
Image Credit source: Instagram
ಪಾರ್ಕ್ನಲ್ಲಿ ಆಡುತ್ತಿದ್ದಾಗ ಚೆಂಡು ಕಳೆದುಕೊಂಡ ಮುದ್ದಿನ ಸಾಕುನಾಯಿಯನ್ನು ಮಾಲೀಕ ಸಮಧಾನ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಸೂರೆಗೊಳಿಸುತ್ತಿದೆ.
ಮೂಕ ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿದರೆ ಅದು ಕೂಡ ಮನಷ್ಯರಂತೆ ವರ್ತಿಸುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳನ್ನು ಕಾಣಬಹುದು. ಪ್ರಾಣಿಗಳಿಗೂ ಭಾವನೆಗಳಿವೆ. ಅವುಗಳು ಭಾವನೆಯನ್ನು ಪ್ರೀತಿಪಾತ್ರರಲ್ಲಿ ತೋರಿಸಿಕೊಳ್ಳುತ್ತವೆ. ಅದರಂತೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, ಶ್ವಾನ ಪ್ರಿಯರ ಹೃದಯ ಕರಗುವಂತಿದೆ. ಗೋಲ್ಡನ್ ರಿಟ್ರೈವರ್ (golden retriever) ನಾಯಿಗಳು ಫ್ಯಾಮಿಲಿ ಡಾಗ್ (Family Dog)ಗಳು. ಇವುಗಳು ಎಲ್ಲರೊಂದಿಗೂ ಪ್ರೀತಿಯಿಂದ ನಡೆದುಕೊಳ್ಳುತ್ತದೆ. ಈ ನಾಯಿಗೆ ಸಂಬಂಧಿಸಿದ ವಿಡಿಯೋ (Video)ವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಎಲ್ಟನ್ ಉದ್ಯಾನವನದಲ್ಲಿ ಆಡುತ್ತಿದ್ದಾಗ ನಾಯಿ ಚೆಂಡನ್ನು ಕಳೆದುಕೊಂಡಿದೆ. ಇದರಿಂದ ಆ ನಾಯಿ ತುಂಭಾ ದುಃಖಿತವಾಗಿದ್ದು, ಸಣ್ಣ ಮಕ್ಕಳಂತೆ ಬೇಸರ ಮಾಡಿಕೊಂಡು ಕೂತಿದೆ. ಈ ನಾಯಿಯನ್ನು ಮಾಲೀಕ, ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಸಮಧಾನ ಮಾಡಿದ್ದಾರೆ. ಬೇಸರದಲ್ಲಿರುವ ನಾಯಿಯ ತಲೆ ಸವರುತ್ತಾ, ಚುಂಬಿಸುತ್ತಾ ಸಮಧಾನ ಮಾಡುತ್ತಿರುವ ವಿಡಿಯೋ ಶ್ವಾನ ಪ್ರಿಯರ ಮನಸು ಕರಗುವಂತೆ ಮಾಡುತ್ತಿದೆ. ಈ ವಿಡಿಯೋ ಬಹಳಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ.