Uttarakhand Flood: ಭಾರತ- ನೇಪಾಳ ಗಡಿಯಲ್ಲಿ ಮೇಘಸ್ಪೋಟ; ಪ್ರವಾಹಕ್ಕೆ ಸಿಲುಕಿ ಓರ್ವ ಸಾವು, 30 ಮನೆಗಳು ನಾಶ | Uttarakhand Cloudburst near India Nepal border one dies and 30 homes destroyed Kannada News


ಮೇಘಸ್ಫೋಟದಿಂದ ಧಾರ್ಚುಲ ಮಲ್ಲಿ ಮಾರುಕಟ್ಟೆಗೂ ಹಾನಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಈ ನಡುವೆ ತಲ್ಲ ಗ್ರಾಮದಲ್ಲಿ ಜಲಾವೃತವಾಗಿತ್ತು. ಪಿಥೋರಗಢದಲ್ಲಿ ಕಾಳಿ ನದಿ ಅಪಾಯದ ಮಿತಿ ಮೀರಿದೆ.

Uttarakhand Flood: ಭಾರತ- ನೇಪಾಳ ಗಡಿಯಲ್ಲಿ ಮೇಘಸ್ಪೋಟ; ಪ್ರವಾಹಕ್ಕೆ ಸಿಲುಕಿ ಓರ್ವ ಸಾವು, 30 ಮನೆಗಳು ನಾಶ

ಉತ್ತರಾಖಂಡದಲ್ಲಿ ಪ್ರವಾಹ

ಉತ್ತರಾಖಂಡ: ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಭಾರತ (India) ಮತ್ತು ನೇಪಾಳದ (Nepal) ಗಡಿಗೆ ಸಮೀಪವಿರುವ ಲಾಸ್ಕೊ ನದಿಯಲ್ಲಿ ನಿನ್ನೆ ಮಧ್ಯರಾತ್ರಿ ಮೇಘಸ್ಫೋಟ (Cloudburst) ಸಂಭವಿಸಿದೆ. ಈ ಪ್ರವಾಹದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಮೋಡ ಸ್ಫೋಟದ ಘಟನೆಯಲ್ಲಿ ಸುಮಾರು 30 ಮನೆಗಳು ನಾಶವಾಗಿವೆ ಮತ್ತು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆಶಿಶ್ ಚೌಹಾಣ್ ಎಎನ್‌ಐಗೆ ತಿಳಿಸಿದ್ದಾರೆ.

ಮೇಘಸ್ಫೋಟದಿಂದ ಧಾರ್ಚುಲ ಮಲ್ಲಿ ಮಾರುಕಟ್ಟೆಗೂ ಹಾನಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಈ ನಡುವೆ ತಲ್ಲ ಗ್ರಾಮದಲ್ಲಿ ಜಲಾವೃತವಾಗಿತ್ತು. ಪಿಥೋರಗಢದಲ್ಲಿ ಕಾಳಿ ನದಿ ಅಪಾಯದ ಮಿತಿ ಮೀರಿದೆ. ಪ್ರವಾಹದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿದ್ದು, ಕೆಲವು ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಇಂದು ಬೆಳಿಗ್ಗೆ ಕಾಳಿ ನದಿಯಲ್ಲಿ ಬಲವಾದ ಪ್ರವಾಹ ಉಂಟಾಗಿ ಕಟ್ಟಡವೊಂದು ಕುಸಿದು ನೀರಿನಲ್ಲಿ ಮುಳುಗಿದೆ.

TV9 Kannada


Leave a Reply

Your email address will not be published.