Ukraine War: ಯುದ್ಧವೊಂದೇ ಪರಿಹಾರವಲ್ಲ, ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಿ; ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಲಹೆ | Russia Ukraine crisis: No military solution PM Narendra Modi Suggest Ukraine President Volodymyr Zelensky in Phone Call


ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಪ್ರಯತ್ನ ಮಾಡುವುದಾದರೆ ಅದಕ್ಕೆ ಸಹಕರಿಸಲು ಭಾರತ ಸದಾ ಸಿದ್ಧವಿದೆ. ಸಂಘರ್ಷಕ್ಕೆ ಮಿಲಿಟರಿಯಿಂದ ಪರಿಹಾರ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Ukraine War: ಯುದ್ಧವೊಂದೇ ಪರಿಹಾರವಲ್ಲ, ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಿ; ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಲಹೆ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ – ಪ್ರಧಾನಿ ಮೋದಿ

ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೂರವಾಣಿಯಲ್ಲಿ ಮಾತನಾಡಿದ್ದಾರೆ. ರಷ್ಯಾದೊಂದಿಗಿನ ಯುದ್ಧವನ್ನು (Russia War) ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸುವ ಅಗತ್ಯವನ್ನು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ರಷ್ಯಾ ಮತ್ತು ಉಕ್ರೇನ್​ ನಡುವಿನ ವೈಷಮ್ಯವನ್ನು ಆದಷ್ಟು ಬೇಗ ಅಂತ್ಯಗೊಳಿಸಲು ಉಭಯ ದೇಶಗಳು ಪರಸ್ಪರ ಶಾಂತಿಯುತವಾಗಿ ಮಾತುಕತೆ ನಡೆಸಬೇಕು, ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸಬೇಕು. ಸಂಘರ್ಷಕ್ಕೆ ಮಿಲಿಟರಿ ಯುದ್ಧವೇ ಪರಿಹಾರವಲ್ಲ ಎಂದು ಮೋದಿ ಸಲಹೆ ನೀಡಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಪ್ರಯತ್ನ ಮಾಡುವುದಾದರೆ ಅದಕ್ಕೆ ಸಹಕರಿಸಲು ಭಾರತ ಸದಾ ಸಿದ್ಧವಿದೆ. ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು, ಎಲ್ಲ ರಾಷ್ಟ್ರಗಳ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಎರಡೂ ದೇಶಗಳು ಗೌರವಿಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ.

TV9 Kannada


Leave a Reply

Your email address will not be published.