
ಆರು ಮಂದಿ ಒಂದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವುದು
ಸಂಚಾರ ನಿಯಮ ಉಲ್ಲಂಘಿಸಿ ಆರು ಮಂದಿ ಒಂದೇ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ವಿಡಿಯೋ ಆಧರಿಸಿ ಮುಂಬೈ ಟ್ರಾಫಿಕ್ ಪೊಲೀಸ್, ಪರಿಶೀಲಿಸುವಂತೆ ಡಿಎನ್ ನಗರ ಸಂಚಾರ ವಿಭಾಗಕ್ಕೆ ನಿರ್ದೇಶಿಸಿದೆ.
ಭಾರತದಲ್ಲಿ ಸಂಚಾಯ ನಿಯಮಗಳಂತೆ ದ್ವಿಚಕ್ರ (Two wheelers) ವಾಹನಗಳಲ್ಲಿ ಇಬ್ಬರಿಗೆ ಸಂಚರಿಸುವ ಅವಕಾಶ ಇದೆ. ಅದಾಗಿಯೂ ಮೂರು ಮೂರಕ್ಕಿಂತ ಹೆಚ್ಚು ಮಂದಿಯನ್ನು ಕೂರಿಸುಕೊಂಡು ಹೋದರೆ, ಕಾನೂನು ಪ್ರಕಾರ ಶಿಕ್ಷಾರ್ಹ ಹಾಗೂ ದಂಡಕ್ಕೆ ಅರ್ಹವಾದ ಅಪರಾಧವಾಗಿದೆ. ಅದರಂತೆ ಮುಂಬೈ (Mumbai)ನ ರಸ್ತೆಯೊಂದರಲ್ಲಿ ಒಂದು ಹೋಂಡಾ ಆಕ್ಟಿವಾದಲ್ಲಿ ಆರು ಮಂದಿ ಸಂಚರಿಸುತ್ತಿರುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.