Udupi Paryaya 2022: ಕೊರೊನಾ ಹಿನ್ನೆಲೆ ಸರಳ ಪರ್ಯಾಯ ಮಹೋತ್ಸವ; ಹೇಗಿರಲಿದೆ ಈ ಬಾರಿಯ ಉಡುಪಿ ಪರ್ಯಾಯ? | Udupi Paryaya 2022 how it is celebrated rituals amid Coronavirus Covid19


Udupi Paryaya 2022: ಕೊರೊನಾ ಹಿನ್ನೆಲೆ ಸರಳ ಪರ್ಯಾಯ ಮಹೋತ್ಸವ; ಹೇಗಿರಲಿದೆ ಈ ಬಾರಿಯ ಉಡುಪಿ ಪರ್ಯಾಯ?

Udupi Paryaya 2022

ಉಡುಪಿ: ದ್ವೈವಾರ್ಷಿಕ ಪರ್ಯಾಯ ಮಹೋತ್ಸವದ ಧಾರ್ಮಿಕ, ಸಾಂಪ್ರದಾಯಿಕ ಕಾರ್ಯಕ್ರಮಗಳು ಇಂದು (ಜನವರಿ 17) ಸಂಜೆಯಿಂದ ಆರಂಭವಾಗಿ (ಜನವರಿ 18) ನಾಳೆ ವರೆಗೆ ನಡೆಯಲಿದೆ. ಆದರೆ, ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಈ ಬಾರಿ ಸರಳವಾಗಿ ಪರ್ಯಾಯೋತ್ಸವ ಆಚರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. 251ನೇ ಪರ್ಯಾಯ ಮಹೋತ್ಸವ ಈ ಬಾರಿ ನಡೆಯುತ್ತಿದ್ದು ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.

ಜನವರಿ 18ರ ಮುಂಜಾನೆ ನಡೆಯಲಿರುವ ಪರ್ಯಾಯೋತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆಸಲು ತೀರ್ಮಾನ ಮಾಡಲಾಗಿದೆ. ಸಮಿತಿಯ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಶ್ರೀಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು ಸರ್ಕಾರದ ಮುಂಜಾಗ್ರತಾ ಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಲಾಗಿದೆ.

ಶ್ರೀಪಾದರ ಬಯಕೆಯಂತೆ ಸರಳ ಪರ್ಯಾಯ ಮಹೋತ್ಸವ ಮಾಡಲಾಗುವುದು. ಅಷ್ಟ ಮಠಾಧೀಶರು ಕೂರುವ ಮೇನೆ ಹೊತ್ತ ವಾಹನ, ಡೋಲು, ವಾದ್ಯ, ಚಂಡೆ, ಬಿರುದಾವಳಿ, ಪೌರಾಣಿಕ ದೃಶ್ಯದ ಟ್ಯಾಬ್ಲೋ ಮಾತ್ರ ಭಾಗಿ ಆಗಲಿದೆ. ಪರ್ಯಾಯ ದರ್ಬಾರ್​​ ಸಭೆಯಲ್ಲಿ ಸೀಮಿತ ಆಸನಗಳ ವ್ಯವಸ್ಥೆ ಮಾಡಲಾಗುವುದು. 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಭಾಗವಹಿಸಲು ಅವಕಾಶ ಎಂದು ತಿಳಿಸಲಾಗಿದೆ.

ಈ ಕಾರ್ಯಕ್ರಮಗಳನ್ನು ವಿವಿಧ ಟಿವಿ ವಾಹಿನಿಗಳಲ್ಲಿ ನೇರಪ್ರಸಾರ ಮಾಡಲಾಗುವುದು. ಆದ್ದರಿಂದ ಭಕ್ತಾದಿಗಳು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು ಸಹಕರಿಸಬೇಕೆಂದು ಭಕ್ತರು ಮತ್ತು ನಾಗರಿಕರಲ್ಲಿ ನಮ್ರರಾಗಿ ವಿನಂತಿಸುತ್ತೇವೆ ಎಂದು ಹೇಳಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ಬು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ಜಿಲ್ಲಾಡಳಿತದೊಂದಿಗೆ ಪೂರ್ಣ ಸಹಕರಿಸಲಿದ್ದು ಜನತೆಯೂ ಸಹಕರಿಸುವಂತೆ ಮತ್ತೊಮ್ಮೆ ವಿನಂತಿಸುತ್ತೇವೆ ಎಂದು ಭಟ್ ತಿಳಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *