Union Budget 2022: ಬಜೆಟ್​ನಲ್ಲಿ ಹೆಚ್ಚಿನ ಹಣ ಮೀಸಲಿಗೆ ಬಂದರು, ಹಡಗು ಹಾಗೂ ಜಲಮಾರ್ಗ ಸಚಿವಾಲಯದ ಮನವಿ | Shipping Ministry Requests For Extra 60 Percent Allocation In Union Budget Know The Reason Why


Union Budget 2022: ಬಜೆಟ್​ನಲ್ಲಿ ಹೆಚ್ಚಿನ ಹಣ ಮೀಸಲಿಗೆ ಬಂದರು, ಹಡಗು ಹಾಗೂ ಜಲಮಾರ್ಗ ಸಚಿವಾಲಯದ ಮನವಿ

ಸಾಂದರ್ಭಿಕ ಚಿತ್ರ

ಹಡಗುಗಳ ರೀಸೆಕ್ಲಿಂಗ್ ಸಾಮರ್ಥ್ಯ ವಿಸ್ತರಣೆಗಾಗಿ ಬಜೆಟ್ ವಿತರಣೆಯಲ್ಲಿ ಶೇ 60ರಷ್ಟು ಹೆಚ್ಚು ಮೀಸಲಿಡಬೇಕು ಎಂದು ಬಂದರು, ಹಡಗುಗಳು ಮತ್ತು ಜಲಮಾರ್ಗಗಳ ಸಚಿವಾಲಯವು ಕೇಳಿಕೊಂಡಿದೆ. ಸಚಿವಾಲಯದ ಹಿರಿಯ ಅಧಿಕಾರಿಗಳು ಮಾತನಾಡಿ, ವಿಸ್ತೃತವಾದ ಪ್ರಾತ್ಯಕ್ಷಿಕೆಯೊಂದನ್ನು ಹಣಕಾಸು ಸಚಿವಾಲಯಕ್ಕೆ (Finance Ministry) ನೀಡಲಾಗಿದೆ. ಹೆಚ್ಚಿನ ಹಣವನ್ನು ಮೀಸಲಿಟ್ಟಲ್ಲಿ ಸರ್ಕಾರದ ಗುರಿಯಂತೆ ಹಡಗುಗಳ ರೀಸೆಕ್ಲಿಂಗ್ ಮಾಡುವ ಅಲಂಗ್​ನಲ್ಲಿ​ ಹೇಗೆ ದುಪಟ್ಟು ಮಾಡಲು ಸಾಧ್ಯ ಎಂಬುದನ್ನು ವಿವರಿಸಲಾಗಿದೆ, ಎಂದು ತಿಳಿಸಿದ್ದಾರೆ. 2021-22ರ ಕೇಂದ್ರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದಂತೆ, 2024ರ ಹೊತ್ತಿಗೆ ಅಲಂಗ್​ನಲ್ಲಿ ಹಡಗು ರೀಸೆಕ್ಲಿಂಗ್ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿ, 45 ಲಕ್ಷ ಲೈಟ್ ಡಿಸ್​ಪ್ಲೇಸ್​ಮೆಂಟ್ ಟನ್ಸ್​ (ಎಲ್​ಡಿಟಿ) ತಲುಪಿಸಲಾಗುವುದು ಎಂದಿದ್ದರು. ಹಡಗು ನಿರ್ಮಾಣ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಕಳೆದ ಬಜೆಟ್​ನಲ್ಲಿ 100 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.

ಆದರೆ, ಕೊರೊನಾ ಎರಡನೇ ಅಲೆಯಿಂದಾಗಿ ಅಲಂಗ್​ನಲ್ಲಿ ಸೀಮಿತ ಪ್ರಮಾಣದ ಕೆಲಸವನ್ನು ಸಾಮರ್ಥ್ಯ ವಿಸ್ತರಣೆಗಾಗಿ ಮಾಡಲಾಯಿತು. ಅಂದಹಾಗೆ ಅಲಂಗ್ ಎಂಬುದು ವಿಶ್ವದಲ್ಲೇ ಅತಿ ದೊಡ್ಡ ಹಡಗು ಒಡೆಯುವ ಯಾರ್ಡ್. ಕಳೆದ ಒಂಬತ್ತು ತಿಂಗಳಲ್ಲಿ ಕೊರೊನಾದಿಂದಾಗಿ ಸವಾಲುಗಳ ಹೊರತಾಗಿಯೂ ಅಲಂಗ್ ತನ್ನ ಸಾಮರ್ಥ್ಯದ ಬಳಕೆಯನ್ನು ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಅತ್ಯಧಿಕಕ್ಕೆ ಏರಿಸಿದೆ. ಕೊವಿಡ್ ಬಿಕ್ಕಟ್ಟಿನಿಂದಾಗಿ ಕ್ರೂಸ್ ಹಡಗುಗಳ ಮಾಲೀಕರು ತಮ್ಮ ಹಡಗುಗಳನ್ನು ಮಾರಾಟ ಮಾಡಲು ಒತ್ತಡ ಏರ್ಪಟ್ಟಿದ್ದರಿಂದ ಇದು ಸಂಭವಿಸಿದ್ದು, ಅವುಗಳಲ್ಲಿ ಕೆಲವು ಸ್ಕ್ರ್ಯಾಪಿಂಗ್‌ಗಾಗಿ ಅಲಂಗ್‌ಗೆ ಬಂದಿವೆ. ಹಡಗು ರೀಸೈಕ್ಲಿಂಗ್ ಇಂಡಸ್ಟ್ರೀಸ್ ಅಸೋಸಿಯೇಷನ್ ​​ಆಫ್ ಇಂಡಿಯಾವು ಮನಿಕಂಟ್ರೋಲ್‌ಗೆ ತಿಳಿಸಿದಂತೆ, ಈ ಹಣಕಾಸು ವರ್ಷದಲ್ಲಿ ಸುಮಾರು 2.6 ಮಿಲಿಯನ್ ಎಲ್‌ಡಿಟಿಯನ್ನು ನಿರ್ವಹಿಸಲಾಗಿದೆ. 2019-20ರಲ್ಲಿ ನಿರ್ವಹಿಸಿದ 1.63 ಮಿಲಿಯನ್ ಎಲ್‌ಡಿಟಿ ಮತ್ತು 2020-21ರಲ್ಲಿ ನಿರ್ವಹಿಸಿದ 2 ಮಿಲಿಯನ್ ಎಲ್‌ಡಿಟಿಗೆ ಹೋಲಿಸಿದರೆ ಅಲಂಗ್‌ನಲ್ಲಿ ನಿರ್ವಹಿಸಲಾಗಿದೆ.

2022-23ರ ಅವಧಿಯಲ್ಲಿ ಅಲಂಗ್‌ನಲ್ಲಿ ಅಸ್ತಿತ್ವದಲ್ಲಿರುವ ಸಾಮರ್ಥ್ಯಕ್ಕೆ 15 ಹೊಸ ಪ್ಲಾಟ್‌ಗಳನ್ನು ಸೇರಿಸಲು ಮತ್ತು 2024ರ ವೇಳೆಗೆ ಇವುಗಳನ್ನು ಕಾರ್ಯಗತಗೊಳಿಸಲು ಸರ್ಕಾರವು ಎದುರು ನೋಡುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮರುಬಳಕೆಗಾಗಿ ತಮ್ಮ ಹಡಗುಗಳನ್ನು ಕಳುಹಿಸಲು ಯುರೋಪಿಯನ್ ಮತ್ತು ಜಪಾನಿನ ಹಡಗು ಮಾಲೀಕರನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಆಧುನಿಕ ಉಪಕರಣಗಳನ್ನು ಸ್ಥಾಪಿಸುವ ಮೂಲಕ ಮತ್ತು ಅಲಂಗ್‌ನಲ್ಲಿ ತಾಂತ್ರಿಕ ಪ್ರಗತಿಯಲ್ಲಿ ಹೂಡುವ ಮೂಲಕ ಇದನ್ನು ಮಾಡಲಾಗುತ್ತದೆ. ಬಜೆಟ್‌ ಅಡಿಯಲ್ಲಿ ಹೆಚ್ಚಿದ ಹಂಚಿಕೆಗಳು ಅಲಂಗ್‌ನಲ್ಲಿ ಸೌಲಭ್ಯಗಳನ್ನು ನವೀಕರಿಸಲು ಸಚಿವಾಲಯಕ್ಕೆ ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಕಳೆದ ಒಂದು ದಶಕದಲ್ಲಿ ಅಲಂಗ್​ಗೆ ಒಡೆಯಲು ಒಳಬರುವ ಹಡಗುಗಳ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿದೆ. ಹೆಚ್ಚಾಗಿ ಯುರೋಪಿಯನ್ ಕಂಪೆನಿಗಳು ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸದಿರುವ ಕಳವಳದಿಂದಾಗಿ ಹಡಗು ಒಡೆಯುವವುದಕ್ಕೆ ಭಾರತಕ್ಕೆ ಕಳುಹಿಸುತ್ತಿಲ್ಲ. ಆದರೆ ಅಲಂಗ್‌ನಲ್ಲಿ ಆಧುನಿಕ ತಂತ್ರಜ್ಞಾನದ ಮಾನದಂಡಗಳನ್ನು ಅಳವಡಿಸಿಕೊಂಡರೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತೆರೆಯುತ್ತದೆ,” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲಂಗ್ ಯಾರ್ಡ್ ಬಗ್ಗೆ ಇರುವ ಕಳವಳಗಳ ಪೈಕಿ ಮಾಲಿನ್ಯ ಮತ್ತು ಮಾನವ ಮತ್ತು ಸಮುದ್ರ ಜೀವಿಗಳ ರಕ್ಷಣೆಯ ಜಾಗತಿಕ ಮಾನದಂಡಗಳನ್ನು ಅನುಸರಿಸದಿರುವುದು ಇದೆ. ಅಲಂಗ್‌ನಲ್ಲಿರುವ 90 ಯಾರ್ಡ್​ಗಳು ಗ್ರೀನ್ ಮರುಬಳಕೆಗಾಗಿ ಅಂತರರಾಷ್ಟ್ರೀಯ ಮಾನದಂಡಗಳ ಅನುಸರಣೆಗಾಗಿ ಈಗ ಪ್ರಮಾಣೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತ್ಯಾಜ್ಯ ನಿರ್ವಹಣೆಯ ಆಧುನಿಕ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ. ಅಲಂಗ್ ಸುಮಾರು 160 ಪ್ಲಾಟ್‌ಗಳನ್ನು ಹೊಂದಿದ್ದು, ಅದರಲ್ಲಿ ಸುಮಾರು 140 ಪ್ಲಾಟ್‌ಗಳನ್ನು ಹಡಗು ಒಡೆಯುವ ಚಟುವಟಿಕೆಗಳಿಗೆ ಹಂಚಲಾಗಿದೆ. ಮತ್ತು ಇತರ ಪ್ಲಾಟ್‌ಗಳನ್ನು ಮುಖ್ಯವಾಗಿ ಶೇಖರಣೆಗಾಗಿ ಬಳಸಲಾಗುತ್ತದೆ.

TV9 Kannada


Leave a Reply

Your email address will not be published. Required fields are marked *