US School Shooting 2 Students Killed Teacher Injured In Iowa of America | US Shootings: ಅಮೆರಿಕದ ಶಾಲೆಯಲ್ಲಿ ಗುಂಡುಹಾರಾಟ; ಇಬ್ಬರು ವಿದ್ಯಾರ್ಥಿಗಳು ಸಾವು, ಶಿಕ್ಷಕಿಗೆ ಗಾಯ


ಗುಂಡುಹಾರಾಟಕ್ಕೆ ಏನು ಕಾರಣ ಎಂಬ ಬಗ್ಗೆ ಈವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.

US Shootings: ಅಮೆರಿಕದ ಶಾಲೆಯಲ್ಲಿ ಗುಂಡುಹಾರಾಟ; ಇಬ್ಬರು ವಿದ್ಯಾರ್ಥಿಗಳು ಸಾವು, ಶಿಕ್ಷಕಿಗೆ ಗಾಯ

ಸಾಂದರ್ಭಿಕ ಚಿತ್ರ

ಇಯೊವಾ: ಅಮೆರಿಕದ ಇಯೊವಾ (Iowa) ನಗರದ ಶಾಲೆಯಲ್ಲಿ ನಡೆದ ಅಪ್ರಚೋದಿತ ಗುಂಡು ಹಾರಾಟದಲ್ಲಿ (Shooting in America) ಇಬ್ಬರು ಮೃತಪಟ್ಟು, ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರ ಮೂವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯ ನಂತರ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಆಧರಿಸಿ ಕಾರೊಂದನ್ನು ತಡೆದು ನಿಲ್ಲಿಸಿದ ಪೊಲೀಸರು ಮೂವರು ಸಂಭಾವ್ಯ ಶಂಕಿತರನ್ನು ವಶಕ್ಕೆ ತೆಗೆದುಕೊಂಡರು. ಗುಂಡುಹಾರಾಟಕ್ಕೆ ಏನು ಕಾರಣ ಎಂಬ ಬಗ್ಗೆ ಈವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.

‘ಘಟನೆಯಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ. ಅವರ ವಯಸ್ಸು ನಿಖರವಾಗಿ ಗೊತ್ತಿಲ್ಲ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯು ಶಾಲೆಯ ಸಿಬ್ಬಂದಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್ ಇಲಾಖೆಯ ವಕ್ತಾರ ಡೆಸ್ ಮೊಯಿನ್ಸ್​ ಹೇಳಿದ್ದಾರೆ.

ತಾಜಾ ಸುದ್ದಿ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಸಂಜೆಯಷ್ಟೇ ಗುಂಡಿನದಾಳಿ ನಡೆದು 11 ಮಂದಿ ಮೃತಪಟ್ಟಿದ್ದರು. ಘಟನೆಯ ಸಂಬಂಧ 72 ವರ್ಷದ ಏಷ್ಯಾ ವಲಸಿಗನನ್ನು ಪೊಲೀಸರು ಪತ್ತೆಮಾಡಿ ಬಂಧಿಸಲು ಯತ್ನಿಸಿದ್ದರು. ಆದರೆ ಅವನು ಸ್ವತಃ ಗುಂಡುಹಾರಿಸಿಕೊಂಡು ಮೃತಪಟ್ಟಿದ್ದ.

TV9 Kannada


Leave a Reply

Your email address will not be published. Required fields are marked *