Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ, ಇಂಜಿನ್‌ನ ಮುಂಭಾಗಕ್ಕೆ ಹಾನಿ | Vande Bharat Express train collides with herd of buffaloes, front end of engine damaged


ಮುಂಬೈ ಸೆಂಟ್ರಲ್‌ನಿಂದ ಗುರಜತ್‌ನ ಗಾಂಧಿನಗರಕ್ಕೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ರೈಲಿನ ಇಂಜಿನ್‌ನ ಮುಂಭಾಗಕ್ಕೆ ಹಾನಿಯಾಗಿದೆ.

ಮುಂಬೈ: ಮುಂಬೈ ಸೆಂಟ್ರಲ್‌ನಿಂದ ಗುರಜತ್‌ನ ಗಾಂಧಿನಗರಕ್ಕೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್. ವತ್ವಾ ನಿಲ್ದಾಣದಿಂದ ಮಣಿನಗರದ ನಡುವೆ ಬೆಳಿಗ್ಗೆ 11.15 ರ ಸುಮಾರಿಗೆ ರೈಲು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ವತ್ವಾಗೆ ಎಮ್ಮೆಗಳ ಹಿಂಡು ಅಡ್ಡ ಬಂದ ಕಾರಣ ಅಪಘಾತ ಸಂಭವಿಸಿದೆ. ಅಪಘಾತದಿಂದ ಇಂಜಿನ್‌ನ ಮುಂಭಾಗಕ್ಕೆ ಹಾನಿಯಾಗಿದೆ ಎಂದು ಪಶ್ಚಿಮ ರೈಲ್ವೆಯ ಎಸ್‌ಆರ್‌ಒ, ಜೆಕೆ ಜಯಂತ್ ಹೇಳಿದ್ದಾರೆ.

ಮುಂಬೈ-ಗಾಂಧಿನಗರ ವಂದೇ ಭಾರತ್ ಮಾರ್ಗದಲ್ಲಿ 3-4 ಎಮ್ಮೆಗಳು ಏಕಾಏಕಿ ಬಂದಿದ್ದು, ಎಫ್‌ಆರ್‌ಪಿಯ ಮುಂಭಾಗಕ್ಕೆ ಹಾನಿಯಾಗಿದೆ. . ರೈಲಿಗೆ ಮುಂದಕ್ಕೆ ಬಂದ ಎಮ್ಮೆಗಳ ಮೃತದೇಹಗಳನ್ನು ತೆಗೆದ ನಂತರ (8 ನಿಮಿಷಗಳಲ್ಲಿ) ರೈಲು ತನ್ನ ಓಡಾಟವನ್ನು ಮುಂದುವರಿಸಿದೆ.

ಗೈರತ್‌ಪುರ-ವತ್ವಾ ನಿಲ್ದಾಣದ ನಡುವೆ 11:18 ಕ್ಕೆ ಈ ಘಟನೆ ಸಂಭವಿಸಿದೆ. ಎಮ್ಮೆಗಳನ್ನು ಟ್ರ್ಯಾಕ್ ಬಳಿ ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ಸಲಹೆ ನೀಡಲು ರೈಲ್ವೆ ಇಲಾಖೆ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಿಂದ ಧ್ವಜಾರೋಹಣ ಮಾಡಿದ ಕೆಲವೇ ದಿನಗಳಲ್ಲಿ ಈ ಅಪಘಾತ ಸಂಭವಿಸಿದೆ ಮತ್ತು ಪ್ರಧಾನಿ ಕೂಡ ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ್ ನಿಲ್ದಾಣದವರೆಗೆ ಪ್ರಯಾಣಿಸಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.