ಐಪಿಎಲ್ ಮೆಗಾ ಆಕ್ಷನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಂಡರ್-19 ಟೀಂನ ಆಲ್ರೌಂಡರ್ ರಾಜವರ್ಧನ್ನನ್ನ 1.5 ಕೋಟಿಗೆ ಖರೀದಿಸಿದ್ದು, ತಂಡಕ್ಕೆ ಸೇರ್ಪಡೆಗೊಂಡ ರಾಜವರ್ಧನ್, ಎಂ.ಎಸ್ ಧೋನಿಯನ್ನ ಹಾಡಿ ಹೊಗಳಿದ್ದಾರೆ.
ನಾನು ಧೋನಿಯ ಬಹುದೊಡ್ಡ ಫ್ಯಾನ್. ಕ್ರಿಕೆಟ್ನಲ್ಲಿ ನಮಗೆ ತರಭೇತಿ ನೀಡುವಂತಹ ಅನೇಕ ಕೋಚ್ಗಳಿರುತ್ತಾರೆ. ಆದರೆ ಧೋನಿ ನನಗೆ ಯಾವುದೇ ಸಂದರ್ಭದಲ್ಲಿ ಸದೃಢ ಮನಸ್ಥಿತಿಯನ್ನ ಯಾವ ರೀತಿ ಹೊಂದಿರಬೇಕು ಅನ್ನೋ ವಿಚಾರದ ಬಗ್ಗೆ ತಿಳಿ ಹೇಳಿದ್ದಾರೆ. ಧೋನಿ ಪಂದ್ಯವನ್ನಾಡುವ ರೀತಿ ಅನೇಕರಿಗೆ ಸ್ಫೂರ್ತಿದಾಯಕ ಎಂದಿದ್ದಾರೆ.
ನಾನು ಎಂ.ಎಸ್.ಧೋನಿಯ ಅಪ್ಪಟ ಅಭಿಮಾನಿ. ನನ್ನ ತಂದೆ ಕೂಡ ಧೋನಿಯ ಅಭಿಮಾನಿ. ನನ್ನ ತಂದೆ ನಾನು ಯಾವಾಗಲೂ ಸಿಎಸ್ಕೆ ಪರ ಆಡಬೇಕು ಎಂದು ಬಯಸುತ್ತಾರೆ. ಧೋನಿಯೊಂದಿಗೆ ಇರಲು ನಾನೂ ಕೂಡ ಇಷ್ಟಪಡುತ್ತೇನೆ ಈ ವಿಚಾರದಲ್ಲಿ ನನಗೆ ತುಂಬಾ ಖುಷಿ ಇದೆ ಎಂದಿದ್ದಾರೆ.
ಕಳೆದ ತಿಂಗಳಲ್ಲಿ ನಡೆದ ಕಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ರಾಜವರ್ಧನ್ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದಾರೆ. ಆಲ್ರೌಂಡರ್ ಆಗಿ ಆಡಿರುವ 6 ಪಂದ್ಯಗಳಲ್ಲಿ 185 ಸ್ಟ್ರೈಕ್ರೇಟ್ನೊಂದಿಗೆ 5 ವಿಕೆಟ್ಗಳನ್ನ ಕಬಳಿಸಿ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
A massive @msdhoni fan, Rajvardhan Hangargekar cannot wait to don the @ChennaiIPL‘s yellow to fulfill his father’s dream. ☺️👏
He shares his emotions after winning the #U19CWC & getting picked by CSK for #TATAIPL. 👍 👍 – By @28anand
Full interview 🎥🔽https://t.co/Yb72KIuVg9 pic.twitter.com/Fnq20XJ1E9
— IndianPremierLeague (@IPL) February 18, 2022