ಎಲ್ಲಾ ಸೀರಿಯಲ್ ತಂಡದವರು ಒಂದೊಳ್ಳೆಯ ಕಂಟೆಂಟ್ನ್ನ ಜನರಿಗೆ ತಲುಪಿಸಲು ಸಾಕಷ್ಟು ಪರಿಶ್ರಮ ಪಡುತ್ತವೆ. ಏನೇ ಎಫರ್ಟ್ ಹಾಕಿದ್ರು ಅಲ್ಟಿಮೇಟ್ಲಿ ವೀಕ್ಷಕರು ಮನಸಾರೆ ವೀಕ್ಷಿಸಿ ಹಾರೈಸಬೇಕು. ಧಾರಾವಾಹಿಗಳು ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಹತ್ತಿರವಾಗಿವೇ ಅನ್ನೋದನ್ನ ತಿಳಿಯೋಕೆ ವಾರದ ಟಿಆರ್ಪಿ ರೇಟ್ಗಾಗಿ ಎಲ್ಲಾ ಸೀರಿಯಲ್ ತಂಡಗಳು ಕಾಯುತ್ತಿರುತ್ತವೆ. ಈ ವಾರದ ಟಾಪ್ 5 ಲಿಸ್ಟ್ನಲ್ಲಿ ಯಾವೆಲ್ಲ ಸೀರಿಯಲ್ಗಳು ಸ್ಥಾನ ಪಡೆದುಕೊಂಡಿವೆ ಎಂಬುದ್ರ ಬಗ್ಗೆ ಮಾಹಿತಿ ಇಲ್ಲಿದೇ ನೋಡಿ…
ಗಟ್ಟಿಮೇಳ..ಕಳೆದ ವಾರವು ಕೂಡ ಗಟ್ಟಿಮೇಳ ಧಾರಾವಾಹಿಯ ಟಾಪ್ ಒನ್ನಲ್ಲಿ ಸ್ಥಾನ ಪಡೆದಿದೆ. ಬಜಾರಿ ಅಮ್ಮು ವೇದಾಂತ್ನ ಮದುವೆ ಆಗಿದ್ದೆ ಆಗಿದ್ದು, ಕೋಪವನ್ನ ಕಡಿಮೆ ಮಾಡಿ ಕೊಂಚ ಸೈಲೆಂಟ್ ಆಗಿದ್ದಾಳೇ.. ಮಾತ್ರವಲ್ಲದೆ ಮನೆಯ ಜವಾಬ್ದಾರಿ ಹೊತ್ತುಕೊಂಡು ಬಹಳ ಚುರುಕಾಗಿ ಕೆಲಸ ಮಾಡಿಕೊಂಡು ಲವಲವಿಕೆಯಿಂದ ಇದ್ದಾಳೆ.. ಅಮುಲ್ಯ ಈ ವರ್ತನೆ ಪ್ರೇಕ್ಷಕರಿಗೆ ಹೊಸದೆನಿಸಿದ್ರು ಇಷ್ಟಪಟ್ಟು ಸೀರಿಯಲ್ ನೋಡ್ತಿದ್ದಾರೆ..
ಎರಡನೇ ಜಾಗವನ್ನು ಪಾರು ಧಾರಾವಾಹಿ ಗಿಟ್ಟಿಸಿಕೊಂಡಿದ್ದು.. ಸದ್ಯ ಪಾರು ಹಾಗೂ ಆದಿ ಪ್ರೀತಿಯನ್ನ ಒಂದು ಮಾಡೊಕೆ ವೀರಯ್ಯ ಹರ ಸಾಹಸ ಪಡ್ತಿದ್ದಾನೆ.. ಆದ್ರೆ ಏನೆ ಮಾಡಿದ್ರು ಪಾರು ಮಾತ್ರ ಮನಸ್ಸಿನಲ್ಲಿ ಪ್ರೀತಿ ಇದ್ರೂ ಆದಿ ಬೇಡ ಅಂತಾ ಕೂತಿದ್ದಾಳೆ.. ಸದ್ಯ ಈ ಎಳೆಯಲ್ಲಿ ಧಾರಾವಾಹಿ ಸಾಗ್ತಾಯಿದ್ದು ಜನರು ಸೀರಿಯಲ್ ಬಗ್ಗೆ ಕ್ಯೂರಿಯಸ್ ಆಗಿದ್ದಾರೆ..
ಇನ್ನೂ ಮೂರನೇ ಸ್ಥಾನದಲ್ಲಿ ನಮ್ಮ ಹಿಟ್ಲರ್ ಇದ್ದಾನೆ. ಎಜೆ ಲೀಲಾ ಮದುವೆ ಆಗಿ ಎಷ್ಟೊ ದಿನ ಕಳೆದ್ರು..ಇವರಿಬ್ಬರಿಗೆ ಒಬ್ಬರ ಮೇಲೆ ಒಬ್ಬರಿಗೇ ಕೋಪದ ತಾಪ ಕಡಿಮೆಯಾಗಿಲ್ಲ.. ಸದ್ಯ ನಮ್ಮ ಎಡವಟ್ಟು ಸುಂದರಿ ಹಿಟ್ಲರ್ನ ಅಹಂಕಾರವೆನ್ನಿ ಇಳಿಸೋಕೆ ಭಾರಿ ಪ್ರಯತ್ನ ಮಾಡ್ತಾಯಿದ್ದು.. ಮುಂದೆನಾಗುತ್ತೆ ಅನ್ನೋದು ತಿಳಿಯಬೇಕಾಗಿದೆ.
ಪ್ರೀತಿಯ ಪಲ್ಲಕ್ಕಿಯಲ್ಲಿ ಸಾಗುತ್ತಿರುವ ನವದಂಪತಿ ಆರ್ಯ ಅನು ಬಾಳಲ್ಲಿ ಅನುರಾಗ ಅರುಳುವ ಸಮಯದಲ್ಲಿ ರಾಜನಂದಿನಿ ಎಂಬ ಗತಕಾಲದ ಕತೆ ತೆರೆದುಕೊಳ್ಳುತ್ತಿದ್ದು, ಅನು ಆರ್ಯನ ಬದುಕಿನ ರಹಸ್ಯವನ್ನ ಭೇದಿಸುವಲ್ಲಿ ನಿರತಳಾಗಿದ್ದಾಳೆ. ಈ ರೀತಿ ಸಾಗುತ್ತಿರುವ ಜೊತೆ ಜೊತೆಯಲಿ ಸೀರಿಯಲ್ 4ನೇ ಸ್ಥಾನವನ್ನ ಅಲಂಕರಿಸಿದ್ದಾನೆ.
ಇನ್ನೂ 5ನೇ ಸ್ಥಾನದಲ್ಲಿ ಮಂಗಳ ಗೌರಿ ಮದುವೆ ಧಾರಾವಾಹಿಯಿದೆ.. ಸದ್ಯ ಈ ಧಾರಾವಾಹಿ 2750 ಎಪಿಸೋಡ್ಗಳನ್ನ ಕಂಪ್ಲೀಟ್ ಮಾಡಿರುವ ಖುಷಿ ಒಂದೆಡೆ.. ಹಾಗೂ ರಾಜೀವ್ ಪಾತ್ರಕ್ಕೆ ಹೊಸ ನಟನ ಎಂಟ್ರಿ.. ಎರಡು ಕೂಡ ವಿಕ್ಷಕರಿಗೆ ಕೊಂಚ ಶಾಕ್ ನೀಡಿದೆ..
ಒಟ್ನಲ್ಲಿ ಈ ಐದು ಸೀರಿಯಲ್ಗಳು ತಮ್ಮ ಕಂಟೆಂಟ್ಗಳ ಮೂಲಕ ಜನರನ್ನ ರಂಜಿಸಿ ಒಳ್ಳೆಯ ಟಿಆರ್ಪಿಯನ್ನ ಗಿಟ್ಟಿಸಿಕೊಂಡಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿವೆ.