Tripura civic polls ತ್ರಿಪುರಾ ಸ್ಥಳೀಯ ಸಂಸ್ಥೆಗಳ ಚುನಾವಣೆ; ಬಿಗಿ ಭದ್ರತೆಯ ನಡುವೆ 222 ಸ್ಥಾನಗಳಿಗೆ ಮತ ಎಣಿಕೆ | Counting of votes the Agartala Municipal Corporation and other civic bodies in Tripura in tight security


Tripura civic polls ತ್ರಿಪುರಾ ಸ್ಥಳೀಯ ಸಂಸ್ಥೆಗಳ ಚುನಾವಣೆ; ಬಿಗಿ ಭದ್ರತೆಯ ನಡುವೆ 222 ಸ್ಥಾನಗಳಿಗೆ ಮತ ಎಣಿಕೆ

ಪ್ರಾತಿನಿಧಿಕ ಚಿತ್ರ

ಅಗರ್ತಲಾ:  ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ಮತ್ತು ತ್ರಿಪುರಾದ ಇತರ ನಾಗರಿಕ ಸಂಸ್ಥೆಗಳ 200 ಕ್ಕೂ ಹೆಚ್ಚು ಸ್ಥಾನಗಳಿಗೆ ಮತ ಎಣಿಕೆ ಭಾನುವಾರ ಪ್ರಾರಂಭವಾಯಿತು. ಅಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳ ಮೇಲಿನ ದಾಳಿಯ ಆರೋಪಗಳ ನಡುವೆಯೇ ಚುನಾವಣೆ ನಡೆದಿತ್ತು. ಎಲ್ಲಾ ಮತ ಎಣಿಕೆ ಕೇಂದ್ರಗಳಿಗೆ ಮೂರು ಹಂತದ ಭದ್ರತೆಯನ್ನು ಪೊಲೀಸರು ಏರ್ಪಡಿಸಿದ್ದಾರೆ. ಯೋಜನೆಯ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF), ತ್ರಿಪುರಾ ಪೊಲೀಸ್ ಮತ್ತು ತ್ರಿಪುರಾ ಸ್ಟೇಟ್ ರೈಫಲ್ಸ್ (TSR) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನವೆಂಬರ್ 25 ರಂದು ಒಟ್ಟು 334 ಸ್ಥಾನಗಳ ಪೈಕಿ 222 ಸ್ಥಾನಗಳಿಗೆ ನಾಗರಿಕ ಚುನಾವಣೆ ನಡೆದಿತ್ತು. ಮತದಾನದಲ್ಲಿ ಶೇ.81.54 ರಷ್ಟು ಮತದಾನವಾಗಿದೆ. ಉಳಿದ 112 ಸ್ಥಾನಗಳನ್ನು ಆಡಳಿತಾರೂಢ ಬಿಜೆಪಿ ಅವಿರೋಧವಾಗಿ ಗೆದ್ದಿದೆ. ಗುರುವಾರ ನಡೆದ ಮತದಾನದಲ್ಲಿಯೇ ಟಿಎಂಸಿ ಮತ್ತು ಸಿಪಿಐ(ಎಂ) ಮತ ದುರ್ಬಳಕೆ ಆರೋಪದ ಜೊತೆಗೆ ವಿವಿಧ ಪುರಸಭೆಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದ್ದರು. ಆದರೆ ಆಡಳಿತಾರೂಢ ಬಿಜೆಪಿ ಈ ಆರೋಪಗಳನ್ನು ತಳ್ಳಿ ಹಾಕಿತ್ತು. ತ್ರಿಪುರಾದಲ್ಲಿ ಮುನ್ಸಿಪಲ್ ಚುನಾವಣೆಯ ಸಂದರ್ಭದಲ್ಲಿ ನಡೆದ ದೊಡ್ಡ ಪ್ರಮಾಣದ ಹಿಂಸಾಚಾರದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ಸಮಿತಿಯಿಂದ ತನಿಖೆ ನಡೆಸುವಂತೆ ಕೋರಿ ಟಿಎಂಸಿ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಮತದಾನದ ದಿನದಂದು, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನವು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿರುವುದನ್ನು ಖಚಿತಪಡಿಸಿಕೊಳ್ಳಲು “ಸಾಧ್ಯವಾದಷ್ಟು ತ್ವರಿತವಾಗಿ” ಯಾವುದೇ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ (CAPF) ಹೆಚ್ಚುವರಿ ಎರಡು ಕಂಪನಿಗಳನ್ನು ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.

ಚುನಾವಣಾ ಕದನದಲ್ಲಿ ಆಡಳಿತಾರೂಢ ಬಿಜೆಪಿಯು ಈಶಾನ್ಯ ಮತ್ತು ಇತರೆಡೆಗಳಲ್ಲಿ ತನ್ನನ್ನು ತಾನು ರಾಷ್ಟ್ರೀಯ ಪಕ್ಷವಾಗಿ ಸ್ಥಾಪಿಸಲು ಮುನ್ನುಗ್ಗುತ್ತಿರುವ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮತ್ತು ಬಿಜೆಪಿ ಈ ರಾಜ್ಯದಲ್ಲಿ ಕೆಲವು ವರ್ಷಗಳಿಂದ ಅಧಿಕಾರದಿಂದ ಕೆಳಗಿಳಿದಿದ್ದ ಸಿಪಿಐ(ಎಂ) ನೊಂದಿಗೆ ಸ್ಪರ್ಧೆ ಎದುರಿಸಿತು.
ಗುರುವಾರ ನಡೆದ ಚುನಾವಣೆಯಲ್ಲಿ ಅಕ್ರಮ ಮತ ಮತ್ತು ಬೆದರಿಕೆಯನ್ನು ಆಪಾದಿಸಿದ ಟಿಎಂಸಿ, ಇಡೀ ಚುನಾವಣೆಯನ್ನು ಎದುರಿಸಲು ಒತ್ತಾಯಿಸಿದರೆ, ಸಿಪಿಐ(ಎಂ) ಎಎಂಸಿ ಸೇರಿದಂತೆ ಐದು ಮುನ್ಸಿಪಲ್ ಸಂಸ್ಥೆಗಳಿಗೆ ಹೊಸ ಚುನಾವಣೆಯನ್ನು ಕೋರಿತ್ತು.

ಬಿಜೆಪಿ ಬೆಂಬಲಿಗರು ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ದಾಳಿ ಮಾಡಿ ಚುನಾವಣೆಯಲ್ಲಿ ಅಕ್ರಮವೆಸಗಿದ್ದರಿಂದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಎರಡೂ ಪಕ್ಷಗಳು ಆರೋಪಿಸಿದ್ದವು. ಆದಾಗ್ಯೂ ಬಿಜೆಪಿ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿತು. ಒಟ್ಟಾರೆ 4.93 ಲಕ್ಷ ಮತದಾರರಲ್ಲಿ 81.54 ಪ್ರತಿಶತ ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇದನ್ನೂ ಓದಿ:  ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಖಚಿತಪಡಿಸಿಕೊಳ್ಳಲು ನೀವೇನು ಮಾಡುತ್ತಿದ್ದೀರಿ?: ತ್ರಿಪುರಾ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

TV9 Kannada


Leave a Reply

Your email address will not be published. Required fields are marked *