Vastu Tips: ಈ ಐದು ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಆನಂದ, ಐಶ್ವರ್ಯ ಸಂವೃದ್ಧಿಯಾಗುತ್ತದೆ | Vastu tips planting these 5 plants in house brings happiness and prosperity


Vastu Tips: ಈ ಐದು ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಆನಂದ, ಐಶ್ವರ್ಯ ಸಂವೃದ್ಧಿಯಾಗುತ್ತದೆ

ಈ ಐದು ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಆನಂದ, ಐಶ್ವರ್ಯ ಸಂವೃದ್ಧಿಯಾಗುತ್ತದೆ

ಬಹುತೇಕ ಮಂದಿ ಮನೆ ಸುತ್ತಮುತ್ತ ಗಿಡ-ಮರಗಳಿರಬೇಕು. ಮನೆಗೊಳಗೆ ಆಕರ್ಷಕ ಗಿಡಗಳನ್ನು ಇಡಬೇಕೆಂದು ಇಷ್ಟಪಡುತ್ತಾರೆ. ಹಾಗಾಗಿ ನಾವಿಂದು ವಾಸ್ತು ಶಾಸ್ತ್ರದ ಪ್ರಕಾರ, ಸಸ್ಯಗಳು ಮನೆಯ ಪರಿಸರವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಜೀವನದಲ್ಲಿ ಸಂತೋಷವನ್ನು ತರುವಂತಹ ಕೆಲವು ಸಸ್ಯಗಳು ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ವಾಸ್ತು ಪ್ರಕಾರ, ಈ ಗಿಡಗಳನ್ನು ಮನೆಯಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿ ಬರುವುದಲ್ಲದೆ ಕುಟುಂಬದ ಸದಸ್ಯರ ಪ್ರಗತಿಯೂ ಆಗುತ್ತದೆ ಎಂಬ ನಂಬಿಕೆಗಳಿವೆ.

ಸಂತೋಷ ಮತ್ತು ಸಮೃದ್ಧಿಗಾಗಿ ಮನೆಯಲ್ಲಿ ನೆಡಬೇಕಾದ 5 ಗಿಡಗಳು

ತುಳಸಿ(Holy Basil): ಈ ಗಿಡ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಾಣಬಹುದು. ತುಳಸಿಯನ್ನು ಹಿಂದೂಗಳು ಪೂಜೆ ಮಾಡುತ್ತಾರೆ. ತುಳಸಿಯ ಸೇವನೆಯು ಆರೋಗ್ಯದ ದೃಷ್ಟಿಯಿಂದ ಮಾತ್ರ ಪ್ರಯೋಜನಕಾರಿಯಲ್ಲ, ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಅದನ್ನು ಸರಿಯಾಗಿ ಪೂಜಿಸಬೇಕು ಇದರಿಂದ ಶುಭ ಫಲ ಸಿಗುತ್ತದೆ. ಅದನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಅದನ್ನು ನೆಡಲು ಸರಿಯಾದ ದಿಕ್ಕು ಪೂರ್ವ ದಿಕ್ಕು ಅಥವಾ ಈಶಾನ್ಯ ಎಂದು ಪರಿಗಣಿಸಲಾಗುತ್ತದೆ.

ಶಮಿ (Shami Plant): ಈ ಸಸ್ಯವು ಶನಿ ದೇವನಿಗೆ ಇಷ್ಟವಾದ ಗಿಡ ಎಂದು ಹೇಳಲಾಗುತ್ತೆ. ಈ ಗಿಡವನ್ನು ಮನೆಯ ಎಡಭಾಗದಲ್ಲಿ ನೆಡಬೇಕು. ಈ ಗಿಡವನ್ನು ನೆಟ್ಟಿ ಪೂಜಿಸುವುದರಿಂದ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆಯಾಗುವುದಿಲ್ಲ ಎಂದು ನಂಬಲಾಗಿದೆ. ವಾಸ್ತು ದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಶನಿ ಗ್ರಹವೂ ಬಲಿಷ್ಠವಾಗುತ್ತದೆ.

ಅರಿಶಿನ (Turmeric Plant): ಈ ಗಿಡವನ್ನು ಮನೆಯಲ್ಲಿ ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ನೆಡಲು ಉತ್ತಮ ಸ್ಥಳವೆಂದರೆ ಉತ್ತರ ಅಥವಾ ಪೂರ್ವ ದಿಕ್ಕು. ಈ ಸಸ್ಯವನ್ನು ಪ್ರತಿದಿನ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ಸಸ್ಯವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.

ಮನಿ ಟ್ರೀ ಅಥವಾ ಕ್ರಾಸ್ಸುಲ(Feng Shui Money Tree): ಇದನ್ನು ಜೇಡ್ ಸಸ್ಯ ಎಂದೂ ಕರೆಯುತ್ತಾರೆ. ಇದನ್ನು ಮನೆಯಲ್ಲಿ ಬೆಳೆಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಇದನ್ನು ಗೇಟ್ ಬಳಿ ಪ್ರವೇಶದ್ವಾರದಲ್ಲಿ ಒಳಭಾಗದಲ್ಲಿ ಬೆಳೆಸಬೇಕು. ಈ ಸಸ್ಯವನ್ನು ಸೂರ್ಯ ಅಥವಾ ನೆರಳಿನಲ್ಲಿ ಎಲ್ಲಿ ಬೇಕಾದರೂ ನೆಡಬಹುದು.

ಬಿದಿರಿನ ಸಸ್ಯಗಳು(Bamboo Plant): ವಾಸ್ತು ಪ್ರಕಾರ ಮನೆಯಲ್ಲಿ ಬಿದಿರಿನ ಗಿಡಗಳನ್ನು ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಚಿಕ್ಕ ಬಿದಿರಿನ ಗಿಡಗಳನ್ನು ಕೆಂಪು ದಾರದಲ್ಲಿ ಕಟ್ಟಿ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಪ್ರಗತಿಯಾಗುತ್ತದೆ.

TV9 Kannada


Leave a Reply

Your email address will not be published. Required fields are marked *