
Image Credit source: ANI
Narendra Modi: ಉತ್ತರ ಪ್ರದೇಶದಲ್ಲಿ 80,000 ಕೋಟಿ ರೂ.ಗೂ ಹೆಚ್ಚು ಮೊತ್ತದ 1,406 ಯೋಜನೆಗಳಿಗೆ ಪ್ರಧಾನಮಂತ್ರಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ಲಕ್ನೋ: ಉತ್ತರ ಪ್ರದೇಶದಲ್ಲಿ 80,000 ಕೋಟಿ ರೂ.ಗಳ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಹೇಳಿದ್ದಾರೆ. ಇದರಿಂದ ಉತ್ತರ ಪ್ರದೇಶದ ಯುವಜನತೆಗೆ ಸಾವಿರಾರು ಉದ್ಯೋಗಾವಕಾಶಗಳು ಸಿಗುತ್ತದೆ. ಉತ್ತರ ಪ್ರದೇಶದ ಹೂಡಿಕೆದಾರರ ಸಮಾವೇಶದಲ್ಲಿ (Uttar Pradesh Investors Summit) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಇಂದು ಇಲ್ಲಿ 80,000 ಕೋಟಿ ರೂ.ಗೂ ಹೆಚ್ಚು ಹೂಡಿಕೆಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ದಾಖಲೆಯ ಹೂಡಿಕೆಯು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅದಕ್ಕಾಗಿ ನಾನು ಉತ್ತರಪ್ರದೇಶದ ಯುವಕರನ್ನು ಅಭಿನಂದಿಸುತ್ತೇನೆ” ಎಂದಿದ್ದಾರೆ.
80,000 ಕೋಟಿ ರೂ.ಗೂ ಹೆಚ್ಚು ಮೊತ್ತದ 1,406 ಯೋಜನೆಗಳಿಗೆ ಪ್ರಧಾನಮಂತ್ರಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಉತ್ತರ ಪ್ರದೇಶದ ಯುವಜನರಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಹೂಡಿಕೆದಾರರಿಗೆ ಧನ್ಯವಾದ ಹೇಳಿದ ನರೇಂದ್ರ ಮೋದಿ, ಮುಂದಿನ 25 ವರ್ಷಗಳಲ್ಲಿ ಹೊಸ ಗುರಿಗಳನ್ನು ಹೊಂದಿಸುವ ಸಮಯ ಇದು ಎಂದು ಹೇಳಿದರು. ಕೇಂದ್ರದಲ್ಲಿ 8 ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ನರೇಂದ್ರ ಮೋದಿ, ನಾವು ಇತ್ತೀಚೆಗೆ 8 ವರ್ಷಗಳ ಕೇಂದ್ರ ಆಡಳಿತವನ್ನು ಪೂರ್ಣಗೊಳಿಸಿದ್ದೇವೆ. ಈ ವರ್ಷಗಳಲ್ಲಿ, ನಾವು ಸುಧಾರಣೆ, ಸಾಧನೆ, ರೂಪಾಂತರದ ಮಂತ್ರದ ಮೇಲೆ ಪ್ರಗತಿ ಹೊಂದಿದ್ದೇವೆ ಎಂದಿದ್ದಾರೆ.
PM Narendra Modi attends the Ground Breaking Ceremony @ 3.0 of the UP Investors Summit in Lucknow
CM Yogi Adityanath, Defence Minister Rajnath Singh also present at the event pic.twitter.com/5qE7CeM7EI
— ANI UP/Uttarakhand (@ANINewsUP) June 3, 2022