UP Election 2022 Phase 1 Voting LIVE updates: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ; ಮತಗಟ್ಟೆಗಳಿಗೆ ಆಗಮಿಸುತ್ತಿರುವ ಜನರು | Uttar Pradesh Assembly Election 2022 Voting live updates voter turnout UP assembly poll percentage latest news in Kannada


UP Election 2022 Phase 1 Voting LIVE updates: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ; ಮತಗಟ್ಟೆಗಳಿಗೆ ಆಗಮಿಸುತ್ತಿರುವ ಜನರು

ಗೌತಮ ಬುದ್ಧ ನಗರದಲ್ಲಿ ಮತದಾನಕ್ಕೆ ಕ್ಯೂ ನಿಂತ ಜನರು

ಉತ್ತರಪ್ರದೇಶದಲ್ಲಿ ಮೊದಲ ಹಂತದ ಮತದಾನ (Voting Begins In Uttar Pradesh) ಈಗಾಗಲೇ ಪ್ರಾರಂಭವಾಗಿದೆ. ಬೆಳಗ್ಗೆ 6.30ರಿಂದಲೇ ಮತಗಟ್ಟೆಗಳಿಗೆ ಜನರು ಬರಲು ಪ್ರಾರಂಭಿಸಿದ್ದಾರೆ. ಇಂದು 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಲ್ಲಿ (Assembly Constituencies) ಮತದಾನ ನಡೆಯಲಿದ್ದು, ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ ಸುಮಾರು 2.27 ಕೋಟಿ ಅರ್ಹ ಮತದಾರರು ಮತದಾನ ಮಾಡಲಿದ್ದಾರೆ. ಇಂದು ರಾಜ್ಯದ ಪಶ್ಚಿಮ ಜಿಲ್ಲೆಗಳ ವಿಧಾನಸಭೆ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಈ ಭಾಗದ ಹಲವು ಕ್ಷೇತ್ರಗಳು ಜಾಟ್​ ಸಮುದಾಯದ ಪ್ರಾಬಲ್ಯ ಇರುವ ಸ್ಥಳಗಳು.  ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ತೀವ್ರವಾಗಿ ಖಂಡಿಸಿ, ಹೋರಾಟದ ಮಾಡಿದವರೇ ಈ ಭಾಗದಲ್ಲಿ ಹೆಚ್ಚಿನ ಜನರು ಇದ್ದಾರೆ.  ಈ ಹಂತದಲ್ಲಿ ಸದ್ಯ ಬಿಜೆಪಿ ಸರ್ಕಾರದಲ್ಲಿರುವ 9 ಸಚಿವರು ಚುನಾವಣೆ ಎದುರಿಸುತ್ತಿದ್ದಾರೆ. ಒಟ್ಟಾರೆ 403 ಕ್ಷೇತ್ರಗಳಿಗೆ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಮತ ಎಣಿಕೆ ನಡೆಯಲಿದೆ. 

TV9 Kannada


Leave a Reply

Your email address will not be published.