Udaya TV: ಹೆಣ್ಣಿನ ಸಾಧನೆ-ವೇದನೆಯ ಕಥೆಯೇ ‘ಜನನಿ’; ಉದಯ ಟಿವಿಯಲ್ಲಿ ಹೊಸ ಸೀರಿಯಲ್​ | Udaya TV new serial Janani go on air from 15th August


Janani Kannada Serial: ‘ಜನನಿ’ ಧಾರಾವಾಹಿಯ ಕಥಾನಾಯಕಿಯಾಗಿ ವರ್ಷಿಕಾ ನಟಿಸುತ್ತಿದ್ದಾರೆ. ಹೀರೋ ಆಗಿ ಮಂಗಳೂರಿನ ಪ್ರತಿಭೆ ಕಿರಣ್ ಪರಿಚಯಗೊಳ್ಳುತ್ತಿದ್ದಾರೆ.

Udaya TV: ಹೆಣ್ಣಿನ ಸಾಧನೆ-ವೇದನೆಯ ಕಥೆಯೇ ‘ಜನನಿ’; ಉದಯ ಟಿವಿಯಲ್ಲಿ ಹೊಸ ಸೀರಿಯಲ್​

‘ಜನನಿ’ ಧಾರಾವಾಹಿಯ ತಂಡ

ಧಾರಾವಾಹಿಗಳಿಗೆ ಹೆಸರಾದ ‘ಉದಯ ಟಿವಿ’ಯಲ್ಲಿ ದಶಕಗಳಿಂದ ಬಗೆಬಗೆಯ ಸೀರಿಯಲ್​ಗಳು ಪ್ರಸಾರ ಕಂಡಿವೆ. ಇತ್ತೀಚಿನ ದಿನಗಳಲ್ಲಿ ‘ಸೇವಂತಿ’, ‘ಸುಂದರಿ’, ‘ನೇತ್ರಾವತಿ’, ‘ಗೌರಿಪುರದ ಗಯ್ಯಾಳಿಗಳು’, ‘ನಯನತಾರ’, ‘ರಾಧಿಕಾ’ ಮುಂತಾದ ಧಾರಾವಾಹಿಗಳ (Kannada Serial) ಮೂಲಕ ಜನರಿಗೆ ಇಂಟರೆಸ್ಟಿಂಗ್​ ಕಥೆಗಳನ್ನು ನೀಡಿದ ‘ಉದಯ’ ವಾಹಿನಿ (Udaya TV) ಈಗ ಒಂದು ಹೊಸ ಸೀರಿಯಲ್​ ಮೂಲಕ ಜನರನ್ನು ರಂಜಿಸಲು ಸಜ್ಜಾಗಿದೆ. ಆಗಸ್ಟ್ 15ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಈ ಸೀರಿಯಲ್​ ಪ್ರಸಾರ ಆಗಲಿದೆ. ಈ ಧಾರಾವಾಹಿ ಹೆಸರು ‘ಜನನಿ’ (Janani Serial). ಈ ನೂತನ ಸೀರಿಯಲ್​ನಲ್ಲಿ ಯಾವ ಕಥೆ ಇದೆ? ಇಲ್ಲಿದೆ ವಿವರ..

ಕೌಟುಂಬಿಕ ಕಥಾಹಂದರದ ಧಾರಾವಾಹಿಗಳನ್ನು ನೀಡುವಲ್ಲಿ ಉದಯ ವಾಹಿನಿ ಫೇಮಸ್​. ಈಗ ‘ಜನನಿ’ ಕೂಡ ಅದೇ ಪ್ರಕಾರಕ್ಕೆ ಸೇರುವಂತಹ ಕಥೆಯನ್ನು ಹೊಂದಿದೆ. ಇದು ಫ್ಯಾಮಿಲಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗಲಿದೆ. ಈ ಧಾರಾವಾಹಿಯ ಕಥೆಯಲ್ಲಿ ಬರುವ ಕಥಾನಾಯಕಿ ಜನನಿಯ ತಂದೆ ರಾತ್ರಿ ಹಗಲು ಎನ್ನದೇ ತುಂಬ ಕಷ್ಟಪಡುತ್ತಾರೆ. ಮಗಳು ದೊಡ್ಡ ಸಾಧಕಿ ಆಗಬೇಕು ಎಂಬ ಆಸೆಯಿಂದ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಾರೆ. ಅಷ್ಟರಲ್ಲೇ ಟ್ವಿಸ್ಟ್​ ಎದುರಾಗುತ್ತದೆ. ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಅವಳ ಮದುವೆ ನಡೆಯುತ್ತದೆ!

ಜನನಿ ಬಹಳ ನಿರೀಕ್ಷೆಯಿಂದ ತನ್ನ ಗುರಿಯನ್ನು ಹೊತ್ತು ಮದುವೆ ಮಾಡಿಕೊಂಡು ಹೋಗುತ್ತಾಳೆ. ಒರ್ವ ಹೆಣ್ಣು  ತನ್ನಲ್ಲಿರುವ ಪ್ರತಿಭೆಯಿಂದ ಅಂದುಕೊಂಡ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ, ಗಂಡನ ಮನೆಯಲ್ಲಿ ಹಾಗು ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ತೋರಿಸಲಾಗುತ್ತದೆ. ಆಕೆ ಹೋರಾಡಿ ಸಾಧನೆ ಮಾಡುವುದರ ಜೊತೆಗೆ ತನ್ನಂತಹ ಇತರ ಹೆಣ್ಣು ಮಕ್ಕಳಿಗೆ ಹೇಗೆ ಸ್ಫೂರ್ತಿ ಆಗುತ್ತಾಳೆ ಎಂಬುದರ ಮೂಲಕ ಒಂದು ಹೆಣ್ಣಿನ ಸಾಧನೆ ಹಾಗೂ ಅದರ ಹಿಂದೆ ಇರುವ ವೇದನೆಯನ್ನು ‘ಜನನಿ’ ಧಾರಾವಾಹಿ ಸಾರಿ ಹೇಳಲಿದೆ.

‘ಜನನಿ’ ಧಾರಾವಾಹಿಯು ಚಿ. ಗುರುದತ್ ಅವರ ನಿರ್ಮಾಣ ಸಂಸ್ಥೆಯಾದ ‘ಶಾರದಾಸ್ ಸಿನಿಮಾಸ್’ ಮೂಲಕ ತಯಾರಾಗುತ್ತಿದೆ. ಹೊನ್ನೇಶ್ ರಾಮಚಂದ್ರಯ್ಯ ಅವರ ನಿರ್ದೇಶನ ಮಾಡುತ್ತಿದ್ದಾರೆ. ಕಥಾನಾಯಕಿಯಾಗಿ ವರ್ಷಿಕಾ ನಟಿಸುತ್ತಿದ್ದಾರೆ. ನಾಯಕಿಯ ತಂದೆ-ತಾಯಿಯಾಗಿ ಪ್ರದೀಪ್ ತಿಪಟೂರ್ ಮತ್ತು ದಿವ್ಯಾ ಗೋಪಾಲ್ ಬಣ್ಣ ಹಚ್ಚುತ್ತಿದ್ದಾರೆ. ಕಥಾನಾಯಕನಾಗಿ ಮಂಗಳೂರಿನ ಪ್ರತಿಭೆ ಕಿರಣ್ ಅಭಿನಯಿಸುತ್ತಿದ್ದಾರೆ.

ಈ ಸೀರಿಯಲ್​ ಮೂಲಕ ಕಿರಣ್​ ಅವರು ಜನರಿಗೆ ಪರಿಚಯಗೊಳ್ಳುತ್ತಿದ್ದಾರೆ. ನಾಯಕನ ತಾಯಿಯಾಗಿ ಪುಷ್ಪ ಸ್ವಾಮಿ ನಟಿಸುತ್ತಿದ್ದಾರೆ. ‘ಮಾಂಗಲ್ಯ’ ಧಾರಾವಾಹಿ ಖ್ಯಾತಿಯ ಮುನಿ ಅವರು ನಾಯಕನ ಅಣ್ಣನಾಗಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣ್, ಅರುಣ್, ಶ್ವೇತಾ, ರೂಪಾ, ಶಿಲ್ಪಾ ಅಯ್ಯರ್ ಕೂಡ ಈ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *