#ValentineDaySpecial ಮಂತ್ರ ಮುಗ್ಧಗೊಳಿಸುತ್ತೆ ಮುದ್ದಾದ ಹಿಮ ಕರಡಿಯ ಈ ಸ್ವಾರಸ್ಯಕರ ಪ್ರೀತಿ..!


ಸ್ನೇಹ, ಪ್ರೀತಿ ಎಂಬುದು ಅದ್ಭುತ ಸಂಬಂಧ. ಬೆಲೆಯೇ ಕಟ್ಟಲಾಗದ ಸಂಬಂಧವದು. ಅದು ಎರಡು ಹೃದಯಗಳ ನಡುವಿನ ಬಂಧನ. ಪ್ರೀತಿಯನ್ನು ಬಯಸದೇ ಇರುವ ಜೀವಿಯನ್ನು ಈ ಲೋಕದಲ್ಲಿ ಕಾಣಲು ಸಾಧ್ಯನಾ.? ಅದರಲ್ಲೂ ಮೂಕ ಪ್ರಾಣಿಗಳ ಸ್ನೇಹ, ಪ್ರೀತಿಯನ್ನು ನೋಡುವುದೇ ಒಂದು ಸುಂದರ ಕಾವ್ಯದಂತಹ ದೃಶ್ಯ.

ಮುದ್ದಾದ ಹಿಮ ಕರಡಿಯ ಸ್ವಾರಸ್ಯಕರ ಪ್ರೀತಿ
ವಾವ್.. ನೋಡೋಕೆ ಅದೆಷ್ಟೋ ಸುಂದರ. ಈ ಮುದ್ದು ಮುಖ. ಎಂಥಹವನ್ನ ಸೂಜಿಗಲ್ಲಿನಂತೆ ಸೆಳೆಯುವ ಸೌಂದರ್ಯ. ಹಿಮ ಕರಡಿಗಳು ನೋಡೋಕೆ ಎಷ್ಟು ಬ್ಯೂಟಿಫುಲ್ಲೋ ಅಷ್ಟೇ ಡೇಂಜರಸ್ ಕೂಡ. ಮುದ್ದಾಗಿರುವ ಇವುಗಳು ಬಹಳ ಆಕ್ರಮಣಕಾರಿ. ಈ ಹಿಮ ಕರಡಿಗಳು ತೀವ್ರ ಹಿಮಾಚ್ಛಾದಿತವಾಗಿರುವ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಹಿಮಕರಡಿಗಳ ಸಂತಾನೋತ್ಪತ್ತಿ ಪ್ರಮಾಣ ತೀರಾ ಕಡಿಮೆ.

ಚಳಿಗಾಲದ ಮಧ್ಯ ಅವಧಿಯಲ್ಲಿ ಹಿಮಕರಡಿಗಳು ಒಂದು ಅಥವಾ ಎರಡು ಮರಿಗಳಿಗೆ ಮಾತ್ರ ಜನ್ಮ ನೀಡುತ್ತವೆ. ಈ ಮರಿಗಳು ತಾಯಿ ಮಡಿಲಲ್ಲಿ ಇರುವುದು ಕೇವಲ ಎರಡು ವರ್ಷ. ಹೆಣ್ಣು ಕರಡಿಗಳು ಪ್ರತಿ ಮೂರು ವರ್ಷಕ್ಕೆ ಒಮ್ಮೆ ಮಾತ್ರ ಗರ್ಭಧರಿಸುತ್ತವೆ. ಹಾಗೆಯೇ ಇವು ಹುಟ್ಟಿದ ಐದಾರು ವರ್ಷಗಳವರೆಗೆ ಸಂತಾನೋತ್ಪತ್ತಿಯ ಸಾಮರ್ಥ್ಯ ಪಡೆದಿರುವುದಿಲ್ಲ. ಅಲ್ಲವು ತನ್ನ ಮರಿಗಳಿಗೆ ಜನ್ಮ ನೀಡುವ ತಯಾರಿಗಾಗಿ ಬರೋಬ್ಬರಿ 9 ತಿಂಗಳು ಗುಹೆಯಲ್ಲಿ ಕಳೆಯುತ್ತೆ. ತನ್ನ ಮರಿಗಳಿಗೆ ಜನ್ಮ ನೀಡುವ ಸಲುವಾಗಿ ಕೆಲವೊಮ್ಮೆ ಈ ಮುದ್ದಾದ ಹಿಮಕರಡಿಗಳು ಆಹಾರವನ್ನ ಕೂಡ ಬಿಡುತ್ತಂತೆ.

News First Live Kannada


Leave a Reply

Your email address will not be published.