Ukraine war ಉಕ್ರೇನ್‌ನ 4 ಪ್ರದೇಶ ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡ ರಷ್ಯಾ | Ukraine war Russia president Vladimir Putin annexes four Ukrainian territories


ಪ್ರಸ್ತುತ ಭಾಷಣದಲ್ಲಿ ಪುಟಿನ್, ಉಕ್ರೇನ್‌ನೊಂದಿಗೆ ಏಳು ತಿಂಗಳ ಸಂಘರ್ಷದ ಸಮಯದಲ್ಲಿ ಮಾಸ್ಕೋದ ಪಡೆಗಳು ಭಾಗಶಃ ವಶಪಡಿಸಿಕೊಂಡ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ವಿವರಿಸಿದರು

Ukraine war ಉಕ್ರೇನ್‌ನ 4 ಪ್ರದೇಶ ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡ ರಷ್ಯಾ

ವ್ಲಾಡಿಮಿರ್ ಪುಟಿನ್

TV9kannada Web Team

| Edited By: Rashmi Kallakatta

Sep 30, 2022 | 6:36 PM




ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  (Vladimir Putin)ಶುಕ್ರವಾರ ಕ್ರೆಮ್ಲಿನ್‌ನಲ್ಲಿ ಮಾಡಿದ ಭಾಷಣದಲ್ಲಿ ರಷ್ಯಾವು ಉಕ್ರೇನ್​​ನ ನಾಲ್ಕು ಹೊಸ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಘೋಷಿಸಿದರು. ಪ್ರಸ್ತುತ ಭಾಷಣದಲ್ಲಿ  ಅವರು ಉಕ್ರೇನ್‌ನೊಂದಿಗೆ ಏಳು ತಿಂಗಳ ಸಂಘರ್ಷದ ಸಮಯದಲ್ಲಿ ಮಾಸ್ಕೋದ ಪಡೆಗಳು ಭಾಗಶಃ ವಶಪಡಿಸಿಕೊಂಡ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ವಿವರಿಸಿದರು. ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಗಳನ್ನು ನಡೆಸಿದ ನಂತರ ರಷ್ಯಾ ಈ ಸೇರ್ಪಡೆಗಳನ್ನು ಘೋಷಿಸಿತು. ಜನಾಭಿಪ್ರಾಯಗಳು  ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿವೆ. ಅವುಗಳು ಬಲವಂತವಾಗಿವೆ  ಮತ್ತು ಜನರನ್ನು  ಪ್ರತಿನಿಧಿಸುವುದಿಲ್ಲ ಎಂದು ಪಾಶ್ಚಿಮಾತ್ಯ ಸರ್ಕಾರಗಳು ಮತ್ತು ಕೈವ್ ಹೇಳಿದೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ )

ತಾಜಾ ಸುದ್ದಿ

TV9 Kannada


Leave a Reply

Your email address will not be published.