ಆರ್.ಬಿ.ಐ ಕೆಲ ದಿನಗಳ ಹಿಂದಷ್ಟೇ 2000 ಮುಖ ಬೆಲೆ ನೋಟಗಳನ್ನ ಹಿಂಪಡೆದಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಯನ್ನ ನಂಬಿ ಜನರೇ 10 ರೂಪಾಯಿ ನಾಣ್ಯಗಳನ್ನ ಬ್ಯಾನ್ ಮಾಡಿದ್ದಾರೆ. ಹತ್ತು ರೂಪಾಯಿ ನಾಣ್ಯಗಳು ಮಾರುಕಟ್ಟೆಗೆ ಚಲಾವಣೆಗೆ ಬರದೆ ಕೋಟಿಗಟ್ಟಲೇ ನಾಣ್ಯಗಳು ಬ್ಯಾಂಕ್ನಲ್ಲಿ ಕೊಳೆಯುತ್ತಿವೆ.

ಉತ್ತರ ಕನ್ನಡ
ಉತ್ತರ ಕನ್ನಡ: ಆರ್.ಬಿ.ಐ(RBI)2000 ರೂಪಾಯಿ ನೋಟನ್ನು ಹಿಂಪಡೆಯುತಿದ್ದಂತೆ ಜಿಲ್ಲೆಯಲ್ಲಿ 10 ರೂಪಾಯಿ(Ten Rupees)ನಾಣ್ಯವನ್ನು ಪಡೆದುಕೊಳ್ಳಲು ಜನ ಹಿಂದೇಟು ಹಾಕುತಿದ್ದು, ಜನರೇ ಸ್ವಯಂ ಪ್ರೇರಿತವಾಗಿ ಬ್ಯಾನ್ ಮಾಡಿದ್ದಾರೆ. ಹತ್ತು ರೂಪಾಯಿ ನಾಣ್ಯ ಚಲಾವಣೆ ರದ್ದಾಗಿದೆ ಎಂಬ ವದಂತಿಗಳಿಂದ ವರ್ತಕರು ಹಾಗೂ ಗ್ರಾಹಕರು ವಹಿವಾಟು ನೆಡೆಸುವಾಗ ನಾಣ್ಯವನ್ನು ಪಡೆದುಕೊಳ್ಳುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿ ವರ್ತಕರ ಹಾಗೂ ಗ್ರಾಹಕರು ಬ್ಯಾಂಕ್ಗಳಿಗೆ ಹತ್ತು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಹೋದ್ರೆ, ಕೆಲ ಬ್ಯಾಂಕ್ನಲ್ಲಿ ತೆಗೆದುಕೊಳ್ಳಲು ನಿರಾಕರಿಸುತಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಹಬ್ಬಿದ ಗಾಳಿ ಸುದ್ದಿಗಳು ನಿಜವೆಂದು ನಂಬಿದ ಜನ 10 ರೂಪಾಯಿ ನಾಣ್ಯ ತೆಗೆದುಕೊಳ್ಳುತ್ತಿಲ್ಲ. ಇನ್ನು ತಮ್ಮ ಬಳಿ ಇರುವ ನಾಣ್ಯಗಳನ್ನು ವರ್ತಕರು ಚಲಾವಣೆ ಮಾಡಲು ಸಹ ಪರದಾಡುತಿದ್ದು, ಪಡೆದುಕೊಂಡ ಲಕ್ಷಾಂತರ ರೂಪಾಯಿ ನಾಣ್ಯಗಳು ಉಳಿಯುವಂತಾಗಿದೆ.
ಇನ್ನು ಹತ್ತು ರುಪಾಯಿ ನಾಣ್ಯಗಳು ಇದೀಗ ಜಿಲ್ಲೆಯ ವಿವಿಧ ಬ್ಯಾಂಕ್ನಲ್ಲಿ ಸಹ 5 ಕೋಟಿಗೂ ಹೆಚ್ಚು ಉಳಿದುಹೋಗಿವೆ. ಹೇಗಾದರೂ ಮಾಡಿ ನಾಣ್ಯಗಳನ್ನ ಮಾರುಕಟ್ಟೆಯಲ್ಲಿ ಚಲಾವಣೆಗೆ ತರಬೇಕು, ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನ ಹೋಗಲಾಡಿಸಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನು ಜನರು ನಾಣ್ಯವನ್ನು ಬದಾಲಾಯಿಸಿಕೊಂಡು ನೋಟುಗಳನ್ನು ಪಡೆಯಲು ಬಂದಾಗ ಬ್ಯಾಂಕ್ ಸಹ ನಿರಾಕರಿಸುತ್ತಿದೆ. ಕಾರಣ ನಾಣ್ಯ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರಲೆಂದು.