Vande Bharat Express: ಗುಜರಾತ್​​ನಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಡಿಕ್ಕಿ ಹೊಡೆದು 54 ವರ್ಷದ ಮಹಿಳೆ ಸಾವು – Vande Bharat Express: Woman dies after being hit by Vande Bharat Express train in Gujarat Kannada News


ಗುಜರಾತ್​ನ ಆನಂದ್ ರೈಲು ನಿಲ್ದಾಣದ ಬಳಿ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂಬ 54 ವರ್ಷದ ಮಹಿಳೆ ಹಳಿ ದಾಟುತ್ತಿದ್ದಾಗ ಅವರ ಮೇಲೆ ರೈಲು ಹಾದುಹೋಗಿದೆ.

Vande Bharat Express: ಗುಜರಾತ್​​ನಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಡಿಕ್ಕಿ ಹೊಡೆದು 54 ವರ್ಷದ ಮಹಿಳೆ ಸಾವು

ವಂದೇ ಭಾರತ್ ಎಕ್ಸ್‌ಪ್ರೆಸ್

ಅಹಮದಾಬಾದ್: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಡಿಕ್ಕಿ ಹೊಡೆದು 54 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಗುಜರಾತ್‌ನ (Gujarat) ಆನಂದ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಸೇವೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಈ ರೀತಿಯ ಅವಘಡ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟ ಮಹಿಳೆಯನ್ನು ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದೆ.

ಗುಜರಾತ್​ನ ಆನಂದ್ ರೈಲು ನಿಲ್ದಾಣದ ಬಳಿ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂಬ 54 ವರ್ಷದ ಮಹಿಳೆ ಹಳಿ ದಾಟುತ್ತಿದ್ದಾಗ ಅವರ ಮೇಲೆ ರೈಲು ಹಾದುಹೋಗಿದೆ. ಅಹಮದಾಬಾದ್‌ನ ನಿವಾಸಿಯಾಗಿದ್ದ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಆನಂದ್‌ನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

TV9 Kannada


Leave a Reply

Your email address will not be published.