ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ
ಲಖನೌ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ (Uttar Pradesh Election) ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಬುಧವಾರ ಲಖನೌದಲ್ಲಿ ಪಕ್ಷದ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ಮಹಿಳಾ ಕೇಂದ್ರಿತ ಪ್ರಣಾಳಿಕೆ (Women’s Manifesto) ಇದೇ ಮೊದಲ ಬಾರಿ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ (Congress) ಉತ್ತರ ಪ್ರದೇಶ ವ್ಯವಹಾರಗಳ ಉಸ್ತುವಾರಿ ಪ್ರಿಯಾಂಕಾ, ಪ್ರಣಾಳಿಕೆಯು ರಾಜ್ಯದ ಸಮಗ್ರ ಮತ್ತು ಸರ್ವತೋಮುಖ ಬೆಳವಣಿಗೆಗೆ ಮಾರ್ಗಸೂಚಿಯಾಗಿದೆ ಎಂದು ಹೇಳಿದರು. ಯುವಕರು, ಮಹಿಳೆಯರು, ರೈತರು, ವ್ಯಾಪಾರಸ್ಥರು, ಸಮಾಜದ ವಿವಿಧ ವರ್ಗದವರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ಇದು ವಿಶೇಷ ಗಮನ ಹರಿಸುತ್ತದೆ ಎಂದರು. ನಾವು ‘ಮಹಿಳಾ ಪ್ರಣಾಳಿಕೆ’ಯನ್ನು ಸಿದ್ಧಪಡಿಸಿದ್ದೇವೆ. ನಾವು ಮಹಿಳೆಯರ ಸಬಲೀಕರಣ ಮಾಡಲು ಬಯಸುತ್ತೇವೆ .ಅವರ ಅಭಿಪ್ರಾಯದೊಂದಿಗೆ ಸಂಕೋಲೆಗಳನ್ನು ಮುರಿಯುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ಅವರು ರಾಜಕೀಯದಲ್ಲಿ ಪೂರ್ಣ ಭಾಗವಹಿಸುವುದರಿಂದ ಮತ್ತು ಸಮಾಜದಲ್ಲಿ ಭಾಗವಹಿಸುವುದರಿಂದ ಶೋಷಣೆಯನ್ನು ಕೊನೆಗೊಳಿಸಬಹುದು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
We prepared ‘women manifesto’ where we want to say we actually want to empower them. We’ll have to create environment where shackles can be broken with their opinion, where they get full participation in politics&participation in society that ends their exploitation: Priyanka GV pic.twitter.com/gOxHvwjjs5
— ANI UP (@ANINewsUP) December 8, 2021
ಕಾಂಗ್ರೆಸ್ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿದೆ. ಕಾಂಗ್ರೆಸ್ನ ಸುಚೇತಾ ಕೃಪಲಾನಿ ಮೊದಲ ಮಹಿಳಾ ಸಿಎಂ ಆಗಿದ್ದರು. ಇತರ ದೇಶಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದ್ದಾಗ ನಮ್ಮ ದೇಶ ಮೊದಲ ಮಹಿಳಾ ಪ್ರಧಾನಿಯನ್ನು ಹೊಂದಿತ್ತು . ನಾವು ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 40 ಪ್ರಾತಿನಿಧ್ಯವನ್ನು ನೀಡಿದ್ದೇವೆ. ಅವರ ಸಬಲೀಕರಣವು ಕಾಗದಕ್ಕೆ ಸೀಮಿತವಾಗಿರಬಾರದು. ಮಹಿಳೆಯರು ನಿಜವಾಗಿಯೂ ರಾಜಕೀಯದ ಭಾಗವಾಗಿದ್ದರೆ ಅದನ್ನು ಕಾಗದದ ಮೇಲೆ ಅಲ್ಲ ನೆಲದ ಮೇಲೆ ಅನುಷ್ಠಾನಕ್ಕೆ ತರಬೇಕು ಎಂದು ಲಖನೌದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.