Tv9 Exclusive: ತೈವಾನ್ ಮೇಲಿನ ದಾಳಿ ಚೀನಾ ಆರ್ಥಿಕತೆಗೆ ಆತ್ಮಹತ್ಯೆಯಂಥ ನಿರ್ಧಾರವಾದೀತು; ನಿಲೇಶ್ ಶಾ | Nilesh Shah Member of PM Narendra Modis Economic Council Analyses China Taiwan Struggle in Indian Perspective


Nilesh Shah: ಈ ಹಂತದಲ್ಲಿ ಚೀನಾ ಏನಾದರೂ ತೈವಾನ್ ಮೇಲೆ ದಾಳಿ ಮಾಡಿದರೆ ಅದು ಚೀನಾದ ಆರ್ಥಿಕತೆಯ ಪಾಲಿಗೆ ಆತ್ಮಹತ್ಯೆಗೆ ಸಮನಾದ ನಿರ್ಧಾರವಾಗುತ್ತದೆ. ಚೀನಾದ ಅಭಿವೃದ್ಧಿ ಓಟದ ಅಂತ್ಯಕ್ಕೆ ಈ ದಾಳಿ ಮುನ್ನುಡಿ ಬರೆದೀತು ಎಂದು ನಿಲೇಶ್ ಶಾ ಎಚ್ಚರಿಸಿದರು.

Tv9 Exclusive: ತೈವಾನ್ ಮೇಲಿನ ದಾಳಿ ಚೀನಾ ಆರ್ಥಿಕತೆಗೆ ಆತ್ಮಹತ್ಯೆಯಂಥ ನಿರ್ಧಾರವಾದೀತು; ನಿಲೇಶ್ ಶಾ

ತೈವಾನ್​ನಲ್ಲಿ ಚೀನಾ ಮಿಲಿಟರಿ ತಾಲೀಮು (ಎಡಚಿತ್ರ), ನಿಲೇಶ್ ಶಾ (ಬಲಚಿತ್ರ)

Image Credit source: Agencies

ಬೆಂಗಳೂರು: ತೈವಾನ್ ದೇಶವನ್ನು ಅಸಹಾಯಕ ಪುಟ್ಟ ರಾಷ್ಟ್ರ ಎಂದುಕೊಂಡು ಚೀನಾ (China Taiwan tension) ಏನಾದರೂ ದಾಳಿ ನಡೆಸಲು ಮುಂದಾದರೆ ಅದು ಚೀನಾದ ಪಾಲಿಗೆ ಆತ್ಮಾಘಾತುಕ ನಿರ್ಧಾರವಾಗಲಿದೆ. ಹೂಡಿಕೆದಾರರು  (Investors) ಚೀನಾದಿಂದ ಹೊರನಡೆಯುವ ಸಾಧ್ಯತೆಯಿದ್ದು, ಅಲ್ಲಿನ ಆರ್ಥಿಕ ವ್ಯವಸ್ಥೆ (China Economy) ಸಂಪೂರ್ಣ ಕುಸಿಯುವ ಸಾಧ್ಯತೆಯಿದೆ. ವಿಶ್ವಮಟ್ಟದಲ್ಲಿ ಚೀನಾದ ಆರ್ಥಿಕ ಪ್ರಾಬಲ್ಯಕ್ಕೂ ಈ ಬೆಳವಣಿಗೆಯಿಂದ ಧಕ್ಕೆಯಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯ (Economic Advisory Council) ಹಾಗೂ ಕೋಟಕ್ ಅಸೆಟ್ ಮ್ಯಾನೇಜ್​ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಿಲೇಶ್ ಶಾ (Nilesh Shah) ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ (ಆಗಸ್ಟ್ 6) ‘ಎನ್​ಜೆ ವೆಲ್ತ್​’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘2030ರಲ್ಲಿ ಭಾರತ, ಅಭಿವೃದ್ಧಿಯ ದೀರ್ಘಾವಧಿ ಮುನ್ನೋಟ’ ([email protected]: India’s Long Term Growth Story) ವಿಷಯ ಕುರಿತು ಸುದೀರ್ಘ ಉಪನ್ಯಾಸ ಮಾಡಿದ ಅವರು, ಚೀನಾ-ತೈವಾನ್ ಸಂಘರ್ಷದ ಸಂಭಾವ್ಯ ಆರ್ಥಿಕ ಪರಿಣಾಮಗಳನ್ನು ವಿಶ್ಲೇಷಿಸಿದರು.

ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳಗಳಿಗೆ ಹೋಲಿಸಿಕೊಂಡು ಉಳಿದ ದೇಶಗಳು ತಾವು ಸಬಲವಾಗಿರುವುದಾಗಿ ಬೀಗುತ್ತಿವೆ. ಇದೊಂದು ರೀತಿ ಹೆಚ್ಚು ಮಾಸಿದ ಬಟ್ಟೆ ತೊಟ್ಟವರ ಪಕ್ಕದಲ್ಲಿ ಕಡಿಮೆ ಮಾಸಿದವರು ಖುಷಿ ಪಡುವ ಮನಸ್ಥಿತಿ. ಆದರೆ ಈಗ ಯಾವುದೇ ದೇಶದಲ್ಲಿ ಆಗುವ ಬೆಳವಣಿಗೆಯ ಪರಿಣಾಮ ಮತ್ತೊಂದು ದೇಶವನ್ನು ಬಾಧಿಸುವುದಿಲ್ಲ ಎಂದು ಹೇಳಲು ಆಗದ ಪರಿಸ್ಥಿತಿಯಲ್ಲಿದ್ದೇವೆ. ಬೆಳವಣಿಗೆಯ ಭರವಸೆ ನೀಡಿದ್ದ ಟರ್ಕಿ, ಬ್ರೆಜಿಲ್, ದಕ್ಷಿಣ ಆಫ್ರಿಕಾಗಳಲ್ಲಿಯೂ ಆರ್ಥಿಕ ಪರಿಸ್ಥಿತಿ ವಿಷಮಿಸಿದೆ. ಈಗಾಗಲೇ ಅವು ಕುಸಿತದತ್ತ ಸಾಗುತ್ತಿವೆ. ಚೀನಾ ಸಹ ಇದಕ್ಕೆ ಹೊರತಾಗಿಲ್ಲ. ಈ ಹಂತದಲ್ಲಿ ಚೀನಾ ಏನಾದರೂ ತೈವಾನ್ ಮೇಲೆ ದಾಳಿ ಮಾಡಿದರೆ ಅದು ಚೀನಾದ ಆರ್ಥಿಕತೆಯ ಪಾಲಿಗೆ ಆತ್ಮಹತ್ಯೆಗೆ ಸಮನಾದ ನಿರ್ಧಾರವಾಗುತ್ತದೆ. ಚೀನಾದ ಅಭಿವೃದ್ಧಿ ಓಟದ ಅಂತ್ಯಕ್ಕೆ ಈ ದಾಳಿ ಮುನ್ನುಡಿ ಬರೆದೀತು ಎಂದು ಎಚ್ಚರಿಸಿದರು.

ಭಾರತದ ಷೇರುಪೇಟೆಯ ಏರಿಳಿತ ಮತ್ತು ಜಾಗತಿಕ ವಿದ್ಯಮಾನಗಳನ್ನು ವಿಭಿನ್ನ ರೀತಿಯಲ್ಲಿ ಹೋಲಿಸಿದ ಅವರು, ಮೆಕ್ಸಿಕೊದಂಥ ಪ್ರಗತಿಯ ಭರವಸೆ ಮೂಡಿಸಿದ್ದ ದೇಶಗಳಲ್ಲಿ ಆರ್ಥಿಕ ಕುಸಿತದ ವಾತಾವರಣ ರೂಪುಗೊಂಡ ನಂತರ ತೃತೀಯ ಜಗತ್ತಿನ ಅಭಿವೃದ್ಧಿಶೀಲ ದೇಶಗಳಲ್ಲಿ ಹೂಡಿಕೆ ಹಿಂದಕ್ಕೆ ಪಡೆದುಕೊಳ್ಳಲೂ ಅವಕಾಶವಿಲ್ಲದಂತಾಯಿತು. ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿದ ಹೆದರಿದ ಕೆಲ ವಿದೇಶಿ ಸಾಂಸ್ಥಿಕ ಹೂಡಿದಾರರು ಭಾರತದಿಂದ ಹೂಡಿಕೆ ಹಿಂಪಡೆಯಲು ಮುಗಿಬಿದ್ದರು. ಆದರೆ ಇಲ್ಲಿ ಮಾತ್ರ ಬೇರೆಯದ್ದೇ ಆದ, ಮಹತ್ವದ ವಿದ್ಯಮಾನವೊಂದಕ್ಕೆ ಈ ಬೆಳವಣಿಗೆ ಕಾರಣವಾಯಿತು ಎಂದು ಹೇಳಿದರು.

TV9 Kannada


Leave a Reply

Your email address will not be published. Required fields are marked *