TV9 Kannada Digital Live: ವಿಧಾನ ಪರಿಷತ್ ಚುನಾವಣೆ: ರಾಜ್ಯದಲ್ಲಿ ಪರಿಷತ್ ಫೈಟ್ ಜನರಿಗೇನು ಲಾಭ? ವೀಕ್ಷಿಸಿ ಲೈವ್​ | TV9 Kannada Digital Live; Vidhan Parishad Election 2022 Pre Election Discussion



ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಚುನಾವಣೆಯ ಮೂಲಕ ಮೂರು ಪಕ್ಷಗಳು ಯಾವ ರೀತಿಯ ರಾಜಕೀಯ ಲಾಭ ಪಡೆಯಲು ಲೆಕ್ಕಾಚಾರ ಹಾಕಿವೆ ಎಂದು ಕಾದು ನೋಡಬೇಕಿದೆ.  

TV9kannada Web Team


| Edited By: ಗಂಗಾಧರ್​ ಬ. ಸಾಬೋಜಿ

May 24, 2022 | 3:41 PM




ಬೆಂಗಳೂರು: ವಿಧಾನ ಪರಿಷತ್​ನ ( Vidhan Parishad Election 2022) ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಪದವೀಧರ ಕ್ಷೇತ್ರಗಳ ಎರಡು ಮತ್ತು ಶಿಕ್ಷಕರ ಕ್ಷೇತ್ರಗಳ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯವ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೇ 19ರಂದು ಪರಿಷತ್​ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನವಾಗಿದ್ದು, ಜೂನ್ 13ರಂದು ಮತದಾನ ಮತ್ತು ಜೂನ್ 15ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಚುನಾವಣೆಯ ಮೂಲಕ ಮೂರು ಪಕ್ಷಗಳು ಯಾವ ರೀತಿಯ ರಾಜಕೀಯ ಲಾಭ ಪಡೆಯಲು ಲೆಕ್ಕಾಚಾರ ಹಾಕಿವೆ ಎಂದು ಕಾದು ನೋಡಬೇಕಿದೆ.

7 ಸ್ಥಾನಗಳಿಗೆ ನಡೆಯುವ ವಿಧಾನ ಪರಿಷತ್​ ಚುನಾವಣೆಗೆ ಇಂದು (ಮೇ 24) ಬಿಜಿಪಿ ಅಭ್ಯರ್ಥಿಗಳ ಹೆಸರು (BJP Candidates Names) ಪ್ರಕಟವಾಗಿದೆ. ಎಸ್​ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಹೇಮಲತಾ ನಾಯಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಎಸ್.ಕೇಶವಪ್ರಸಾದ್​ಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್​ ತೊರೆದು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿಗೆ ಬಿಜೆಪಿ ಟಿಕೆಟ್​ ಫೈನಲ್ ಮಾಡಿದೆ. ಈ ಮೂಲಕ ಪಕ್ಷದ ಉಪಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಾರಿ ನಿರಾಸೆ ಮೂಡಿದೆ.

ಜೆಡಿಎಸ್​​ ಅಭ್ಯರ್ಥಿಯಾಗಿ ಟಿ.ಎ ಶರವಣ ಆಯ್ಕೆಯಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಂಗಳವಾರ ಟಿ.ಎ ಶರವಣರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಎರಡನೇ ಬಾರಿಗೆ ವಿಧಾನ ಪರಿಷತ್​ಗೆ ಆಯ್ಕೆಯಾಗಿದ್ದಾರೆ. ಇಂದು ನಾಮಪತ್ರ ಸಲ್ಲಿಕೆ ಮಾಡಿದರು.

ನಾಗರಾಜ್ ಯಾದವ್ ಮತ್ತು ಅಬ್ದುಲ್​​ ಜಬ್ಬಾರ್​ಗೆ ಟಿಕೆಟ್​ ನೀಡಿ ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಅಂತಿಮಗೊಳಿಸಿದೆ. ದಾವಣಗೆರೆ ಮೂಲದ ಅಬ್ದಲ್ ಜಬ್ಬಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಹಿಂದೆ ಕೂಡಾ ವಿಧಾನ ಪರಿಷತ್ ಸದಸ್ಯರಾಗಿದ್ದರು.

TV9 Kannada


Leave a Reply

Your email address will not be published. Required fields are marked *