Unseasonal rain in Mysore-Chikkamagaluru districts; Trafficking of motorists | ಮೈಸೂರು-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕಾಲಿಕ ಮಳೆ; ವಾಹನ ಸವಾರರ ಪರದಾಟ


ರಾಜ್ಯದ ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಸುರಿದಿದ್ದು, ಜನರು ಕಂಗಾಲಾಗಿದ್ದಾರೆ. ಇನ್ನು ಮೈಸೂರಿನಲ್ಲಿ ತುಂತುರು ಮಳೆಗೆ ವಾಹನ ಸವಾರರ ಪರದಾಟ ಹೇಳತೀರದು.

ಮೈಸೂರು-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕಾಲಿಕ ಮಳೆ; ವಾಹನ ಸವಾರರ ಪರದಾಟ

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್​, ಬಾಳೂರು, ಬಣಕಲ್ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 1 ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜನವರಿ ತಿಂಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ರೈತರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದು, ಈ ಸಮಯದಲ್ಲಿ ಮಳೆ ಬರುತ್ತಿರಲು ಜನ ಸಾಮಾನ್ಯರು ಭಯಭೀತರಾಗಿದ್ದಾರೆ. ಚಿಕ್ಕಮಗಳೂರು ಅಷ್ಟೇ ಅಲ್ಲದೇ ಮೈಸೂರಿನ ಹಲವೆಡೆ ಕೂಡ ತುಂತುರು ಮಳೆ ಬಿದ್ದಿದ್ದು, ಅನೀರಿಕ್ಷಿತ ವರುಣನ ಆಗಮನದಿಂದ  ಜಿಲ್ಲೆಯ ಜನರು ಕಂಗಾಲಾಗಿರುವುದಂತೂ ಸುಳ್ಳಲ್ಲ.

ಮೈಸೂರು ಜಿಲ್ಲೆಯ ಹಲವೆಡೆ ಅಕಾಲಿಕ ಮಳೆ; ವಾಹನ ಸವಾರರ ಪರದಾಟ

ತಾಜಾ ಸುದ್ದಿ

ಮೈಸೂರು: ನಗರದ ನಂಜನಗೂಡು, ಹುಣಸೂರು ಭಾಗದಲ್ಲಿ ಅಕಾಲಿಕ ಮಳೆ ಆಗಿದೆ. ತುಂತುರು ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ಇನ್ನು ಮಳೆಗಾಲ ಮುಗಿದರೂ ಈ ರೀತಿಯ ಅನೀರಿಕ್ಷಿತ ಮಳೆಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಅದರಲ್ಲೂ ವಾಹನ ಸವಾರರಂತೂ ಅಕಾಲಿಕ ಮಳೆಗೆ ಪರದಾಡುವಂತಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *