
ವಿಶ್ವದ ಹಳೇಯ ಮರ ‘ಗ್ರೇಟ್ ಅಜ್ಜ’
Image Credit source: Twitter
ದಕ್ಷಿಣ ಚಿಲಿಯಲ್ಲಿರುವ ಸೊಂಪಾದ ಅರಣ್ಯ ಪ್ರದೇಶದಲ್ಲಿ ಇರುವ ಗ್ರೇಟ್ ಅಜ್ಜ ಎಂಬ ಮರದ ವಯಸ್ಸು ಪತ್ತೆಹಚ್ಚಲಾಗಿದ್ದು, 5ಸಾವಿರ ವರ್ಷಗಳಿಗಿಂತಲೂ ಹಳೆಯ ಮರ ಇದಾಗಿದೆ ಎಂದು ಅಧ್ಯನದಿಂದ ತಿಳಿದುಬಂದಿದೆ. ಆ ಮೂಲಕ ಪೈನ್ ಮರದ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಹಳೇಯ ಮರ ಎಂಬ ಹಗ್ಗಳಿಕೆ ಪಡೆದುಕೊಂಡಿದೆ.
ದಕ್ಷಿಣ ಚಿಲಿಯಲ್ಲಿರುವ ಸೊಂಪಾದ ಅರಣ್ಯ ಪ್ರದೇಶದಲ್ಲಿ ‘ಗ್ರೇಟ್ ಅಜ್ಜ’ (Great Grandfather) ಎಂದು ಕರೆಯಲ್ಪಡುವ ಈ ಪುರಾತನ ಮರ (Tree) ವಿಶ್ವದ ಅಂತ್ಯಂತ ಹಳೇಯ ಮರ (Old Tree) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಲು ದೊಡ್ಡ ಗಾತ್ರದ ಕಾಂಡವನ್ನು ಹೊಂದಿರುವ ಗ್ರೇಟ್ ಅಜ್ಜ ಮರದ ನಿಖರವಾದ ವಯಸ್ಸನ್ನು ಯಾವ ವಿಜ್ಞಾನಿಗಳಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಹೊಸ ಅಧ್ಯಯನದ ಪ್ರಕಾರ, 5,000 ವರ್ಷಗಳಿಗಿಂತ ಹೆಚ್ಚು ಹಳೆಯ ಮರವಾಗಿದೆ. ಹಾಗಿದ್ದರೆ ಈ ಮರದ ಇನ್ನಷ್ಟು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ.