Vikrant Rona Collection: ಗರಗರ ಗಗ್ಗರ; ಎರಡನೇ ದಿನವೂ ಮುಂದುವರಿದ ‘ವಿಕ್ರಾಂತ್ ರೋಣ’ ಅಬ್ಬರ | Vikrant Rona Box office Collection Day 2 Sudeep Movie Manages to get good number on Friday collection


‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬಂತು. ಮೊದಲ ದಿನ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದ್ದು ಬರೋಬ್ಬರಿ 35 ಕೋಟಿ ರೂಪಾಯಿ. ಕರ್ನಾಟಕ ಒಂದರಲ್ಲೇ ಈ ಚಿತ್ರ 16 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ವಿಶೇಷ.

Vikrant Rona Collection: ಗರಗರ ಗಗ್ಗರ; ಎರಡನೇ ದಿನವೂ ಮುಂದುವರಿದ ‘ವಿಕ್ರಾಂತ್ ರೋಣ’ ಅಬ್ಬರ

ಸುದೀಪ್​-ಜಾಕ್ವೆಲಿನ್

ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದ ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಎರಡನೇ ದಿನವಾದ ಶುಕ್ರವಾರ (ಜುಲೈ 29) ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಅಬ್ಬರ ಎರಡನೇ ದಿನವೂ ಮುಂದುವರಿದಿದೆ. ಸುದೀಪ್ (Sudeep) ಅವರು ಈ ಚಿತ್ರದ ಮೂಲಕ ಒಂದು ದೊಡ್ಡ ಗೆಲುವು ಕಂಡಿದ್ದಾರೆ. ‘ರಂಗಿತರಂಗ’ ಚಿತ್ರದ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಅವರು ಮತ್ತೆ ಗೆಲುವಿನ ನಗು ಬೀರಿದ್ದಾರೆ. ಶನಿವಾರ (ಜುಲೈ 30) ಹಾಗೂ ಭಾನುವಾರ (ಜುಲೈ 31) ಚಿತ್ರ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು.

‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬಂತು. ಮೊದಲ ದಿನ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದ್ದು ಬರೋಬ್ಬರಿ 35 ಕೋಟಿ ರೂಪಾಯಿ. ಕರ್ನಾಟಕ ಒಂದರಲ್ಲೇ ಈ ಚಿತ್ರ 16 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ವಿಶೇಷ. ಉಳಿದಂತೆ ಕಾಲಿವುಡ್, ಟಾಲಿವುಡ್​ನಿಂದ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಯಿತು. ಹಿಂದಿ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈಗ ಎರಡನೇ ದಿನದ ಲೆಕ್ಕಾಚಾರ ಸಿಕ್ಕಿದೆ.

ಮೊದಲ ದಿನ ಸಾಕಷ್ಟು ಕಡೆಗಳಲ್ಲಿ ಮುಂಜಾನೆಯಿಂದಲೇ ಫ್ಯಾನ್​ ಶೋ ಇತ್ತು. ಶುಕ್ರವಾರ ನಾರ್ಮಲ್​ ಶೋಗಳು ಮಾತ್ರ ಇದ್ದವು. ಅಲ್ಲದೆ, ಅಂದು ಯಾವುದೇ ರಜೆ ಇರಲಿಲ್ಲ. ಈ ಕಾರಣಕ್ಕೆ ಮೊದಲ ದಿನಕ್ಕಿಂತ ಕೊಂಚ ಕಡಿಮೆ ಗಳಿಕೆ ಆಗಿದೆ. ಈ ಚಿತ್ರ ಶುಕ್ರವಾರ 15 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕೆ 50 ಕೋಟಿ ರೂಪಾಯಿ ದಾಟಿದೆ. ಮೊದಲ ವೀಕೆಂಡ್​ ಕಳೆಯುವುದರೊಳಗೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಅನ್ನೋದು ವಿಶೇಷ.

TV9 Kannada


Leave a Reply

Your email address will not be published. Required fields are marked *