ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆ ಹಲವು ದೇಶಗಳಿಂದ ನೆರವಿನ ಮಹಾಪೂರ ಹರಿದುಬರ್ತಿದೆ. ಭಾರತ ವ್ಯಾಕ್ಸಿನ್ ಪೂರೈಕೆ ಮಾಡಿದ್ದಕ್ಕೆ ಪ್ರತಿಯಾಗಿ ಈಗ ಹಲವು ದೇಶಗಳು ವೈದ್ಯಕೀಯ ಉಪಕರಣಗಳನ್ನ ಭಾರತಕ್ಕೆ ಕಳಿಸುವ ಮೂಲಕ ಮಾನವೀಯತೆ ಮೆರೆಯುತ್ತಿವೆ.

ಇಂದು ಇಂಗ್ಲೆಂಡ್​​ನಿಂದ 100 ವೆಂಟಿಲೇಟರ್‌ಗಳು ಮತ್ತು 95 ಆಮ್ಲಜನಕ ಸಾಂದ್ರಕಗಳು(ಆಕ್ಸಿಜನ್ ಕಾನ್ಸಂಟ್ರೇಟರ್ಸ್​​​​​) ಸೇರಿದಂತೆ ಹಲವು ವೈದ್ಯಕೀಯ ಸಲಕರಣೆಗಳು ಭಾರತಕ್ಕೆ ಬಂದಿವೆ. ಯುನೈಟೆಡ್ ಕಿಂಗ್‌ಡಮ್​​ನಿಂದ ಹೊರಟ ವಿಮಾನ ಇಂದು ಬೆಳಗ್ಗೆ ಭಾರತದಲ್ಲಿ ಲ್ಯಾಂಡ್ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.

The post UKಯಿಂದ ಭಾರತಕ್ಕೆ ಬಂದಿಳಿದ 100 ವೆಂಟಿಲೇಟರ್​, 95 ಆಕ್ಸಿಜನ್ ಕಾನ್ಸೆಂಟ್ರೇಟರ್​​ಗಳು appeared first on News First Kannada.

Source: News First Kannada
Read More