
Image Credit source: washingtonpost.com
ಕ್ಯಾಲಿಫೋರ್ನಿಯಾದ ಅವಳಿ ಸಹೋದರಿಯರಿಬ್ಬರು ಯೊರ್ಬಾ ಲಿಂಡಾ ಆಸ್ಪತ್ರೆಯಲ್ಲಿ ಒಂದೇ ದಿನ, ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಗಂಡುಮಕ್ಕಳಿಗೆ ಜನ್ಮ ನೀಡಿರುವುದು ಭಾರಿ ಸುದ್ದಿಯಾಗುತ್ತಿದೆ. ಇಂತಹದ್ದೇ ಘಟನೆ 2020ರಲ್ಲಿ ಇದೇ ಆಸ್ಪತ್ರೆಯಲ್ಲಿ ಅವಳಿ ಸಹೋದರಿಯರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.
ಈ ಜಗತ್ತಿನಲ್ಲಿ ಅಚ್ಚರಿಗಳ ಮೇಲೊಂದು ಅಚ್ಚರಿಗಳು ನಡೆಯುತ್ತಲೇ ಇರುತ್ತದೆ. ಅದರಂತೆ ಕ್ಯಾಲಿಫೋರ್ನಿಯಾ(California)ದಲ್ಲೂ ಒಂದು ಅಚ್ಚರಿಯ ಸಂಗತಿಯೊಂದು ನಡೆದಿದೆ. ಏನೆಂದರೆ, ಅವಳಿ(Twins) ಸಹೋದರಿಯರಿಬ್ಬರು ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಒಂದೇ ಅಳತೆಯ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜಿಲ್ ಜಸ್ಟಿನಿಯಾನಿ ಮತ್ತು ಎರಿನ್ ಚೆಪ್ಲಾ ಎಂಬ ಅವಳಿ ಸಹೋದರಿಯರು ಮೇ 5ರಂದು ಯೊರ್ಬಾ ಲಿಂಡಾ(Yorba Linda)ದ ಆಸ್ಪತ್ರೆಯಲ್ಲಿ ಕೇವಲ ಗಂಟೆಗಳ ಅಂತರದಲ್ಲಿ ತಮ್ಮ ಪುತ್ರರಿಗೆ ಜನ್ಮ ನೀಡಿದರು ಎಂದು ವರಿಯಾಗಿದೆ.
ಅದರಂತೆ, ಆಲಿವರ್ ಮತ್ತು ಸಿಲಾಸ್ ಎಂಬ ಮಕ್ಕಳು 7 ಪೌಂಡ್ಸ್ ತೂಕ, ಮೂರು ಔನ್ಸ್(Ounces) ಮತ್ತು 20 ಇಂಚು ಉದ್ದದೊಂದಿಗೆ ಜನಿಸಿದ್ದಾರೆ. ಎರಿನ್ ಅವರ ಝಾಕ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಇವರ ವಿವಾಹಕ್ಕೂ ಮುನ್ನ ಜಿಲ್, ತನ್ನ ಗರ್ಭಧಾರಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವಿವಾಹಿತ ಸಹೋದರಿಯರು 45 ನಿಮಿಷಗಳ ದೂರದ ಅಂತದಲ್ಲಿ ವಾಸಿಸುತ್ತಿದ್ದರು. ಆದರೆ, ಗರ್ಭಾವಸ್ಥೆ ಸಮಯದಲ್ಲಿ ತಮ್ಮ ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ.