Union Law Minister Kiren Rijiju objected strongly On Supreme Court Making Public “Secret” Reports | ಇದು ಗಂಭೀರ ಕಾಳಜಿಯ ವಿಷಯ: ರಹಸ್ಯ ವರದಿಗಳನ್ನು ಬಹಿರಂಗ ಮಾಡಿದ ಸುಪ್ರೀಂಕೋರ್ಟ್ ಬಗ್ಗೆ ಕಿರಣ್ ರಿಜಿಜು ಕಿಡಿ


ಸಾರ್ವಜನಿಕ ಡೊಮೇನ್‌ನಲ್ಲಿ RAW ಅಥವಾ IB ಯ ರಹಸ್ಯ ಮತ್ತು ಸೂಕ್ಷ್ಮ ವರದಿಗಳನ್ನು ಹಾಕುವುದು ಗಂಭೀರ ಕಾಳಜಿಯ ವಿಷಯವಾಗಿದೆ, ಅದಕ್ಕೆ ನಾನು ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುತ್ತೇನೆ. ಇಂದು ಸೂಕ್ತ ಸಮಯವಲ್ಲ” ಎಂದು ಕಾನೂನು ಸಚಿವರು ಸುದ್ದಿಗಾರರಿಗೆ ಹೇಳಿದ್ದಾರೆ.

ಇದು ಗಂಭೀರ ಕಾಳಜಿಯ ವಿಷಯ: ರಹಸ್ಯ ವರದಿಗಳನ್ನು ಬಹಿರಂಗ ಮಾಡಿದ ಸುಪ್ರೀಂಕೋರ್ಟ್ ಬಗ್ಗೆ ಕಿರಣ್ ರಿಜಿಜು ಕಿಡಿ

ಕಿರಣ್ ರಿಜಿಜು

ದೆಹಲಿ: ನ್ಯಾಯಾಂಗ ನೇಮಕಾತಿಯ ವಿವಾದದ  ನಡುವೆಯೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಮಂಗಳವಾರ ನ್ಯಾಯಾಧೀಶರಿಗೆ ಶಿಫಾರಸು ಮಾಡಲಾದ ಅಭ್ಯರ್ಥಿಗಳ ಬಗ್ಗೆ ಸರ್ಕಾರದ ಆಕ್ಷೇಪಣೆಗಳನ್ನು ಸುಪ್ರೀಂಕೋರ್ಟ್ (Supreme Court) ಬಹಿರಂಗಗೊಳಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ವಾರ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ನ್ಯಾಯಾಧೀಶರ ಸ್ಥಾನಕ್ಕಿರುವ ಮೂವರು ಅಭ್ಯರ್ಥಿಗಳ ಬಗ್ಗೆ ಸರ್ಕಾರದ ಆಕ್ಷೇಪಣೆಗಳನ್ನು ಪ್ರಕಟಿಸಿತ್ತು.ಸರ್ಕಾರದೊಂದಿಗಿನ ಜಗಳದ ನಡುವೆಯೇಗುಪ್ತಚರ ಸಂಸ್ಥೆಗಳಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಸಾರ್ವಜನಿಕ ದಾಖಲೆಗಳನ್ನೂ ಸುಪ್ರೀಂ ಪ್ರಕಟಿಸಿತ್ತು. ಈ ಬಗ್ಗೆ “ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುವೆ” ಎಂದು ಹೇಳಿದ ರಿಜಿಜು, ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

“ಸಾರ್ವಜನಿಕ ಡೊಮೇನ್‌ನಲ್ಲಿ RAW ಅಥವಾ IB ಯ ರಹಸ್ಯ ಮತ್ತು ಸೂಕ್ಷ್ಮ ವರದಿಗಳನ್ನು ಹಾಕುವುದು ಗಂಭೀರ ಕಾಳಜಿಯ ವಿಷಯವಾಗಿದೆ, ಅದಕ್ಕೆ ನಾನು ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುತ್ತೇನೆ. ಇಂದು ಸೂಕ್ತ ಸಮಯವಲ್ಲ” ಎಂದು ಕಾನೂನು ಸಚಿವರು ಸುದ್ದಿಗಾರರಿಗೆ ಹೇಳಿದ್ದಾರೆ.

ತಾಜಾ ಸುದ್ದಿ

ಸಂಬಂಧಪಟ್ಟ ಅಧಿಕಾರಿಯು ದೇಶಕ್ಕಾಗಿ ಮಾರುವೇಷದಲ್ಲಿ ಅಥವಾ ರಹಸ್ಯವಾಗಿ ಅತ್ಯಂತ ರಹಸ್ಯವಾದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೆ, ನಾಳೆ ತನ್ನ ವರದಿಯನ್ನು ಸಾರ್ವಜನಿಕ ಡೊಮೇನ್‌ಗೆ ಹಾಕಿದರೆ ಅವನು ಎರಡು ಬಾರಿ ಯೋಚಿಸುತ್ತಾನೆ. ಇದು ಪರಿಣಾಮ ಬೀರುತ್ತದೆ. ಆದ್ದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ ರಿಜಿಜು.

ಇದನ್ನು ಮುಖ್ಯ ನ್ಯಾಯಮೂರ್ತಿಗಳ ಬಳಿ ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಖ್ಯ ನ್ಯಾಯಮೂರ್ತಿಗಳು ಮತ್ತು ನಾನು ಆಗಾಗ ಭೇಟಿಯಾಗುತ್ತೇವೆ. ನಾವು ಯಾವಾಗಲೂ ಸಂಪರ್ಕದಲ್ಲಿದ್ದೇವೆ. ಅವರು ನ್ಯಾಯಾಂಗದ ಮುಖ್ಯಸ್ಥರು, ನಾನು ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಸೇತುವೆಯಾಗಿದ್ದೇನೆ. . ನಾವು ಒಟ್ಟಿಗೆ ಕೆಲಸ ಮಾಡಬೇಕು ನಾವು ಪ್ರತ್ಯೇಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ವಿವಾದಾತ್ಮಕ ವಿಷಯವಾಗಿದೆ. ಅದನ್ನು ಇನ್ನೊಮ್ಮೆ ಮಾತಾಡೋಣ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *