ಮಂಗಳೂರು: ಮೊಬೈಲ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಖದೀಮನನ್ನು ಸಿಂಗಲ್ ಶೇರ್ ರೀತಿಯಲ್ಲಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದ ಘಟನೆ ನಗರದಲ್ಲಿ ನಡೆದಿದೆ.
ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನತ್ತಿ ಹಿಡಿಯುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಈ ಕಾರ್ಯಾಚರಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಪ್ರಕರಣದ ಹಿನ್ನೆಲೆ..
ಮಂಗಳೂರಿನ ನೆಹರು ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯ ಬಳಿ ಇದ್ದ ಮೊಬೈಲ್ ಮತ್ತು ಹಣವನ್ನು ಎಗರಿಸಿ ಕಳ್ಳರು ಪರಾರಿಯಾಗುತ್ತಿದ್ದರು. ತನ್ನ ಹಣ ಮತ್ತು ಮೊಬೈಲ್ ಕಳ್ಳತನವಾಗಿದೆ ಎಂದು ಅರಿತ ಮಲಗಿದ್ದ ವ್ಯಕ್ತಿ ಖದೀಮರನ್ನು ಅಟ್ಟಾಡಿಸಿಕೊಂಡು ಪೊಲೀಸ್ ಕಮಿಷನರ್ ಕಚೇರಿವರೆಗೂ ಓಡಿ ಬಂದಿದ್ದಾನೆ. ಇದನ್ನು ಗಮನಿಸಿದ ಕಮಿಶನರ್ ಆರೋಪಿಗಳನ್ನು ಹಿಡಿಯುವಂತೆ ಸೂಚಿಸಿದ್ದಾರೆ.
ಕಮಿಷನರ್ ಹೆಳುತ್ತಿದ್ದಂತೆ ಕಳ್ಳರ ಬೆನ್ನು ಬಿದ್ದ ಪೊಲೀಸರು ಇಬ್ಬರು ಖದೀಮರ ಪೈಕಿ ಓರ್ವನನ್ನು ಹಿಡಿದಿದ್ದಾರೆ. ಬಳಿಕ ಆತನಿಂದ ಪ್ಲಾನ್ ಮಾಡಿಸಿ ಇನ್ನೊಬ್ಬನನ್ನು ಬಲೆಗೆ ಕೆಡವಲು ಪ್ಲಾನ್ ರೂಪಿಸಿದ ಖಾಕಿ ಪಡೆಯ ವಿಚಾರ ತಿಳಿದು ಆ ಆರೋಪಿ ಮತ್ತೇ ಓಡಲು ಶುರು ಮಾಡಿದ್ದಾನೆ. ಹೀಗೆ ಸುಮಾರು ಒಂದು ಕಿಲೋ ಮೀಟರ್ಗಿಂತಲೂ ಹೆಚ್ಚಿಗೆ ಓಡಿ ಕಳ್ಳನ ಹೆರೆಮುಡಿ ಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಇನ್ನು ಈ ಕಾರ್ಯಾಚರಣೆಯ ಸಂಪೂರ್ಣ ದೃಶ್ಯ ಮೊಬೈಲ್ನಲ್ಲಿ ರೆಕಾರ್ಡ್ ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.