Tripura Assembly bypoll ತ್ರಿಪುರಾ ಉಪಚುನಾವಣೆ: ಮತಚಲಾಯಿಸಲು ಮತಗಟ್ಟೆಗೆ ಹೋಗುತ್ತಿದ್ದ ಪೊಲೀಸ್​​ ಸಿಬ್ಬಂದಿಗೆ ದುಷ್ಕರ್ಮಿಗಳಿಂದ ಇರಿತ | Tripura Assembly bypolls One cop stabbed by miscreants after he went out to cast his vote


Tripura Assembly bypoll ತ್ರಿಪುರಾ ಉಪಚುನಾವಣೆ: ಮತಚಲಾಯಿಸಲು ಮತಗಟ್ಟೆಗೆ ಹೋಗುತ್ತಿದ್ದ ಪೊಲೀಸ್​​ ಸಿಬ್ಬಂದಿಗೆ ದುಷ್ಕರ್ಮಿಗಳಿಂದ ಇರಿತ

ತ್ರಿಪುರಾದಲ್ಲಿ ಉಪಚುನಾವಣೆಗೆ ಮತದಾನ

ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಸುದೀಪ್ ರಾಯ್ ಬರ್ಮನ್ ಅವರು ತಮ್ಮ ತವರು ಕ್ಷೇತ್ರ  ಅಗರ್ತಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮತದಾರರನ್ನು ಹೆದರಿಸಲು ಬಿಜೆಪಿ  ಗೂಂಡಾಗಳನ್ನು ಬಿಟ್ಟಿದೆ. ಇದರಿಂದಾಗಿ ಅನೇಕ ಮತದಾರರು ಮತದಾನ ಕೇಂದ್ರಗಳಿಗೆ ಬಂದಿಲ್ಲ ಎಂದು ಹೇಳಿದ್ದಾರೆ

ತ್ರಿಪುರಾ: ಗುರುವಾರ ಬೆಳಗ್ಗೆ 7 ಗಂಟೆಯಿಂದ ತ್ರಿಪುರಾದಲ್ಲಿ(Tripura Assembly bypolls) ಅಗರ್ತಲಾ, ಟೌನ್ ಬರ್ದೋವಾಲಿ ಸುರ್ಮಾ ಮತ್ತು ಜುಬಾರಾಜ್‌ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಯ (bypolls)  ಮತದಾನ ಪ್ರಾರಂಭವಾಗಿದೆ. ಮತದಾರರನ್ನು ಬೆದರಿಸುತ್ತಿದ್ದಾರೆ ಮತ್ತು ಗೂಂಡಾಗಳಿಂದ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಇತ್ತೀಚಿನ ವರದಿಗಳ ಪ್ರಕಾರ ಬೆಳಗ್ಗೆ 11 ಗಂಟೆಯವರೆಗೆ ಶೇಕಡಾ 33.18 ರಷ್ಟು ಮತದಾನವಾಗಿದೆ. ಎರಡು ಸ್ಥಾನಗಳಲ್ಲಿ ಶಾಸಕರ ರಾಜೀನಾಮೆ, ಒಂದು ಶಾಸಕರ ಅನರ್ಹತೆ ಮತ್ತು ಶಾಸಕರೊಬ್ಬರ ನಿಧನದಿಂದಾಗಿ ಈ ಸ್ಥಾನಗಳಿಗೆ ಉಪಚುನಾವಣೆ ಅನಿವಾರ್ಯವಾಗಿತ್ತು. ಅಗರ್ತಲಾ (Agartala) ಕ್ಷೇತ್ರದ ಕುಂಜಾಬಾನ್ ಪ್ರದೇಶದ ನಿವಾಸಿ ಸಮೀರ್ ಸಹಾ (54) ಮತ ಚಲಾಯಿಸಲು ಮತಗಟ್ಟೆಗೆ ಹೋದಾಗ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದಾರೆ . ತನ್ನ ತಂದೆಯನ್ನು ದುಷ್ಕರ್ಮಿಗಳ ಗುಂಪು ಮತಗಟ್ಟೆಗೆ ಹೋಗದಂತೆ ತಡೆದಿದೆ ಎಂದು ಅವರ ಪುತ್ರ ಸಮರ್ ಸಹಾ ಹೇಳಿದ್ದಾರೆ. ಸಮೀರ್ ಅವರನ್ನು ತಡೆದಾಗ ಅವರು ಅದನ್ನು ನಿರ್ಲಕ್ಷಿಸಿ ಮುಂದೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಇರಿದಿದ್ದಾರೆ. ಮಾಜಿ ಶಾಸಕ ಲಲಿತ್ ಮೋಹನ್ ತ್ರಿಪುರಾ ಅವರ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಆಗಿದ್ದಾರೆ ಸಮೀರ್ ಸಹಾ. ಗಾಯಗೊಂಡ ಸಹಾ ಅವರನ್ನು ಗೋವಿಂದ್ ಬಲ್ಲಭ್ ಪಂತ್ (ಜಿಬಿಪಿ) ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜುಬಾರಾಜ್‌ನಗರ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ ಮೃಣಾಲ್ ಕಾಂತಿ ದೇಬನಾಥ್ ಅವರು ಬುಧವಾರ ರಾತ್ರಿಯಿಂದಲೇ ಗೂಂಡಾಗಳು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಗುರುವಾರ ಮತದಾರರನ್ನು ಮತ ಚಲಾಯಿಸಲು ಅನುಮತಿಸಿಲ್ಲ ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಮೋಟಾರ್‌ಸೈಕಲ್‌ನಲ್ಲಿ ಬಂದ ಗೂಂಡಾಗಳು ಅಥವಾ ‘ಬೈಕ್ ಬಾಹಿನಿ’,  ಮತದಾರರನ್ನು ಮತಗಟ್ಟೆಗಳಿಗೆ ಹೋಗುವ ದಾರಿಯಲ್ಲಿ ನಿಲ್ಲಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಕ್ಷದ ಅಗರ್ತಲಾ ಅಭ್ಯರ್ಥಿ ಪನ್ನಾ ದೇಬ್ ಆರೋಪಿಸಿದ್ದಾರೆ. ಈ ಘಟನೆಗಳು ಸಂಭವಿಸಿದ ಬೀದಿಗಳಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ದೇಬ್ ಆರೋಪಿಸಿದ್ದಾರೆ.

ಕಾಂಗ್ರೆಸ್ ವಕ್ತಾರರು ಇದೇ ರೀತಿಯ ಆರೋಪಗಳನ್ನು ಮಾಡಿದ್ದು, ಮತದಾರರು ಮತ ಚಲಾಯಿಸಲು ಮತಗಟ್ಟೆಗಳಿಗೆ ಬರದಂತೆ ಅಡ್ಡಿಪಡಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಸುದೀಪ್ ರಾಯ್ ಬರ್ಮನ್ ಅವರು ತಮ್ಮ ತವರು ಕ್ಷೇತ್ರ  ಅಗರ್ತಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮತದಾರರನ್ನು ಹೆದರಿಸಲು ಬಿಜೆಪಿ  ಗೂಂಡಾಗಳನ್ನು ಬಿಟ್ಟಿದೆ. ಇದರಿಂದಾಗಿ ಅನೇಕ ಮತದಾರರು ಮತದಾನ ಕೇಂದ್ರಗಳಿಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಜೂನ್ 26 ರಂದು ಮತಗಳ ಎಣಿಕೆ ನಡೆಯಲಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.