Trending: 80ರ ವರ್ಷದಲ್ಲಿ ಡೆಡ್‌ಲಿಫ್ಟ್‌ ಮಾಡುತ್ತಿರುವ ಅಜ್ಜಿಯ ವಿಡಿಯೋ ವೈರಲ್ | Grandmother’s video of her deadlifting viral


ಇಂದಿನ ಪೀಳಿಗೆಯಲ್ಲಿ ವರ್ಷ 40 ದಾಟಿದರೆ ಸಾಕು, ಬಗ್ಗಿ ಏಳುವಾಗ ಅಥವಾ ಭಾರ ಎತ್ತುವಾಗ ಅಯ್ಯೋ… ಅಮ್ಮಾ… ಆಗಲ್ಲಪ್ಪಾ ಆಗಲ್ಲ ಅಂತ ಹೇಳುವವರೇ ಜಾಸ್ತಿ. ಇದಕ್ಕೆ ಕಾರಣ ಇಂದಿನ ಆಹಾರ ಪದ್ದತಿ. ಇಂಥ ಜನಗಳ ನಡುವೆ ಹಿರಿ ತಲೆಗಳೂ ಬದುಕುಳಿದಿದ್ದಾರೆ. ಅವರ ಎಷ್ಟು ಗಟ್ಟಿಮುಟ್ಟಾಗಿರುತ್ತಾರೆ ಎಂದರೆ ಯುವಕರೂ ಅಚ್ಚರಿ ಪಡುತ್ತಾರೆ. ಅದಕ್ಕೆ ಪುಷ್ಠಿ ಎಂಬಂತೆ 80 ವರ್ಷದ ಅಜ್ಜಿ(grandmother) ತನ್ನ ಮೊಮ್ಮಗನಿಗೆ ಸವಾಲಾಗಿ ಡೆಡ್‌ಲಿಫ್ಟ್‌ಗಳನ್ನು (ಭಾರ ಎತ್ತುವುದು) ಮಾಡಿದ್ದಾರೆ. ಇದರ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ವಯಸ್ಸಾದ ಮಹಿಳೆಯೊಬ್ಬರು ಬಾರ್‌ಬೆಲ್‌ (barbell)ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೆ, ತನ್ನದೇ ಅಜ್ಜಿಯ ಸಾಮರ್ಥ್ಯವನ್ನು ಕಂಡ ಮೊಮ್ಮಗ ಅಚ್ಚರಿಗೊಳಪಡುತ್ತಾನೆ. ಮೊಮ್ಮಗನ ಸವಾಲಿಗೆ 80ರ ವರ್ಷದಲ್ಲೂ ಅಜ್ಜಿ ಇಂಥ ಸಾಹಸ ಮಾಡಿರುವುದು ಮೆಚ್ಚಲೇಬೇಕು. ಈ ವಿಡಿಯೋವನ್ನು ಪಂಜಾಬಿ ಇಂಡಸ್ಟ್ರಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.  ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ, ಆಶ್ಚರ್ಯಚಕಿತರೂ ಆಗಿದ್ದಾರೆ.

TV9 Kannada


Leave a Reply

Your email address will not be published. Required fields are marked *