುದುರೆಯಂತೆ ನಾವು ನಿತ್ಯವೂ ಓಡುತ್ತಲೇ ಇದ್ಧೇವೆ. ಸಿಗುವ ಒಂದು ಭಾನುವಾರವೂ ಸಾಲದೆ, ಮತ್ತೆ ಸೋಮವಾರ ಬಂತೇ ಎಂಬ ಬೇಸರದಲ್ಲೇ ಆಫೀಸುಗಳಿಗೆ ತೆರಳುತ್ತಿದ್ದೇವೆ. ಮಕ್ಕಳಿಗೆ ಶಾಲೆ ಶುರುವಾಗಿ ಯಂತ್ರದಂತೆ ಅವೂ ಓಡುತ್ತಿವೆ. ಇದೆಲ್ಲದಕ್ಕೆ ಮುಕುಟವಿಟ್ಟಂತೆ ಸೂರ್ಯ ನಿಗಿನಿಗಿಯಾಗುತ್ತಲೇ ಇದ್ಧಾನೆ. ಇನ್ನು ಸಾಧ್ಯವೇ ಇಲ್ಲ ಎಂದಾಗ ಆಗಾಗ ಚೂರು ಮಳೆಸೆಳಕು ಬೀಳಿಸಿ ಸಮಾಧನ ಹೇಳುತ್ತಿದೆ ಆಕಾಶ. ಕಾಲ ಹೀಗೇ ನಿಂತೀತೆ? ಬಂದೇ ಬರುತ್ತದೆ ಮಳೆಗಾಲ ಚಳಿಗಾಲ ಮತ್ತೆ ಬೇಸಿಗೆಕಾಲ. ಈಗಿನಿಂದಲೇ ನೀವು ಮಳೆಗಾಲದ ಪ್ರವಾಸಕ್ಕೆ ತಯಾರಿ ಮಾಡಿಕೊಳ್ಳಿ. ಅಂಡಮಾನ್​ ನಿಕೋಬಾರ್, ಗೋವಾ, ಊಟಿ, ಮಹಾಬಲೇಶ್ವರ, ಲೋನಾವಳ, ಮನಾಲಿ ರೆಸಾರ್ಟ್​​​ಗಳು ನಿಮ್ಮ ಬರುವಿಕೆಗಾಗಿ ಸಿದ್ಧಗೊಂಡಿವೆ. ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ… ಎಂಥ ಆಹ್ಲಾದಕರ ವಾತಾವರಣ! ಈಗಲೇ ಯೋಜಿಸಿ. ಮುಂಜೋಹ್ ಐಲ್ಯಾಂಡ್ ಹೌಸ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೂ ನಿಮಗಾಗಿ ಕಾಯುತ್ತಿವೆ.

ಸ್ಟರ್ಲಿಂಗ್, ಊಟಿ
ಅದೆಷ್ಟು ಸಲ ಹೋದರೂ ಊಟಿಯ ರಮ್ಯತಾಣದ ಸೊಬಗನ್ನು ಅನುಭವಿಸುವುದು ಮುಗಿಯುವುದೇ ಇಲ್ಲ.  ಊಟಿಯ ಪರ್ವತಗಳುದ್ದಕ್ಕೂ ಹಸಿರು ಚಾದರದಂತೆ ಹಾಸಿರುವ ಸಸ್ಯರಾಶಿ, ಆಳ ಕಣಿವೆಯಲ್ಲಿ ಆಕಾಶ ನೋಡುತ್ತ ನಿಂತ ಪೈನ್​ ಕಾಡುಗಳು, ನವಿರಾದ ಹಸಿರು ಶಾಲನ್ನು ಹೊದಿಸಿದಂತೆ ಕಾಣುವ  ಟೀ ಎಸ್ಟೇಟ್​ಗಳು ಮತ್ತೆ ಮತ್ತೆ ನಿಮ್ಮನ್ನು ಕರೆಯುತ್ತಲೇ ಇರುತ್ತವೆ. ಬೆಳಗಿನ ಮಂಜು ನಿಮ್ಮನ್ನು ಕನಸಿನಲೋಕಕ್ಕೆ ಕರೆದೊಯ್ಯಲು ನಿಮಗಾಗಿಯೇ  ಕಾಯುತ್ತಿರುವಂತೆ ತೋರುತ್ತಿರುತ್ತವೆ.

TV9 Kannada


Leave a Reply

Your email address will not be published.