Trending: ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿದ ಬಾಣಸಿಗ, ಹೇಗೆ ತಯಾರಿಸಿದ್ದಾರೆ ನೋಡಿ | World’s largest chicken nugget made chef See how prepared


Trending: ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿದ ಬಾಣಸಿಗ, ಹೇಗೆ ತಯಾರಿಸಿದ್ದಾರೆ ನೋಡಿ

ಗಿನ್ನಿಸ್ ದಾಖಲೆ ಬರೆದ ನಿಕ್ ಡಿಜಿಯೋವನ್ನಿ

ಅಮೆರಿಕದ ಸೆಲೆಬ್ರಿಟಿ ಬಾಣಸಿಗ ನಿಕ್ ಡಿಜಿಯೊವಾನಿ ಮತ್ತು ಜಪಾನ್‌ನ ಲಿನ್ ಡೇವಿಸ್ ಅವರು ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿ ಗಿನ್ನಿಸ್ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಅಮೆರಿಕದ ಸೆಲೆಬ್ರಿಟಿ ಬಾಣಸಿಗ ನಿಕ್ ಡಿಜಿಯೊವಾನಿ (Nick DiGiovanni) ಮತ್ತು ಜಪಾನ್‌ನ ಲಿನ್ ಡೇವಿಸ್ (Lynn Davis) ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಳೆದ ಬಾರಿ 44.24 ಕೆಜಿ ತೂಕದ ವಿಶ್ವದ ಅತಿದೊಡ್ಡ ಕೇಕ್ ಪಾಪ್ ಅನ್ನು ತಯಾರಿಸಿದ್ದ ನಿಕ್, ಈ ಬಾರಿ ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ಅನ್ನು ತಯಾರಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ನಗೆಟ್ ಅನ್ನು ಯಾವ ರೀತಿ ಮಾಡಲಾಗಿದೆ ಮತ್ತು ಅದನ್ನು ತೀರ್ಪುಗಾರರು ಪರಿಶೀಲಿಸಿ ಗಿನ್ನಿಸ್ ದಾಖಲೆ ಘೋಷಿಸಿದ ವಿಡಿಯೋವನ್ನು ಶನಿವಾರ ನಿಕ್ ಡಿಜಿಯೊವಾನಿ ಅವರು ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ 24 ಗಂಟೆ ಒಳಗಾಗಿ 7.6 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, “ಈ ಇಬ್ಬರು ಅತಿದೊಡ್ಡ ಆಹಾರಕ್ಕಾಗಿ ಎಲ್ಲಾ ದಾಖಲೆಗಳನ್ನು ಪಡೆದುಕೊಳ್ಳಲಿದ್ದಾರೆ! ನಿಕ್ ಮತ್ತು ಲಿಂಜಾ ಅವರ ಇಂಥ ಎಲ್ಲಾ ವೀಡಿಯೊಗಳನ್ನು ನಾನು ಇಷ್ಟಪಡುತ್ತೇನೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

TV9 Kannada


Leave a Reply

Your email address will not be published.