Tumakur: ಭೀಮಾನಾಯ್ಕನ ತಾಂಡಾದಲ್ಲಿ ತಡರಾತ್ರಿ ಜೋಡಿ ಕೊಲೆ; ಗ್ರಾ.ಪಂ. ಉಪಾಧ್ಯಕ್ಷರ ಹತ್ಯೆ | Murder Case Tumkur Gram Panchayat Vice President Dead Crime News


Tumakur: ಭೀಮಾನಾಯ್ಕನ ತಾಂಡಾದಲ್ಲಿ ತಡರಾತ್ರಿ ಜೋಡಿ ಕೊಲೆ; ಗ್ರಾ.ಪಂ. ಉಪಾಧ್ಯಕ್ಷರ ಹತ್ಯೆ

ಪ್ರಾತಿನಿದಿಕ ಚಿತ್ರ

ತುಮಕೂರು: ಇಲ್ಲಿನ ಭೀಮಾನಾಯ್ಕನ ತಾಂಡಾದಲ್ಲಿ ತಡರಾತ್ರಿ ಜೋಡಿ ಕೊಲೆಯಾದ ದುರ್ಘಟನೆ ಸಂಭವಿಸಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶೋಕ್ (46) ಹಾಗೂ ಸೋಮೇಶ್ವರ್ ನಾಯ್ಕ (35) ಕೊಲೆಯಾದವರು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಶೋಕ್ ನಾಗರಾಜ್ ನಾಯ್ಕ್ ಎಂಬವರ ಬಳಿ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ. ಸಾಲದ ಹಣ ವಾಪಸ್ ಕೊಡದ ವಿಚಾರಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ. ನಾಗರಾಜ್ ನಾಯ್ಕ್ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಿನ್ನೆ ಮಧ್ಯರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಹೇಳಲಾಗಿದೆ. ನಾಗರಾಜ ನಾಯ್ಕ ತನ್ನದೇ ಟಾಟಾ ಏಸ್ ವಾಹನದಿಂದ ಡಿಕ್ಕಿ ಹೊಡೆದು ಕೊಲೆ ಮಾಡಿರೋ ಆರೋಪ ಕೇಳಿಬಂದಿದದೆ. ಇದೀಗ ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಲು ಆರಂಭಿಸಿದ್ದಾರೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆರೆಗೆ ಉರುಳಿದ ಕೆಎಸ್​ಆರ್​ಟಿಸಿ ಬಸ್; ಅದೃಷ್ಟವಷಾತ್ ಪ್ರಯಾಣಿಕರು ಪಾರು

ಇದನ್ನೂ ಓದಿ: ಪಟಾಕಿ ತರಲು ಹೋಗಿದ್ದ ವಿದ್ಯಾರ್ಥಿಯ ಅಪಹರಣ ಮತ್ತು ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

TV9 Kannada


Leave a Reply

Your email address will not be published. Required fields are marked *