UGC NET 2022 Result: ನಾಳೆ ಯುಜಿಸಿ ನೆಟ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡುವುದು ಹೇಗೆ? – UGC NET 2022 Result releasing November 5th on ugcnet.nta.nic.in says UGC Chairman Kannada News


ಯುಜಿಸಿ NET ಫಲಿತಾಂಶವನ್ನು ಪರಿಶೀಲಿಸಲು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಆಗಬೇಕು.

UGC NET 2022 Result: ನಾಳೆ ಯುಜಿಸಿ ನೆಟ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡುವುದು ಹೇಗೆ?

ಸಾಂದರ್ಭಿಕ ಚಿತ್ರ

Image Credit source: News18

ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC NET) ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಾಳೆ (ನವೆಂಬರ್ 5) ಬಿಡುಗಡೆ ಮಾಡಲಿದೆ. ನೆಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು nta.ac.in ಮತ್ತು ugcnet.nta.nic.in ಈ ಅಧಿಕೃತ ವೆಬ್​ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.

ನೆಟ್ ಫಲಿತಾಂಶದ ಬಿಡುಗಡೆ ದಿನಾಂಕವನ್ನು ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಇಂದು ಪ್ರಕಟಿಸಿದ್ದಾರೆ. “UGC-NET ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನವೆಂಬರ್ 5ರಂದು (ಶನಿವಾರ) ಪ್ರಕಟಿಸಲಿದೆ. ಫಲಿತಾಂಶಗಳು NTA ವೆಬ್‌ಸೈಟ್ https://nta.ac.in#UGC-NET ನಲ್ಲಿ ಲಭ್ಯವಿರುತ್ತವೆ ಎಂದು ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಮೊದಲ ಹಂತದ ನೆಟ್ ಪರೀಕ್ಷೆಯ ಜುಲೈ 9ರಿಂದ 12ರವರೆಗೆ ನಡೆದಿತ್ತು. 2ನೇ ಹಂತದ ಪರೀಕ್ಷೆ ಸೆಪ್ಟೆಂಬರ್ 20ರಿಂದ 22ರವರೆಗೆ ನಡೆದಿತ್ತು. UGC NET 2022 ಪರೀಕ್ಷೆಯ 3ನೇ ಹಂತ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರವರೆಗೆ ನಡೆದಿತ್ತು. 4ನೇ ಹಂತ ಅಕ್ಟೋಬರ್ 8, 10, 11, 12, 13, ಮತ್ತು 14ರಂದು ನಡೆದಿತ್ತು.

TV9 Kannada


Leave a Reply

Your email address will not be published.