UAEನಲ್ಲಿ T20 ವಿಶ್ವಕಪ್​, ಐಸಿಸಿ ಅಧಿಕೃತ ಪ್ರಕಟಣೆ

UAEನಲ್ಲಿ T20 ವಿಶ್ವಕಪ್​, ಐಸಿಸಿ ಅಧಿಕೃತ ಪ್ರಕಟಣೆ

ಭಾರತದಲ್ಲಿ ನಡೆಯಬೇಕಿದ್ದ ಮುಂಬರುವ ಟಿ20 ವಿಶ್ವಕಪ್​ ಟೂರ್ನಿಯನ್ನ ಯುಎಇಗೆ ಸ್ಥಳಾಂತರ ಮಾಡಿರುವುದನ್ನ ಅಂತರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ ಇಂದು ಅಧಿಕೃತವಾಗಿ ಪ್ರಕಟಿಸಿದೆ. ಅಕ್ಟೋಬರ್​​ 17ರಿಂದ ನವೆಂಬರ್​​ 14ರವರೆಗೆ ಟೂರ್ನಿಯನ್ನ ಆಯೋಜನೆ ಮಾಡಲಾಗಿದೆ ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ದುಬೈ, ಅಬುಧಾಬಿ, ಶಾರ್ಜಾ ಹಾಗೂ ಒಮನ್​ನ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಕೊನೆ ಕ್ಷಣದವರೆಗೂ ಭಾರತದಲ್ಲೇ 2021ರ ಚುಟುಕು ವಿಶ್ವಕಪ್​ ಟೂರ್ನಿಯ ಆಯೋಜನೆಗೆ ಬಿಸಿಸಿಐ ಪ್ರಯತ್ನ ನಡೆಸಿತ್ತು. ಆದ್ರೆ, ಕೊರೊನಾತಂಕದ ಹಿನ್ನೆಲೆಯಲ್ಲಿ ಯುಎಇನಲ್ಲಿ ಟೂರ್ನಿಯನ್ನ ನಡೆಸಲು ಬಿಸಿಸಿಐ ಅನುಮತಿ ಕೋರಿತ್ತು. ನಿನ್ನೆ ಈ ಬಗ್ಗೆ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಯುಎಇನಲ್ಲಿ ಟೂರ್ನಿ ಆಯೋಜನೆಗೆ ಮಂಡಳಿ ಅಂತಿಮ ತೀರ್ಮಾನ ಕೈಗೊಂಡಿದೆ. ಈ ತೀರ್ಮಾನವನ್ನ ಐಸಿಸಿಗೆ ರವಾನೆ ಮಾಡಿರೋದಾಗಿ ಮಾಹಿತಿ ನೀಡಿದ್ರು. ಇದೀಗ ಐಸಿಸಿ ಈ ಮನವಿಯನ್ನ ಪುರಸ್ಕರಿಸಿದ್ದು, ಯುಎಇನಲ್ಲಿ ಆಯೋಜಿಸಲು ಗ್ರೀನ್​ಸಿಗ್ನಲ್​ ನೀಡಿದೆ.

The post UAEನಲ್ಲಿ T20 ವಿಶ್ವಕಪ್​, ಐಸಿಸಿ ಅಧಿಕೃತ ಪ್ರಕಟಣೆ appeared first on News First Kannada.

Source: newsfirstlive.com

Source link