ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ UAE ಯಿಂದ ಪ್ರತಿಷ್ಠಿತ ಗೋಲ್ಡನ್ ವೀಸಾ ಪಡೆದ ಮೊದಲ ತಮಿಳು ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
UAE ಅಧಿಕಾರಿಗಳಿಂದ ವೀಸಾ ಸ್ವೀಕರಿಸುತ್ತಿರುವ ಫೋಟೋವನ್ನು ಸ್ವತಃ ತ್ರಿಷಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. 10 ವರ್ಷಗಳ ಅವಧಿಯ ವೀಸಾ ಇದಾಗಿದ್ದು, ಇದು ತನ್ನಿಂತಾನೇ ನವೀಕರಣಗೊಳ್ಳುತ್ತದೆ. ಈಗಾಗಲೇ ಶಾರುಖ್, ಬೋನಿ ಕಪೂರ್, ಜಾಹ್ನವಿ, ಮೋಹನ್‌ಲಾಲ್, ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ ಕೂಡ ಗೋಲ್ಡನ್ ವೀಸಾ ಪಡೆದಿದ್ದಾರೆ.
ಯುಎಇ ಸರ್ಕಾರವು 2019 ರಲ್ಲಿ ಗೋಲ್ಡನ್ ವೀಸಾ ಪ್ರಾರಂಭಿಸಿದೆ. ಇದು ಹೂಡಿಕೆದಾರರು, ಉದ್ಯಮಿಗಳು, ವೃತ್ತಿಪರರು ಮತ್ತು ವಿಜ್ಞಾನ, ಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಪ್ರತಿಭೆಗಳು ಈ ವೀಸಾಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತ್ತು ಈ ವೀಸಾ ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ.
Happy and privileged to be the first Tamil actor to have received the golden visa😀
Thank you🙏🏻 @emiratesfirst
@jamadusman @rjrijin
@efirstglobal @alsaadgdrfa @gdrfa @dubai #uaegovernment #dubaiculture pic.twitter.com/MgCnwtZj5m— Trish (@trishtrashers) November 3, 2021