Uttar Pradesh: ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ  ಉಚಿತ ವಸತಿ ಶಾಲೆ ಯೋಜನೆ ಪ್ರಾರಂಭಿಸಿದ ಸರ್ಕಾರ | Uttar Pradesh Government Launches New Residential School Scheme For Scheduled Caste Students


Uttar Pradesh: ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ  ಉಚಿತ ವಸತಿ ಶಾಲೆ ಯೋಜನೆ ಪ್ರಾರಂಭಿಸಿದ ಸರ್ಕಾರ

ಸಾಂಧರ್ಬಿಕ ಚಿತ್ರ

Image Credit source: NDTV

ಉತ್ತರ ಪ್ರದೇಶ ಸರಕಾರವು ಪರಿಶಿಷ್ಟ ಜಾತಿ (SC) ಪಂಗಡದ ವಿದ್ಯಾರ್ಥಿಗಳಿಗೆ  ಖಾಸಗಿ ಪ್ರೌಢ ವಸತಿ ಶಾಲೆಯಲ್ಲಿ ( ಉಚಿತವಾಗಿ ಕಲಿಯಲು ಅವಕಾಶ ನೀಡಿದೆ.

ನೋಯ್ಡಾ: ಉತ್ತರ ಪ್ರದೇಶ (Uttar Pradesh) ಸರಕಾರವು ಪರಿಶಿಷ್ಟ ಜಾತಿ (SC) ಪಂಗಡದ ವಿದ್ಯಾರ್ಥಿಗಳಿಗೆ  ಖಾಸಗಿ ಪ್ರೌಢ ವಸತಿ ಶಾಲೆಯಲ್ಲಿ (Residential Education)  ಉಚಿತವಾಗಿ ಕಲಿಯಲು ಅವಕಾಶ ನೀಡಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಈ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಬಡ ಎಸ್‌ಸಿ ವಿದ್ಯಾರ್ಥಿಗಳು ಗುಣ ಮಟ್ಟದ ಶಿಕ್ಷಣ ಪಡೆಯಲು  ಪ್ರೌಢಶಾಲೆಗಳಲ್ಲಿ (SRESHTA) ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣದ ಯೋಜನೆಯನ್ನು ಪ್ರಾರಂಭಿಸಿದರು.

ಈ ಯೋಜನೆಯ ಪ್ರಕಾರ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳು ಈ ಯೋಜನೆಯ ಲಾಭಾಂಶವನ್ನು ಪಡೆಯಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ SRESHTA (NETS) ಪರೀಕ್ಷೆಯನ್ನು ಪಾಸಾಗಬೇಕು. ಆಗ ಖಾಸಗಿ ಪ್ರೌಢಶಾಲೆಯ ವಸತಿ ಶಾಲೆಯಲ್ಲಿ ಉಚಿತವಾಗಿ ಓದಬಹದಾಗಿದೆ.

ಇದನ್ನು ಓದಿ: ಕೊವಿಡ್ ಪ್ರಕರಣಗಳ ಏರಿಕೆ; ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ SRESHTA ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಯಿತು. 17 ವರ್ಷದ ಅಂಜನಾ ಕುಮಾರ್, ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಇವರು  ಸ್ಟಾರ್ಟ್‌ಅಪ್​ನ್ನು  ಪ್ರಾರಂಭಿಸುವ ತನ್ನ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ತಾನು ಗಾಜಿಯಾಬಾದ್‌ನಲ್ಲಿ ಓದುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಕಷ್ಟಪಡುತ್ತಿದ್ದೇನೆ ಎಂದು ಅವರು ಹೇಳಿದರು.

ಹತ್ತಿರದ ಯಾವುದೇ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರಿಲ್ಲ ಮತ್ತು ಲ್ಯಾಬ್ ಸೌಲಭ್ಯವೂ ಇಲ್ಲ ಎಂದು ಅವರು ಹೇಳಿದರು. ಈ ಯೋಜನೆಯಡಿ ಮಹಾಮಾಯಾ ಬಲ್ಲಿಕಾ ಇಂಟರ್ ಕಾಲೇಜಿನಲ್ಲಿ ಈಗ ಅಧ್ಯಯನ ಮಾಡಲಿರುವ ಅಂಜನಾ, 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ತನ್ನ ತಾಯಿಯ ಕನಸನ್ನು ನನಸಾಗಿಸುವ ಭರವಸೆ ಇದೆ ಎಂದು ಹೇಳಿದರು.

ಇದನ್ನು ಓದಿ: ಕಾನ್ಪುರದಲ್ಲಿ ಕೋಮು ಸಂಘರ್ಷ; ಮೂವರಿಗೆ ಗಾಯ, 18 ಜನರ ಬಂಧನ

ಯೋಜನೆಯಡಿ 177 ಖಾಸಗಿ ಶಾಲೆಗಳನ್ನು ಗುರುತಿಸಲಾಗಿದ್ದು, 9ನೇ ತರಗತಿಯಲ್ಲಿ 1,300 ಸೀಟುಗಳು ಮತ್ತು 11ನೇ ತರಗತಿಯಲ್ಲಿ 1,700 ಸೀಟುಗಳನ್ನು ಈ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಯೋಜನೆಗೆ ಅರ್ಹತೆ ಪಡೆಯಲು, ವಿದ್ಯಾರ್ಥಿಗಳ ಪೋಷಕರ ಆದಾಯವು ವರ್ಷಕ್ಕೆ ರೂ 2.5 ಲಕ್ಷಕ್ಕಿಂತ ಹೆಚ್ಚಿರಬಾರದು ಮತ್ತು ವಿದ್ಯಾರ್ಥಿವೇತನವು ಶಾಲಾ ಶುಲ್ಕ (ಬೋಧನಾ ಶುಲ್ಕ ಸೇರಿದಂತೆ) ಮತ್ತು ಹಾಸ್ಟೆಲ್ ಶುಲ್ಕ (ಮೆಸ್ ಶುಲ್ಕಗಳು ಸೇರಿದಂತೆ) ಒಳಗೊಂಡಿರುತ್ತದೆ.

9ನೇ ತರಗತಿಗೆ 1 ಲಕ್ಷ ರೂ., 10ನೇ ತರಗತಿಗೆ 1.10 ಲಕ್ಷ ರೂ., 11ನೇ ತರಗತಿಗೆ 1.25 ಲಕ್ಷ ರೂ. ಮತ್ತು 12ನೇ ತರಗತಿಗೆ ವಾರ್ಷಿಕ 1.35 ಲಕ್ಷ ರೂ ವಾರ್ಷಿಕ ಸ್ಕಾಲರ್​ಶಿಪ್​ ಪಡೆಯಲಿದ್ದಾರೆ.

ಇಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಕುಮಾರ್, ಈ ಯೋಜನೆಯ ಮೂಲಕ ಎಸ್‌ಸಿ ಸಮುದಾಯದ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. “ಒಳ್ಳೆಯ ಶಾಲೆಯಲ್ಲಿ ಓದುತ್ತಿರುವ ಯಾವುದೇ ವಿದ್ಯಾರ್ಥಿಗೆ ಸಿಗುವ ಮಾನ್ಯತೆಯನ್ನು ನಾವು ಅವರಿಗೆ ನೀಡಲು ಬಯಸುತ್ತೇವೆ” ಎಂದು ಅವರು ಹೇಳಿದರು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಪ್ರತಿ ವರ್ಷ ರಾಷ್ಟ್ರವ್ಯಾಪಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಿದ್ದು, ರಾಷ್ಟ್ರವ್ಯಾಪಿ ಪರೀಕ್ಷೆಯಲ್ಲಿ ಪಡೆದಿರುವ ಅರ್ಹತೆಯ ಆಧಾರದ ಮೇಲೆ ಶಾಲೆಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ಅವರು ಹೇಳಿದರು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೆಬ್ ಆಧಾರಿತ ಕೌನ್ಸೆಲಿಂಗ್ ವ್ಯವಸ್ಥೆಯ ಮೂಲಕ ಶಾಲೆಗಳ ಆಯ್ಕೆಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *