Trending: 89 ರೂ. ಚಾಕಲೇಟ್​ನಲ್ಲಿ ಹುಳಗಳು! 50 ಲಕ್ಷ ರೂ. ಪರಿಹಾರ ಕೋರಿದ ಗ್ರಾಹಕ, ಕೋರ್ಟ್ ಹೇಳಿದ್ದೇನು? | Consumer seeking 50 lakh compensation against chocolate company


Trending: 89 ರೂ. ಚಾಕಲೇಟ್​ನಲ್ಲಿ ಹುಳಗಳು! 50 ಲಕ್ಷ ರೂ. ಪರಿಹಾರ ಕೋರಿದ ಗ್ರಾಹಕ, ಕೋರ್ಟ್ ಹೇಳಿದ್ದೇನು?

ಚಾಕಲೇಟ್​ನಲ್ಲಿ ಹುಳ

ಅಂಗಡಿಯೊಂದರಿಂದ ಖರೀದಿಸಿದ 89 ರೂಪಾಯಿ ಮೌಲ್ಯದ ಚಾಕೊಲೇಟ್​ನಲ್ಲಿ ಹುಳುಗಳು ಪತ್ತೆಯಾಗಿದ್ದ ಪ್ರಕರಣ ಸಂಬಂಧ 2016ರಲ್ಲಿ

ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ಥಳೀಯ ಅಂಗಡಿಯೊಂದರಿಂದ ಖರೀದಿಸಿದ 89 ರೂಪಾಯಿ ಮೌಲ್ಯದ ಚಾಕೊಲೇಟ್ (Chocolate) ಬಾರ್‌ನಲ್ಲಿ ಹುಳುಗಳು (worms) ಕಂಡುಬಂದಿವೆ. ಇದರಿಂದ ಅಸಮಧಾನಗೊಂಡ ಗ್ರಾಹಕ, 20 ಲಕ್ಷದಿಂದ 50 ಲಕ್ಷ ರೂಪಾಯಿ ಪರಿಹಾರ ಕೋರಿ ನ್ಯಾಯಾಲಯ (Court)ಕ್ಕೆ ಅರ್ಜಿ ಹಾಕಿದ್ದಾನೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ ನಿವಾಸಿ ಮುಖೇಶ್‌ ಕುಮಾರ್‌ ಕೆಡಿಯಾ ಅವರು 2016ರ ಅಕ್ಟೋಬರ್​ನಲ್ಲಿ ಎಂಕೆ ರಿಟೇಲ್‌ ಸೂಪರ್‌ ಮಾರ್ಕೆಟ್‌ನಲ್ಲಿ 89 ರೂ.ಗೆ ಎರಡು ಕ್ಯಾಡ್‌ಬರಿಸ್ ಮತ್ತು ನಟ್ ಚಾಕೊಲೇಟ್ ಖರೀದಿಸಿದ್ದರು. ಆದರೆ, ಕ್ಯಾಡ್​ಬರೀಸ್​ ಚಾಕಲೇಟ್​ ಒಂದರಲ್ಲಿ ಹುಳುಗಳು ಕಂಡುಬಂದಿವೆ. ಈ ಬಗ್ಗೆ ಕಂಪನಿಯ ಗ್ರಾಹಕ ಸಹಾಯವಾಣಿಗೆ ದೂರು ನೀಡಿದರು. ಇದಕ್ಕೆ ಆ ಚಾಕಲೇಟ್​ ಅನ್ನು ಹಸ್ತಾಂತರಿಸುವಂತೆ ಕೋರಿದ್ದರು. ಇದನ್ನು ನಿರಾಕರಿಸಿದ ಮುಖೇಶ್, ಪುರಾವೆಗಳಿಗಾಗಿ ಫೋಟೋಗಳನ್ನು ಕಳುಹಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *