#ValentineDaySpecial ಸಂಗಾತಿ ವಿಷಯದಲ್ಲಿ ‘ನೋ ಕಾಂಪ್ರಮೈಸ್’ ಎನ್ನುವ ಆಫ್ರಿಕನ್​ ಆನೆಗಳ ಪ್ರೀತಿಗೆ ಯಾರು ಸರಿಸಾಟಿ..?


ಆನೆ ಅಂದ್ರೆ ಸಾಕು, ಎಲ್ಲರಿಗೂ ಥಟ್ ಅಂತಾ ನೆನಪಾಗೋದಿಷ್ಟೇ.. ದೊಡ್ಡ ಗಾತ್ರದ ದೇಹ.. ರಾಜಗಾಂಭೀರ್ಯದ ನಡಿಗೆ.. ಗಜಪಡೆ ನೋಡಲು ಧೈತ್ಯವಾಗಿದ್ರೂ ಅವುಗಳು ತುಂಬಾ ಮೃದು. . ಆನೆಗಳ ಆಪ್ತತೆ, ಪ್ರೀತಿ ತೋರುವ ಗುಣ, ಹೃದಯ ವೈಶಾಲ್ಯತೆಯ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರಬಹುದು. ಸೋಶಿಯಲ್ ಮೀಡಿಯಾದಲ್ಲೂ ಆನೆಗಳ ಬದುಕಿನ ಪರಿಚಯ ನೀಡುವಂತಹ ಕೆಲ ವೀಡಿಯೋಗಳು ಆಗೊಮ್ಮೆ ಈಗೋಮ್ಮೆ ವೈರಲ್ ಆಗ್ತಾನೆ ಇರುತ್ತೆ.

ಆದ್ರೆ ಆನೆಗಳು ಮೃದು ಸ್ವಭಾವ ಹೊಂದಿರುತ್ತೆ.. ಅದರಲ್ಲೂ ಆಫ್ರಿಕನ್​ ಆನೆಗಳು ಇನ್ನೂ ಸ್ವಲ್ಪ ವಿಭಿನ್ನ. ಅದು ತನ್ನ ಸಂಗಾತಿಗಾಗಿ ಎಂಥಹ ರಿಸ್ಕ್​ ತೆಗೆದುಕೊಳ್ಳಲು ರೆಡಿ ಇರುತ್ತೆ. ಸಂಗಾತಿ ಇಲ್ಲದಿದ್ರೆ ರೋಧಿಸುತ್ತೆ. ಅದ್ಕೇ ಇತ್ತೀಚಿಗಷ್ಟೇ ದೆಹಲಿಯಲ್ಲಿ ಮೃಗಾಲಯದಲ್ಲಿದ್ದ ಶಂಕರ ಅನ್ನೋ ಆಫ್ರಿಕನ್​ ಆನೆನೇ ಬೆಸ್ಟ್​ ಎಕ್ಸಾಂಪಲ್. ಆನೆ ತನ್ನ ಕುಟುಂಬದ ವಿಷ್ಯಾ ಅಂದಾಗ ಅಂದ್ರೆ ಸಂಗಾತಿ ಅಥವಾ ಮರಿಗಳ ವಿಷ್ಯಾದಲ್ಲಿ ಎಂದಿಗೂ ಕಾಂಪ್ರಮೈಸ್​ ಮಾಡಿಕೊಳ್ಳೋದೆ ಇಲ್ಲ.

ಈ ಸಮಯದಲ್ಲಿ ತನ್ನ ಪ್ರಾಣದ ಹಂಗನ್ನ ತೊರೆದು ಗಜರಾಜನು ರಕ್ಷಣೆಗೆ ನಿಂತು ಬಿಡ್ತಾನೆ. ಅದರಲ್ಲೂ 20 ರಿಂದ 22 ತಿಂಗಳು ಕಾಲ ತನ್ನ ಸಂತತಿಯನ್ನ ಕಾಪಾಡಿಕೊಳ್ಳುತ್ತೆ. ಹೆಣ್ಣು ಆನೆ ಗರ್ಭಾವತಿಯಾದಾಗ ಗಂಡು ಆನೆ ಅದ್ಕೆ ಎಲ್ಲಾ ರೀತಿಯಲ್ಲೂ ರಕ್ಷಣೆ ನೀಡುತ್ತೆ. ಇತರೆ ಪ್ರಾಣಿಗಳು ಅವುಗಳ ಮೇಲೆ ದಾಳಿ ಮಾಡದಂತೆ ರಕ್ಷಣೆಯ ಹೊದಿಕೆ ನೀಡುತ್ತೆ. ಒಂದು ವೇಳೆ ಆನೆ ಮರಿಗೆ ಇತರೆ ಪ್ರಾಣಿಗಳಿಂದ ಏನಾದ್ರು ತೊಂದ್ರೆ ಎದುರಾಗುತ್ತೆ ಅನ್ನೋದು ಗೊತ್ತಾದ್ರೆ ಸಾಕು, ಆನೆಗಳು ತನ್ನ ಪಟಾಲಂ ಸಮೇತ ಸೈನಿಕರಂತೆ ಯುದ್ಧಕ್ಕೆ ನಿಂತು ಬಿಡುತ್ತೆ.

ಇನ್ನೊಂದು ವಿಷಯ ಏನಂದ್ರೆ ಒಂದು ಆನೆಗೆ ತೊಂದ್ರೆ ಆಗಿದೆ ಅನ್ನೋದು ಗೊತ್ತಾದ್ರೆ ಸಾಕು ಸುತ್ತ ಮುತ್ತಲಿರುವ ಎಲ್ಲಾ ಆನೆಗಳು ಒಗ್ಗಟಾಗಿ ಬಿಡುತ್ತೆ. ತನ್ನದೇ ಸೈನ್ಯ ಕಟ್ಟಿಕೊಂಡು ಅಟ್ಯಾಕ್​ ಮಾಡಲು ಮುಂದಾಗುತ್ತೆ. ಆನೆಗಳು, ಆನೆ ಮರಿ ತೀರಿಕೊಂಡಾಗ ಇತರೆ ಆನೆಗಳು ಮೌನಮಾಗಿ ಮಗುವಿನಂತೆ ತನ್ನ ನೋವನ್ನ ಹೊರ ಹಾಕುತ್ತೆ.

News First Live Kannada


Leave a Reply

Your email address will not be published.